ಆಲಮೇಲ : ಮಂಗಳವಾರ ರಾತ್ರಿಯಿಂದ ಸತತ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಒಂದು ವಾರದಿಂದ ಸುರಿದ ಮಳೆ ಹಾಗೂ ಮಂಗಳವಾರ ರಾತ್ರಿ ಗಾಳಿಯೊಂದಿಗೆ ಮತ್ತು ಬುಧವಾರ ದಿನವಿಡಿ ಸುರಿದಭಾರಿ ಮಳೆಗೆ ಸಿಂದಗಿ ತಾಲೂಕಿನ ದೇವಣಗಾಂವ ಭಾಗದ ರೈತರ ಸ್ಥಿತಿ ಅಯೋಮಯವಾಗಿದೆ ಹೂ ಬಿಡುವ ಹಂತದಲ್ಲಿದ್ದ ತೊಗರಿ ಬೆಳೆ ನೀರಲ್ಲಿ ಕೊಳೆಯುತ್ತಿವೆ, ಮೆಣಸಿನಕಾಯಿ ಬೆಳೆ ಕೊಳೆತಿವೆ, ಹತ್ತಿಬೆಳೆ ಕಪ್ಪು ವರ್ಣಕ್ಕೆ ತಿರುಗಿ ಕಾಯಿ ಉದುರುತ್ತಿವೆ, ಕಬ್ಬು ಸಂಪೂರ್ಣ ನೆಲಕಚ್ಚಿದೆ.
ದಿನಪೂರ್ತಿ ಮಳೆ ಸುರಿದಿರುವದರಿಂದ ತಣ್ಣನೆ ಗಾಳಿ ಮೈಕೊರೆಯುವ ಚಳಿಗೆ ಬೆಚ್ಚಿ ಬೀಳುವಂತಾಗಿದೆ, ಅಲ್ಲಲ್ಲಿ ಮನೆಗಳ ಗೋಡೆದಳು ಕುಸಿದಿವೆ, ಮನೆಗಳ ಮೇಲ್ಛಾವಣಿ ಸೋರುತ್ತಿರುವದರಿಂದ ಜನರನ್ನು ಕಂಗಾಲಾಗಿಸಿದೆ.
ಆಲಮೇಲ ಸುತ್ತಲಿನ ದೇವಣಗಾಂವ ಬಮ್ಮನಹಳ್ಳಿ, ಕುಮಸಗಿ, ಮಡ್ನಳ್ಳಿ, ಬ್ಯಾಡಗಿಹಾಳ, ಕುರುಬತಹಳ್ಳಿ, ದೇವರನಾವದಗಿ ಕಡ್ಲೇವಾಡ, ಶಂಬೇವಾಡ, ತಾರಾಪೂರ, ತಾವರಖೇಡ, ಗುಂದಗಿ, ಆಸಂಗಿಹಾಳ, ಚಿಕ್ಕಹವಳಗಿ ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಭೀಮಾನದಿಯಲ್ಲಿ ಕಳೆದ ಎರಡು ದಿನಗಳಲ್ಲಿ ನೀರಿನಮಟ್ಟ ಏರುತ್ತ ಸಾಗುತ್ತಿದ್ದು ಬುಧವಾರ ಬೆಳಿಗ್ಗೆ 6ಕ್ಕೆ 6.ಮೀ. ನೀರು ಹರಿಯುತ್ತಿತ್ತು ಸಂಜೆ 6ಕ್ಕೆ 7.4 ಮೀ.ಗೆ ಏರುತ್ತ ಸಾಗಿದ್ದು ನದೀತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..