ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡಿ

ಕುರುಬರ ಎಸ್ಟಿ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆ

0

Gummata Nagari : Bijapur News

ಬಿಜಾಪುರ : ಯಾವುದೇ ಹಕ್ಕುಗಳು ತನ್ನಿಂದ ತಾನೇ ಬರುವುದಿಲ್ಲ. ಅದಕ್ಕೆ ಹೋರಾಟ ರಾಜಕೀಯ ಬದ್ಧತೆ, ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಪಡೆಯಬಹುದಾಗಿದೆ ಎಂದು ಮಕಣಾಪೂರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಶಿಕಾರಖಾನೆ ಬಡಾವಣೆಯ ಸಿದ್ರಾಮೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುರುಬರ ಎಸ್ಟಿ ಮಿಸಲಾತಿ ಹೋರಾಟದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಸುಜಾತಾ ಕಳ್ಳೀಮನಿ ಮಾತನಾಡಿ, ರಾಜ್ಯದಲ್ಲಿ ಸಿದ್ರಾಮಯ್ಯನವರು ಮತ್ತು ಈಶ್ವರಪ್ಪನವರು ಒಟ್ಟಾಗಿ ಎಸ್ಟಿ ಮೀಸಲಾತಿ ಹೋರಾಟದ ರೂಪು ರೇಷೆಗಳನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಾಳತ್ವವನ್ನು ವಹಿಸಿಕೊಂಡಿದ್ದಾರೆ. ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ನಮ್ಮ ನಾಯಕರು ನಿಂತಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಎಸ್ಟಿ ಮೀಸಲಾತಿ ಸಮಿತಿಯ ರಾಜ್ಯ ಸಹ ಕಾರ್ಯದರ್ಶಿಯಾದ ರಾಜು ಬಿರಾದಾರ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಜಿಲ್ಲೆಯಿಂದ ಎಲ್ಲ ಜನಪ್ರತಿನಿಧಿಗಳು ಸಂಘ -ಸಂಸ್ಥೆಗಳ ಪ್ರತಿನಿಧಿಗಳು, ಸಮಾಜದ ಮುಖಂಡರ ಸಭೆ ನಡೆಯುತ್ತಿದ್ದು ಕನಕ ಗುರುಪೀಠದ ಪರಮ ಪೂಜ್ಯರು, ಸಮಾಜದ ಎಲ್ಲ ರಾಜಕೀಯ ಮುಖಂಡರುಗಳು ಈ ಸಭೆಯ ಮುಂದಾಳತ್ವ ವಹಿಸಿದ್ದು ಪಕ್ಷಾತೀತವಾಗಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆ ಭಾಗವಹಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ಪ್ರದೇಶದ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿಗಳಾದ ರವಿ ಕಿತ್ತೂರ ಅವರು ಮಾತನಾಡಿ, ಕುರುಬ ಸಮಾಜ ನೂರಾರು ವರ್ಷದಿಂದ ಎಸ್ಟಿ ಮೀಸಲಾತಿ ಪಡೆಯಲಿಕ್ಕೆ ಹೋರಾಟ ನಡೆಸಿದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮತ್ತು ಸಂಘಟನೆಯ ಕೊರತೆಯಿಂದ ಇಲ್ಲಿಯವರೆಗೆ ಎಸ್ಟಿ ಮೀಸಲಾತಿ ಪಡೆಯಲು ವಂಚಿತರಾಗಿದ್ದೇವೆ. ಈಗ ಸದಾವಕಾಶ ಕೂಡಿ ಬಂದಿದ್ದು ರಾಜ್ಯದ ಎಲ್ಲ ಪರಮಪೂಜ್ಯರು ಪಕ್ಷಾತೀತವಾಗಿ ರಾಜಕೀಯ ಮುಖಂಡರು ಒಂದೇ ವೇದಿಕೆಯಲ್ಲಿ ಹೋರಾಟದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಿಂದ ಅಭೂತಪೂರ್ವ ಬೆಂಬಲ ದೊರಕಿದ್ದು, ಜಿಲ್ಲೆಯಲ್ಲಿಯೂ ಪೂಜ್ಯರ ಸಮ್ಮುಖದಲ್ಲಿ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡೋಣ ಎಂದು ಹೇಳಿದರು.

ಈ ಸಭೆಯಲ್ಲಿ ಸಮಾಜದ ಮುಖಂಡರಾದ ಬಿ.ಡಿ.ಪಾಟೀಲ, ಪ್ರದೇಶ ಕುರುಬರ ಸಂಘದ ಸಹಕಾರ್ಯದರ್ಶಿ ರಾಜಶೇಖರ ಕುರಿಯವರ, ನಿರ್ದೇಶಕರಾದ ಕರೆಪ್ಪ ಬಸ್ತಾಳ, ಎಸ್.ಟಿ.ಬಿಂಜಲಬಾವಿ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರಾದ ಸಿದ್ದು ಬೆಳಗಾವಿ, ಎಲ್.ಕೆ.ಬಿರಾದಾರ, ಬಸವರಾಜ ಹೊನವಾಡ, ಮೋಹನ ಮೇಟಿ, ತಾಲೂಕ ಪಂಚಾಯತ ಸದಸ್ಯರಾದ ನಿಂಗಣ್ಣ ಗೊಬ್ಬೂರ, ಕಾಶೀನಾಥ ಪಡದಳ್ಳಿ, ಶಂಕರಲಿಂಗ ಕೆಂಚಗೊಂಡ, ಎ.ಪಿ.ಎಂ.ಸಿ. ಉಪಾಧ್ಯಕ್ಷರಾದ ಕಲ್ಲಪ್ಪ ಇಂಡಿ, ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಪೂಜಾರಿ, ಗ್ರಾ.ಪಂ. ಸದಸ್ಯ ಮಾಳಪ್ಪ ಗುಗದಡ್ಡಿ, ರಾಹುಲ ಔರಂಗಾಬಾದ, ಶಿವಾನಂದ ಹಿರೇಕುರಬರ, ಶಿವಾನಂದ ಹೊನವಾಡ, ಮೋಹನ ದಳವಾಯಿ, ಪ್ರಕಾಶ ಜಾಲಗೇರಿ, ಶಿಲ್ಪಾ ಕುದರಗೊಂಡ, ಸಿದ್ದುಗೌಡನವರ, ಸಂಗಮೇಶ ಓಲೆಕಾರ, ಶಿವಪ್ಪ ಘಂಟಿ, ಲೇಪು ಕೊನ್ನೂರ, ಸುರೇಶ ಕನ್ನೂರ, ಸತೀಶ ಅಡವಿ, ಭೀರಪ್ಪ ಜುಮನಾಳ, ಚಿನ್ನು ಚಿನಗುಂಡಿ, ಶ್ರೀಕಾಂತ ಸಂಗೋಗಿ, ರಾಜು ಕಗ್ಗೋಡ, ಸುರೇಶ ಢಂಬಳ, ರಮೇಶ ಕಾಲೇಬಾಗ, ಸಿದ್ದು ಭಾವಿಕಟ್ಟಿ, ಮಲ್ಲಿಕಾರ್ಜುನ ಹಂಜಗಿ, ಭೀಮಣ್ಣ ಹಳೇಮನಿ, ಕಾಡಸಿದ್ದ ವಕೀಲರು, ಹಣಮಂತ ಬಿದರಿ, ಶ್ರಿಶೈಲ ಕವಲಗಿ, ಅರವಿಂದ ಹೆರಕಲ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವೇದಿಕೆಯ ಮೇಲೆ ಹುಲಜಂತಿಯ ಮಾಳಿಂಗರಾಯ ಮಹಾರಾಜರು, ತಿಕೋಟಾ ತಾ.ಪಂ. ಅಧ್ಯಕ್ಷರಾದ ಪ್ರಭಾವತಿ ನಾಟೀಕಾರ, ಭೀಮಸಿ ಸಂಗೋಗಿ, ಉಪಸ್ಥಿತರಿದ್ದರು.

ಸಭೆಯಲ್ಲಿ ಸಮಾಜದ ಎಲ್ಲ ತಾಲೂಕಿನ ಚುನಾಯಿತ ಪ್ರತಿನಿಧಿಗಳು ಮತ್ತು ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.