ನಾಲತವಾಡ ಪ.ಪಂಗೆ ಮೀಸಲು ಪ್ರಕಟ

0

Gummata Nagari : Bijapur News

ನಾಲತವಾಡ: ನಾಲತವಾಡ ಪಟ್ಟಣದ ಪಂಚಾಯತಗೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆ ಮೀಸಲು ಪ್ರಕಟ.

ಸ್ಥಳಿಯ ಪಟ್ಟಣ ಪಂಚಾಯತ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಗೊಂದಲದ ಹಿನ್ನಲೆಯಲ್ಲಿ ಸರಕಾರ ಮೀಸಲಾತಿ ಪ್ರಕಟಣೆಯಲ್ಲಿ ವಿಳಂಬವಾಗಿತ್ತು ಸರಕಾರ ಗುರುವಾರ ಹೊಸ ಮೀಸಲಾಯಿ ಪಟ್ಟಿ ಬಿಡುಗಡೆ ಮಾಡಿದೆ ಅದರಲ್ಲಿ ನಾಲತವಾಡ ಪಟ್ಟಣ ಪಂಚಾಯತಗೆ ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆ ಮೀಸಲು ಎಂದು ಹೊಸ ಆದೇಶವನ್ನು ಬಿಡುಗಡೆ ಮಾಡಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪ.ಜಾ ಮೀಸಲು ಎಂದು ಪ್ರಕಟವಾದ ನಂತರ ಒಂದು ವಾಋದಲ್ಲಿ ಸರಕಾರ ಸಾಮಾನ್ಯ ಮೀಸಲು ಎಂದು ಬದಲಾವಣೆ ಮಾಡಿದ್ದರು ದಲಿತರಿಗೆ ಅನ್ಯಾಯ ಆಗುತ್ತಿದೆ ಎಂದು ಹೋರಾಟ ಸಹ ಮಾಡಿದೆವು. ಆದರೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪ.ಜಾ ಮೀಸಲು ತಂದು ದಲಿತರ ಪರವಾಗಿ ನಿಂತಿದ್ದಾರೆ. ದಸಂಸ ಮುಖಂಡ ಹಣಮಂತ ಚಲವಾದಿ.

ಹೋರಾಟಕ್ಕೆ ಸಿಕ್ಕ ಜಯ: ನಾಲತವಾಡ ಪಟ್ಟಣ ಪಂಚಾಯತ ಮೊದಲನೇ ಅವಧಿ ಮುಕ್ತಾಯವಾದ ನಂತರ ಎರಡನೇ ಅವಧಿಯ ಅಧ್ಯಕ್ಷ ಸ್ಥಾನದ ಮೀಸಲು ಪ.ಜಾ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆ ಎಂದು ಮೀಸಲಿಸಲಾಗಿತ್ತು ಆದರೆ ಕೆಲವೆ ದಿನಗಳ ನಂತರ ಕಾಂಗ್ರೇಸ್ ಸರಕಾರ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಅ ಎಂದು ಬದಲಾವಣೆ ಮಾಡಿತು ಮೀಸಲಾತಿ ಬದಲಾವಣೆ ಮಾಡುತಿದ್ದಂತೆ ಪ.ಜಾತಿ ಮಹಿಳೆ ಸದಸ್ಯ ಲತಾ ಕಟ್ಟಿಮನಿ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು ನ್ಯಾಯಾಲಯದಲ್ಲಿ ಸುಧಿರ್ಘ ವಿಚಾರಣೆ ನಡೆಸಿದ ನಂತರ ಲತಾ ಕಟ್ಟಿಮನಿ ಅವರ ಪರವಾಗಿ ತೀರ್ಪು ಬಂದಿತ್ತು.

ಸತತ ಎರಡು ವರ್ಷ ಹೋರಾಟ ಮಾಡಿದ ನಂತರ ನನಗೆ ಮೀಸಲಾತಿಯಲ್ಲಿ ಜಯ ಸಿಕ್ಕಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಕೂಡಲೆ ನಡೆಸಲು ಆದೇಶ ನೀಡಬೇಕು. ಸದಸ್ಯೆ ಲತಾ ಕಟ್ಟಿಮನಿ.

ಕಳೆದ ವರ್ಷ ಡಿ.12 ರಂದು ನ್ಯಾಯಾಲಯ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದ ಬಳಿಕವು ಜಿಲ್ಲಾಧಿಕಾರಿಗಳು ಚುನವಾಣೆ ನಡೆಸದೆ ಹೈ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಮೇಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಅರ್ಜಿ ಕೂಡ ಸಲ್ಲಿಸಿದ್ದರು ಸಹ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ವಿಳಂಬ ಮಾಡಿರುವ ಕಾರಣಕ್ಕೆ ಲತಾ ಕಟ್ಟಿಮನಿ ಅವರು ಹೈ ಕೋರ್ಟಗೆ ನ್ಯಾಯಾಂಗ ನಿಂದನೆ ಅರ್ಜಿ ಕೂಡ ಸಲ್ಲಿಸಿದರು ಅರ್ಜಿಯನ್ನು ದಾಖಲು ಮಾಡಿಕೊಂಡ ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ಹಾಗೂ ಚುನಾವಣಾಧಿಕಾರಿಗೆ ತುರ್ತು ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತ್ತು. ಆದರೆ ಸದ್ಯ ಈಗ ಸರಕಾರವೇ ಹೊಸ ಮೀಸಲಾತಿಯಲ್ಲಿ ಪ.ಜಾ ಮಹಿಳೆ ಎಂದು ಆದೇಶ ನೀಡಿರುವ ಹಿನ್ನಲೆಯಲ್ಲಿ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಲತಾ ಪಟ್ಟಿಮನಿ ಅವರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.