ಎನ್ಪಿಎಸ್ ಯೋಜನೆ ರದ್ದತಿಗೆ ಶಿಫಾರಸ್ಸು ಮಾಡಲು ಆಗ್ರಹ

0

Gummata Nagari : Bijapur News

ಇಂಡಿ : 2006 ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ಮಾರಕವಾಗಿರುವ ಎನ್‌ಪಿಎಸ್ ಯೋಜನೆಯನ್ನು ರದ್ದು ಮಾಡಲು ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಮನವಿ ಸಲ್ಲಸಿದರು.

ಸರಕಾರಿ ನೌಕರರ ಸಂಘ, ಶಿಕ್ಷಕರ ಸಂಘ ಎನ್‌ಪಿಎಸ್ ನೌಕರರ ಸಂಘ ಹಾಗೂ ಶಿಕ್ಷಕರ ಸಹಕಾರಿ ಸಂಘದ ನೇತೃತ್ವದಲ್ಲಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಈಗಾಗಲೇ ನೌಕರರ ಪರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ನೌಕರರಿಗೆ ಅನಾನುಕೂಲವಾಗಿರುವ ಯೋಜನೆಯನ್ನು ಕೈ ಬಿಟ್ಟು ಹಳೆಯ ಪಿಂಚಣಿ ವ್ಯವಸ್ಥೆ ಮುಂದುವರೆಸಲು ಆಗ್ರಹಿಸಲಾಗುವುದು ಎಂದು ನೌಕರರಿಗೆ ಭರವಸೆ ನೀಡಿದರು.

ಮನವಿ ಸಲ್ಲಿಸಿ ನೌಕರರ ಪರವಾಗಿ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿಓಸಿಸಿ ಬ್ಯಾಂಕಿನ ನಿರ್ದೇಶಕ ಅಲ್ಲಬಾಕ್ಷ ವಾಲೀಕಾರ ಈಗಾಗಲೇ ಕೆಲವು ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಎನ್‌ಪಿಎಸ್ ರದ್ದಾಗುವಂತೆ ಎಲ್ಲ ಶಾಸಕರು, ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಅದಕ್ಕಾಗಿ ರಾಜ್ಯದ ಎಲ್ಲ ಶಾಸಕರಿಗೆ ಮನವಿ ಪತ್ರ ನೀಡುತ್ತಿದ್ದೇವೆ. ದಯವಿಟ್ಟು ನೌಕರರ ಪರವಾಗಿ ಎನ್‌ಪಿಎಸ್ ರದ್ದಾಗಲು ಶ್ರಮಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಐ ಸಿ ಕುಂಬಾರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ಪಾಟೀಲ, ಶಿಕ್ಷಕರ ಸಂಘದ ಅಧ್ಯಕ್ಷ ವೈ ಟಿ ಪಾಟೀಲ, ಸಹಕಾರಿ ಸಂಘದ ಅಧ್ಯಕ್ಷ ಪರಮಾನಂದ ಚಾಂದಕವಟೆ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ ಎಂ ವಾಲೀಕಾರ, ಅಂಬಣ್ಣ ಸುಣಗಾರ,ಎಸ್ ಡಿ ಪಾಟೀಲ, ಎಂ ಡಿ ಕಂಟಿಕರ, ಎಂ ಟಿ ಮಾಶಾಳ, ಟಿ ಎ ಯಲಗಾರ, ಎಸ್ ವ್ಹಿ ಹರಳಯ್ಯ, ಎಸ್ ಎನ್ ಕೋಳಿ, ಜಿ ಐ ಗೊರನಾಳ, ಮಲ್ಲಿಕಾರ್ಜುನ ನೇದಲಗಿ, ಡಿ ಎಫ್ ಕಣಬಸಗೌಡರು, ಎ ಎಲ್ ವಾಲೀಕಾರ, ಜಿ ಜಿ ಬರಡೋಲ ಸೇರಿದಂತೆ ಶಿಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು ಮತ್ತೀತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.