ಡಗ್ಸ್ ಬಿಡಿ ಕೊರೊನಾ ತಡೆಗೆ ಶ್ರಮವಹಿಸಿ

ಮಾಧ್ಯಮದವರಿಗೆ ಮಾಜಿ ಸಚಿವ, ಶಾಸಕ ಪಾಟೀಲ್ ಕಿವಿಮಾತು

0

Gummata Nagari : Bijapur News

ಬಿಜಾಪುರ : ಡ್ರಗ್ಸ್ ಆ್ಯಂಡ್ ಸ್ಯಾಂಡಲ್‌ವುಡ್‌ಕ್ಕಿಂತ ಕೊರೊನಾ ವ್ಯಾಪಕವಾಗಿ ಹರಡಿದ್ದು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿಯರಾದ ರಾಣಿಗಿ, ಸಂಜನಾ, ರಿಯಾ ಚಕ್ರವರ್ತಿ ಕುರಿತು ಇಡೀ ದಿನ ಸುದ್ದಿ ಮಾಡದೇ ಸುದ್ದಿಗೆ ತಕ್ಕ ಹಾಗೇ ಮಾಧ್ಯಮದವರು ಮಹತ್ವ ನೀಡಬೇಕು. ಇಡೀ ದಿನ ಒಂದೇ ನ್ಯೂಸ್‌ಗೆ ಬೆನ್ನು ಹತ್ತಬಾರದು ಎಂದು ಪಾಟೀಲ್ ಮಾಧ್ಯಮದವರಿಗೆ ಕಿವಿಮಾತು ಹೇಳಿದರು.

ದೇಶದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ, ಅದನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಜಿಡಿಪಿ ಪಾತಾಳಕ್ಕೆ ಕುಸಿದು ಹೋಗಿದೆ. -23%ಗೆ ಕುಸಿದಿದೆ. ಭಾರತ ಚೀನಾ ಗಡಿಭಾಗದಲ್ಲಿ ಸಂಘರ್ಷ ನಡೆದಿದ್ದು ಇವೆಲ್ಲಕ್ಕಿಂತ ಮಾಧ್ಯಮದವರಿಗೆ ಡ್ರಗ್ಸ್ ಕೇಸ್ ಮುಖ್ಯವಾಗಿದೆ ಎಂದು ಹೇಳಿದರು.

ಇನ್ನಾದರೂ ಮಾಧ್ಯಮದವರು ಡ್ರಗ್ಸ್ ಕೇಸ್‌ಗೆ ಒತ್ತು ನೀಡದೇ ಜಿಡಿಪಿ, ಗಡಿ ಭಾಗದ ಸಂಘರ್ಷ, ಕೊರೊನಾ ಬಗ್ಗೆ ಹೆಚ್ಚು ಫೋಕಸ್ ಮಾಡುವಂತೆ ಪಾಟೀಲ್ ಮನವಿ ಮಾಡಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.