ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಿ

0

Gummata Nagari : Bijapur News

ಸಿಂದಗಿ : ಹಾಲುಮತ ಸಮಾಜದ ಕುಲದೇವರು ಬೀರಣ್ಣದೇವರು, ಮಾಳಿಂಗರಾಯ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವ ಚಿತ್ರಗಳನ್ನು ವಿಕಾರವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಾದ ಪೇಸಬುಕ್ ಹಾಗೂ ವ್ಯಾಟ್ಸ್ ಆಪ್ ಗಳಲ್ಲಿ ಬಿತ್ತರಿಸಿದವರ ವಿರುದ್ದ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ನಂತರ ಪ್ರತಿಭಟನಾಕಾರರು ಶಿರಸ್ತೆದಾರ ಎಸ್.ಐ. ಚವ್ಹಾಣ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸಮಾಜದ ಮುಖಂಡರಾದ ಸೋಮು ಹೂಗಾರ, ಪರಶುರಾಮ ಕಾಂಬಳೆ, ಮಲ್ಲು ಸಾವಳಸಂಗ, ಶ್ರೀಶೈಲ ಕವಲಗಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳು ಒಳ್ಳೆಯದಕ್ಕೆ ಬಳಕೆ ಮಾಡಬೇಕು. ಆದರೆ ಕೆಲ ಕಿಡಗೇಡಿಗಳು ಹಾಲುಮತ ಸಮಾಜದ ಕುಲದೇವರು ಬೀರಣ್ಣದೇವರು, ಮಾಳಿಂಗರಾಯ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವ ಚಿತ್ರಗಳನ್ನು ವಿಕಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದ್ದು ಖಂಡನಿಯವಾಗಿದೆ, ಆದ್ದರಿಂದ ಕೂಡಲೇ ಪೋಲಿಸರು ಚಿತ್ರಗಳನ್ನು ಬಿತ್ತರಿಸಿದ ಕಿಡಗೆಡಿಗಳನ್ನು ಶಿಘ್ರದಲ್ಲಿ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳ ಬೇಕು ಎಂದು ಆಗ್ರಹಿಸಿದರು.

ವಕೀಲ ಎಸ್.ಕೆ. ಪೂಜಾರಿ, ಪ್ರಕಾಶ ಹಿರೆಕುರಬರ, ಶಿವಾನಂದ ಗಣಿಹಾರ, ಸುದರ್ಶನ ಜಿಂಗಾಣಿ, ಎಸ್.ಎಸ್. ಹಳ್ಳಿ, ಮುತ್ತು ಆಲಮೇಲ, ಸಿದ್ದು ಬೀರಗೊಂಡ, ಮಾಳು ವಿಭೂತಿಹಳ್ಳಿ, ಧರೆಪ್ಪ ಮನಗೂಳಿ, ಸಿದ್ದು ಪೂಜಾರಿ, ಲಕ್ಷö್ಮಣ ಹೂಗಾರ, ಕರೆಪ್ಪ ಮನಗೂಳಿ, ಶಿವಕುಮಾರ ಹಿರೆಕುರಬರ, ವಿಕಾಶ ಬೀರಗೊಂಡ, ಅಮೋಗಿ ಹರವಾಳ, ಬೀರಪ್ಪ ಪೂಜಾರಿ, ಮಾಳು ಪೂಜಾರಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಹಾಲುಮತ ಸಮಾಜದ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.