ನಿರಾಣಿಗೆ ಶಿಕ್ಷಕರ ಸಂಘದಿಂದ ಮನವಿ

೬-೮ ತರಗತಿ ಬೋಧಿಸುವ ಜಿಪಿಟಿ ಶಿಕ್ಷಕರಿಗೆ ಬಡ್ತಿ ವಿಷಯದಲ್ಲಾದ ಅನ್ಯಾಯವನ್ನು ಸರಿಪಡಿಸಿ

0

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಸಿಂದಗಿ ವತಿಯಿಂದ ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ಪಟ್ಟಣದಲ್ಲಿ ಮನವಿಯನ್ನು ಸಲ್ಲಿಸಿದರು

ಸಿಂದಗಿ: ಸರಕಾರಿ ಪ್ರಾಥಮಿಕಶಾಲೆಯಲ್ಲಿ ೬-೮ ತರಗತಿ ಬೋಧಿಸುವ ಜಿಪಿಟಿ ಶಿಕ್ಷಕರಿಗೆ ಬಡ್ತಿ ವಿಷಯದಲ್ಲಾದ ಅನ್ಯಾಯವನ್ನು ಸರಿಪಡಿಸಿ ಹಾಗೂ ಎನ್‌ಪಿಎಸ್ ರದ್ದುಗೋಳಿಸಿ ನಿಶ್ಚಿತ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೋಳಿಸುವಂತೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಸಿಂದಗಿ ವತಿಯಿಂದ ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ಪಟ್ಟಣದಲ್ಲಿ ಮನವಿಯನ್ನು ಸಲ್ಲಿಸಿದರು.
ಪದವಿಧರ ಶಿಕ್ಷಕರ ಸಂಘ ತಾಲುಕಾ ಘಟಕದ ಅದ್ಯಕ್ಷರಾದ ಸುನೀಲ ಹದರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಆರ್‌ಟಿಇ ಕಾಯ್ದೆ-೨೦೦೯ನಿಯಮಾವಳಿಗಳ ನಿಯಮ ೬೬ದಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬-೮ ನೇ ತರಗತಿಗೆ ವಿಷಯವಾರು ಶಿಕ್ಷಕರನ್ನು ರಾಜ್ಯಾದ್ಯಾಂತ ನೇಮಕ ಮಾಡಲಾಗಿದೆ. ಹೀಗಿರುವಾಗ ೧ ರಿಂದ ೫ ನೇ ತರಗತಿ ಭೋದಿಸುವ ಶಿಕ್ಷಕರನ್ನು ನೇರವಾಗಿ ಪ್ರೌಢಶಾಲಾ ಶಿಕ್ಷಕರ ಗ್ರೇಡ್ ೨ ಹುದ್ದೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಡ್ತಿ ನೀಡಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ. ಈ ವಿಷಯ ಸರಕಾರದ ಗಮನಕ್ಕೆ ತಂದು ೬-೮ ತರಗತಿ ಬೋಧಿಸುವ ಜಿಪಿಟಿ ಶಿಕ್ಷಕರಿಗೆ ನ್ಯಾಯ ಒದಗಿಸ ಬೇಕು ಎಂದು ಮನವಿ ಮಾಡಿಕೊಂಡರು.
ಸಂಘದ ಉಪಧ್ಯಕ್ಷ ಮಹಾಂತೇಶ ಬಾಗೇವಾಡಿ, ಪ್ರಧಾನಕಾರ್ಯದರ್ಶಿ ಗುರುಸ್ವಾಮಿ ಬಿ.ಸಿ., ಇಂದಿರಾಬಾಯಿ ವಾಲಿಕಾರ, ಹಣಮಂತ ಬಿರಾದಾರ, ಸಿದ್ದರಾಮ ಜೋಗುರ, ಶಶಿಧರ ಕೋಟಿ, ಮಂಜುನಾಥ ಹಮನಿ, ಮಹಾಮಿಲ್ ಎ., ಭಾಗಣ್ಣ ಗೋಲಗೇರಿ, ಮಹೇಶ ಹಳೆಮನಿ ಹಾಗೂ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.