ಖೊಟ್ಟಿ ದಾಖಲೆ ನೀಡಿ ಎಸ್ಟಿ ಪ್ರಮಾಣ ಪತ್ರ: ಕ್ರಮಕ್ಕೆ ಆಗ್ರಹ

0

Gummata Nagari : Bijapur News

ಬಸವನಬಾಗೇವಾಡಿ : ಖೊಟ್ಟಿ ದಾಖಲೆ ನೀಡಿ ಎಸ್‌ಟಿ ಪ್ರಮಾಣ ಪತ್ರ ಪಡೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಮಹರ್ಷಿ ವಾಲ್ಮೀಕಿ ಅವರು ಭಾವಚಿತ್ರವನ್ನು ಅಶ್ಲೀಲವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯಕರ್ತರು ತಹಶೀಲ್ದಾರ ಎಂ.ಎನ್.ಬಳಗಾರ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ತಾಲೂಕಿನ ಹುಣಶ್ಯಾಳ ಪಿಬಿ, ಸಂಕನಾಳ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಸಮುದಾಯದವರು ಕೊಟ್ಟಿ ದಾಖಲೆ ನೀಡಿ ಎಸ್‌ಟಿ ಪ್ರಮಾಣ ಪತ್ರ ಪಡೆದಿರುತ್ತಾರೆ ಇದರಿಂದ ಮೂಲ ವಾಲ್ಮೀಕಿ ಬೇಡರ, ನಾಯಕ ಸಮುದಾಯದ ಜನಾಂಗದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ ಕೂಡಲೇ ಜಿಲ್ಲಾಧಿಕಾರಿಗಳು ಅಂತಹ ಅಧಿಕಾರಿಗಳ ಹಾಗೂ ಖೊಟ್ಟಿ ಪ್ರಮಾಣ ಪತ್ರ ಪಡೆದವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು, ಮೂಲ ವಾಲ್ಮೀಕಿ ಬೇಡರ, ನಾಯಕ ಸಮುದಾಯದ ಜನಾಂಗದವರಿಗಾದ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕೀಡಿಗೆಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕಾ ಅಧ್ಯಕ್ಷ ಪ್ರಕಾಶ ಬಿರಾದಾರ, ಸಿದ್ದು ಮೇಟಿ, ರವಿ ನಾಯ್ಕೊಡಿ, ಸದಾಶಿವ ಕಡ್ಲೇವಾಡ, ಸುರೇಶ ಮೊಕಾಶಿ, ಬಸನಗೌಡ ಪಾಟೀಲ, ಪರಶುರಾಮ ಕೋಳುರ, ಉಚ್ಚಯು ಮುತ್ಯಾ ನಗಾರಾಳ, ಬಸಪ್ಪಾ ಚಲವಾದಿ, ಸಿದ್ದು ಬಿರಾದಾರ, ಮಾರುತಿ ಬೆನಕನ್ನಳ್ಳಿ, ಅನಿಲ ಯಲಗೊಂಡ, ಶಿವು ಕುರಿ, ಮುತ್ತು ಅಂಗಡಗೇರಿ, ಸೇರಿದಂತೆ ಮುಂತಾದವರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.