ರಾಜ್ಯ ಹೆದ್ದಾರಿಯೋ, ಹೊಲದ ಗದ್ದೆಯೋ

ಶಿರಾಡೋನ – ಲಿಂಗಸೂರ ರಾಜ್ಯ ಹೆದ್ದಾರಿ ಪ್ರಯಾಣ ಪ್ರಯಾಸ

0

Gummata Nagari : Bijapur News

ತಾಂಬಾ : ಶಿರಾಡೋನ – ಲಿಂಗಸೂರ ರಾಜ್ಯಹೆದ್ದಾರಿ ಪ್ರಯಾಣ ಪ್ರಯಾಸವಾಗಿದೆ. ಮಳೆಯಿಂದಾಗಿ ಶಿರಾಡೋಣದಿಂದ ಲಿಂಗಸೂರು ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳಿಂದ ವಾಹನ ಸವಾರರು ಎದ್ದು-ಬಿದ್ದು ಸಂಚರಿಸುವಂತಾಗಿದೆ.

ಇಂಡಿ ತಾಂಬಾ, ದೇವರಹಿಪ್ಪರಗಿ, ತಾಳಿಕೋಟೆ ಮಾರ್ಗವಾಗಿ ಹೋಗುವ ಹೆದ್ದಾರಿ ಇದಾಗಿದ್ದು, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ಮಧ್ಯದಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ತಾಂಬಾ ಗ್ರಾಮದ್ದಾಗಿದೆ. ಇನ್ನು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಗ್ರಾಮಸ್ಥರು ಮನವಿಯನ್ನು ಮಾಡಿಕೊಂಡಿದ್ದರು ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನು ಹೆದ್ದಾರಿಯಲ್ಲಿನ ತೆಗ್ಗು ಗುಂಡಿಗಳಲ್ಲಿ ಮಳೆಯ ನೀರು ನಿಂತು ಇದು ರಾಜ್ಯ ಹೆದ್ದಾರಿಯೋ ಹೊಲದ ಗದ್ದೆಯೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ರಾಜ್ಯ ಹೆದ್ದಾರಿ ಇಷ್ಟು ಹದಗೆಟ್ಟಿದ್ದರು ಇತ್ತಕಡೆ ಗಮನಹರಿಸಿದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಶಿರಾಡೋಣ ದಿಂದ ಲಿಂಗಸೂರ ಮುಖ್ಯ ಹೆದ್ದಾರಿಯ ರಸ್ತೆ ಇದ್ದಾಗಿದ್ದು ಇದರ ಮದ್ಯ ನಮ್ಮ ತಾಂಬಾ ಗ್ರಾಮವು ಸಿಂದಗಿ ಮತಕ್ಷೇತ್ರದಲ್ಲಿ ಸುಮಾರು 25000 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದ್ದು. ಸಿಂದಗಿ ಮತ್ತು ಇಂಡಿ ತಾಲೂಕಾ ಆಡಳಿತದ ಮದ್ಯೆ ಸಿಲುಕಿ ಮಲತಾಯಿ ಧೋರಣೆ ಅನುಭವಿಸುವ ಸ್ಥಿತಿ ನಮ್ಮ ಗ್ರಾಮದಾಗಿದೆ. ಹಲವು ವರ್ಷದಿಂದ ಇಂಡಿ ಮುಖ್ಯ ರಸ್ತೆ ತಾಂಬಾ ದಿಂದ ಮಳ್ಳಿ ಹಳ್ಳತನ್ನಕ ಸುಮಾರು 3ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ, ಮೊನ್ನೆ ನಡೆದ ನೈಜ ಘಟನೆ ಮೋಟಾರ್ ಸೈಕಲನಲ್ಲಿ ಬರುತ್ತಿದ್ದ ಯುವಕ ಮತ್ತೆ ಆತನ ತಾಯಿ ಇಬ್ಬರು ಕಾನೋಜಿ ಅವರ ಹೊಲದ ಹತ್ತಿರ ಬಿದ್ದು ಕೈಗೆ ಗಾಯವಾಯಿತು, ಇಂತಹಾ ಸನ್ನಿವೇಶಗಳು ಪ್ರತಿದಿನ ಸಾಮಾನ್ಯವಾಗಿದೆ. ಈ ಎಲ್ಲವುದಕ್ಕೆ ನೇರವಾಗಿ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಸಂಬಂದಪಟ್ಟ ಚುನಾಯಿತ ಜನಪ್ರತಿನಿಧಿಗಳು ನೇರ ಕಾರಣ ಆಗುತ್ತಾರೆ ಕೋಡಲೇ ಇತ್ತ ಗಮನ ಹರಿಸಿ ರಸ್ತೆ ಸುಧಾರಣೆ ಮಾಡಬೇಕು ಇಲ್ಲದಿದ್ದರೆ ಕರವೇ ವತಿಯಿಂದ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಾಂಬಾ ಕರವೇ ಗ್ರಾಮ ಘಟಕ ಅಧ್ಯಕ್ಷ ಶಿವರಾಜ ಕೆಂಗನಾಳ ಎಚ್ಚರಿಕೆ ನೀಡಿದ್ದಾರೆ.

ರಸ್ತೆಯು ಹದಗೆಟ್ಟು ಹೋಗಿದ್ದರು ಅಧಿಕಾರಿಗಳು ನೋಡಿ ನೋಡಲಾರದ ಹಾಗೆ ಹೋಗುತ್ತಾರೆ ಇಂಡಿಯಿಂದ ಬರುವುದು ಅಷ್ಟೇ ಮಳ್ಳಿ ಹಳ್ಳದಿಂದ ತಾಂಬಾಕ್ಕೆ ಹೋಗುವುದು ಅಷ್ಟೇ 2ಕೀಮಿ ಹೋಗುವತ್ತನಕ ಅಪ್ಪ ಅಮ್ಮ ನೆನಪು ಆಗುಹಾಗೆ ರಸ್ತೆ ಹಾಳಾಗಿದೆ ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ರಸ್ತೆ ಪಕ್ಕದಲ್ಲಿಯೇ ಇರುವ ಹೊಲದ ಮಾಲಿಕ ಮುಸ್ತಾಕ ಧಡೇದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಅಲ್ಲಾಬಕ್ಷ ಗೋರೆ (ಧಡೇದ)

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.