ಮಳೆಯಿಂದ ಬಿದ್ದ ಮನೆಗಳ ಪುನರ್ ನಿರ್ಮಾಣ ಮಾಡಿ

0

Gummata Nagari : Bijapur News

ತಾಳಿಕೋಟೆ : ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕುಸಿದ ಬಿದ್ದ ಮನೆಗಳ ಪುನರ ನಿರ್ಮಾಣಕ್ಕೆ ಸೂಕ್ತ ಪರಿಹಾರ ನೀಡೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಎರಡು ದಿನಗಳಿಂದ ತಾಲೂಕಿನಾದ್ಯಂತ ಬಾರಿ ಪ್ರಮಾಣದಲ್ಲಿ ಬಿದ್ದ ಮಳೆಯಿಂದಾಗಿ ಮನೆಗಳು ಕುಸಿದು ಬಿದ್ದಿವೆ. ಮನೆಗಳು ಬಿದ್ದಿರುವದರಿಂದ ಬಡವರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ ಕಾಲದಲ್ಲಿ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದ ಬಡವರು ಸದ್ಯ ಸ್ಥಿತಿ ಚಿಂತಾಜನಕವಾಗಿದೆ. ಕುಸಿದು ಬಿದ್ದ ಮನೆಗಳ ಪರಿಹಾರ ಕಲ್ಪಿಸುವದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ. ಹಿಗಾಗಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಬಿರಾದಾರ ಮಾತನಾಡಿ, ಕಳೆದ ಕೇಲವು ದಿನಗಳಿಂದ ಉತ್ತರ ಕರ್ನಾಟಕದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಬಿಜಾಪುರ ಜಿಲ್ಲೆಯಾಧ್ಯಂತ ತಿರ್ವ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಪಟ್ಟಣದಲ್ಲಿ ಸೇರಿದಂತೆ ತಾಲೂಕಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದು ಬಡವರ ಬದುಕು ಬೀದಿ ಪಾಲಾಗಿದೆ. ಯಾವುದೆ ಜೀವ ಹಾನಿಯಾಗಿಲ್ಲದಿದ್ದರೂ ಬಡವರ ಸ್ಥಿತಿ ಹೇಳತೀರದಾಗಿದೆ. ಅವರಿಗೆ ಮತ್ತೆ ಸೂರು ಕಟ್ಟಿಕೊಡುವ ಕಾರ್ಯ ತಾಲೂಕಾಡಳಿತದಿಂದ ಆಗಬೇಕು. ಆದ್ದರಿಂದ ತಕ್ಷಣ ಕಂದಾಯ ಇಲಾಖೆ ಹಾಗೂ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ, ಕುಸಿದ ಮನೆಗಳನ್ನು ಪುನರ ನಿರ್ಮಾಣ ಮಾಡಬೇಕು, ಅಥವಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗೌರವಾಧ್ಯಕ್ಷ ಕುಮಾರಗೌಡ ಪಾಟೀಲ ಮಾತನಾಡಿದರು. ಮನವಿ ಸ್ವಿಕರಿಸಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಸೂಕ್ತ ಪರಿಹಾರ ನೀಡುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ ಮೋಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಜೀರ ಚೋರಗಸ್ತಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಬಸವರಾಜ ಅಗ್ನಿ, ತಾಲೂಕಾಧ್ಯಕ್ಷ ವಿಜಯ ಮೂಕಿಹಾಳ, ನಗರ ಘಟಕದ ಅಧ್ಯಕ್ಷ ಎಂ.ಎಸ್.ಚೋರಗಸ್ತಿ, ಅಜೀಜ ಲಾಹೋರಿ, ಕೆ.ಬಿ.ಪಾಟೀಲ, ಎಸ್.ಎಸ್.ವಾಲಿಕಾರ, ರಾಘು ಮಾನ್ವಿ, ಜೈಬುನ್ನಿಸಾ, ಜಯಶ್ರೀ ಹದಗಲ್ಲ ಸೇರಿದಂತೆ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.