ಉದ್ಯಾನ ಉದ್ಘಾಟಿಸಿದ ಎಸ್ಪಿ ಅನುಪಮ

0

Gummata Nagari

ಬಸವನಬಾಗೇವಾಡಿ : ಸಮಯ ಸಿಕ್ಕಾಗ ಮಕ್ಕಳನ್ನು ಉದ್ಯಾನವನಗಳಿಗೆ ಕರೆತಂದು ಆಟವಾಡಲು ಬೀಡಬೇಕು ಇದರಿಂದ ಮಕ್ಕಳು ಸದೃಢ ಆರೋಗ್ಯ ಪಡೆಯುವದರೊಂದಿಗೆ ಕ್ರೀಯಾಶೀಲರಾಗಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಹಿಂಬಾಗದ ಕ್ವಾಟರ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಉದ್ಯಾನವನ ಹಾಗೂ ನವೀಕರಣಗೊಂಡಿರುವ ಡಿವೈಎಸ್‌ಪಿ ಕಚೇರಿಯನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.

ಮಕ್ಕಳನ್ನು ಆನ್‌ಲೈನ್ ಕ್ಲಾಸ್ ಹೊರತುಪಡಿಸಿ ಮೊಬೈಲನಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಅಲ್ಲದೆ ಪ್ರತಿಯೊಬ್ಬರು ದಿನದ 24 ಗಂಟೆ ಮೋಬೈಲ್‌ನಲ್ಲಿ ಕಾಲ ಕಳಿಯುವುದನ್ನು ಬಿಟ್ಟು ಇಂತಹ ಉದ್ಯಾನವನಗಳಲ್ಲಿ ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಅಂದಾಗ ಉತ್ತಮ ಆರೋಗ್ಯ ಪಡೆಯಲು ಸಹಾಯಕವಾಗುತ್ತದೆ ಇಂದು ನಮ್ಮ ಬಸವನಬಾಗೇವಾಡಿ ಪೊಲೀಸ ಠಾಣೆಯ ಸಿಬ್ಬಂದಿಗಳು ಡಿವೈಎಸ್‌ಪಿ ಶಾಂತವೀರ ಅವರ ಮಾರ್ಗದರ್ಶನದಲ್ಲಿ ಕ್ವಾಟ್ರರ್ಸ ಆವರಣದಲ್ಲಿ ಸುಸ್ಸಜ್ಜಿತವಾದ ಉದ್ಯಾನವನ ನಿರ್ಮಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಸ್ಥಳೀಯ ನಿವಾಸಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಿವೈಎಸ್‌ಪಿ ಶಾಂತವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊಪೇಶನರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪೃತ್ವೀಕ್, ಮುದ್ದೇಬಿಹಾಳ ಸಿಪಿಐ ಆನಂದ ವಾಘ್‌ಮೋಡೆ, ಪಿಎಸ್‌ಐ ಚಂದ್ರಶೇಖರ ಹೆರಕಲ್ ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಸಿಪಿಐ ಸೋಮಶೇಖರ ಜುಟ್ಟಲ ಸ್ವಾಗತಿಸಿ, ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.