ಕೃಷಿ ಮಹಾವಿದ್ಯಾಲಯ ಅಭಿವೃದ್ಧಿಗೆ ಶ್ರಮಿಸಿ

0

Gummata Nagari : Bijapur News

ಬಿಜಾಪುರ : ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ ನೂತನವಾಗಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಪಿ. ಮಲ್ಲೇಶ ಅವರನ್ನು ನಗರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳಿಂದ ಬುಧವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ. ಮಲ್ಲೇಶ, ಹಿರಿಯರ ಆಶೀರ್ವಾದದಿಂದ ನಾನು ಸದಸ್ಯನಾಗಿ ರಾಜ್ಯಪಾಲರಿಂದ ನೇಮಕವಾಗಿದ್ದು ನನ್ನ ಅವಧಿಯಲ್ಲಿ ವಿಶ್ವವಿದ್ಯಾಲಯ ಅದರಲ್ಲೂ ಬಿಜಾಪುರ ಕೃಷಿ ಕ್ಯಾಂಪಸ ಅಭಿವೃದ್ದಿಗೆ ಹಾಗೂ ರೈತರ ಏಳ್ಗೆಗೆ ಹಗಲಿರುಳೂ ಶ್ರಮಿಸುವೆ ಎಂದರು.

ಅಧಿಕಾರೇತರ ಸದಸ್ಯರಾಗಿ ಆಯ್ಕೆಯಾದ ಡೀನ್ ಡಾ. ಎಸ್. ಬಿ. ಕಲಘಟಗಿ ಮಾತನಾಡಿ, ಬಿಜಾಪುರ ಕೃಷಿ ಕಾಲೇಜಿಗೆ ನೀರಿನ ಸಮಸ್ಯೆ ಹಾಗೂ ವಿದ್ಯಾರ್ಥಿನಿಲಯ ಹಾಗೂ ರೈತರ ವಸತಿ ಗೃಹದ ಅವಶ್ಯಕತೆಯಿದ್ದು, ಈ ಅವದಿಯಲ್ಲಿ ಮಲ್ಲೇಶ ಅವರ ಸಹಕಾರದಿಂದ ಆ ಕಾರ್ಯ ಮಾಡುವದಾಗಿ ತಿಳಿಸಿದರು.

ವೇದಿಕೆಯಲ್ಲಿ ಮಲ್ಲೇಶ ಅವರ ತಂದೆ ಹಾಗೂ ಸಮಾಜ ಸೇವಕ ಪೀರಪ್ಪ ನಡುವಿನಮನಿ ತಾಯಿ ಬಸಮ್ಮ ಹಾಗೂ ಸಹೋದರರಾದ ರಂಜಿತ್ ಪಿ., ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಗುಗ್ಗರಿ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಸಂಘಟನೆ ಪದಾಧಿಕಾರಿಗಳಾದ ಎಸ್. ಎಚ್. ಗೋಟ್ಯಾಳ, ಹಣಮಂತ ನಾಯಕ್, ತುಕಾರಾಮ ಚಲವಾದಿ, ಮಹಾದೇವ ಸಾರವಾಡ, ಮಲ್ಲಪ್ಪ ಕಗ್ಗೋಡ, ಯಲ್ಲಪ್ಪ ಉತ್ನಾಳ, ಆರ್. ಬಿ. ಜೊಳ್ಳಿ, ಎಸ್. ವಿ. ನಾಡಗೌಡ, ಶ್ರೀನಿವಾಸಲು, ಎ. ಪಿ. ಬಿರಾದಾರ, ಶ್ರೀಕಾಂತ ಚವ್ಹಾಣ, ಅಶೋಕ ಸಜ್ಜನ, ವಿದ್ಯಾವತಿ ಯಡಹಳ್ಳಿ ಸೇರಿದಂತೆ ಪ್ರಾದ್ಯಾಪಕರು, ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.