ಮಳೆಯ ಅವಾಂತರ: ನೀರಲ್ಲಿ ಮುಂಗಾರು ಬೆಳೆ

0

Gummata Nagari : Bijapur News

ದೇವರಹಿಪ್ಪರಗಿ : ಮಳೆಯ ಅವಾಂತರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಹಾಳಾಗಿದ್ದು, ಹತ್ತಿ, ಕಬ್ಬು, ನೆಲಕೆ ಬಿದ್ದು ಹಾಳಾಗಿದ್ದು, ತೊಗರಿ ಸೇರಿದಂತೆ ಮುಂಗಾರು ಬೆಳೆಯೆಲ್ಲ ನೀರಲ್ಲಿ ನಿಂತು ಕೊಳೆಯುತ್ತಿದೆ.

ಗುರುವಾರದಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು,ಶುಕ್ರವಾರ ಮಳೆಯ ಪ್ರಮಾಣಮಳೆಯ ಅವಾಂತರ ನೀರಲ್ಲಿ ಮುಂಗಾರು ಬೆಳೆ - Gummata Nagari ಸಂಪೂರ್ಣ ಕಡಿಮೆಯಾದರೂ, ಬುಧವಾರದವರೆಗೆ ಸುರಿದ ಭಾರಿ ಮಳೆಯಿಂದ ಇನ್ನೂ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆ ಕಟ್ಟೆಗಳೆಲ್ಲ ತುಂಬಿ ತುಳುಕುತ್ತಿದ್ದು, ಜಮೀನುಗಳಲ್ಲಿ ನೀರು ಹರಿದು ಬೆಳೆಗಳೆಲ್ಲ ನಾಶವಾಗಿವೆ. ಹತ್ತಿ, ಕಬ್ಬು ಸಂಪೂರ್ಣ ನೆಲಕೆ ಉರುಳಿ ಹಾನಿಯಾಗಿದ್ದರೆ ತೊಗರಿ, ಹೆಸರಿದಂತೆ ಮುಂಗಾರು ಬೆಳೆಗಳೆಲ್ಲ ನೀರಲ್ಲಿ ನಿಂತು ಕೊಳೆಯುತ್ತಿವೆ. ಕೆಲವೇ ದನಗಳಲ್ಲಿ ಮುಂಗಾರು ಬೆಳೆ ಕಟಾವಿಗೆ ಬಂದಿದ್ದವು. ಆದರೆ ಅಕಾಲಿಕ ಮಳೆಯಿಂದ ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಇಡೀ ರೈತರ ಜೀವನಕ್ಕಾಧಾರವಾಗಿರುವ ಬೆಳೆಗಳೆಲ್ಲ ಹಾಳಾಗಿವೆ. ಇದರಿಂದ ಆಕಾಶವೇ ಕಳಚಿ ಬಿದ್ದಂತೆ ರೈತ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ದೇವರಹಿಪ್ಪರಗಿ, ಇಂಗಳಿ, ಮುಳಸಾವಳಗಿ, ಚಿಕ್ಕರೂಗಿ, ಕಡ್ಲೇವಾಡ ಪಿಸಿ ಮಣೂರ, ದೇವೂರ ಜಾಲವಾದ ಗ್ರಾಮಗಳಲ್ಲಿ ಜಮೀನುಗಳೆಲ್ಲ ನೀರಲ್ಲಿ ನಿಂತು ಬಿಟ್ಟಿವೆ.

ಕೆಲವು ಕಡೆ ಹಳ್ಳದ ಪಕ್ಕದಲ್ಲಿದ್ದ ಊರುಗಳಲ್ಲಿ ನಿರು ಹೊಕ್ಕು ಹೈರಾಣಾಗಿಸಿದ್ದು, ನೂರಾರು ಕುಟುಂಬಗಳು ಸಂತ್ರಸ್ತರಾಗಿವೆ. ತಹಸೀಲ್ದಾರ ಬಿ ಎಸ್ ಕಡಕಬಾವಿ ಸೇರಿದಂತೆ ಎಲ್ಲ ಅಧಿಕಾರಿಗಳು ಮಳೆಯ ಅವಾಂತರದಿಂದ ಕಾಪಾಡಲು ಶ್ರಮಿಸುತ್ತಿದು, ಸಾರ್ವಜನಿಕರಿಗೆ ಸ್ಪಂದಿಸುತ್ತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮನೆಗಳು ಹಾಳಾದ ಬೆಳೆ ಸಮೀಕ್ಷೆ:

ಮಳೆಯ ಅವಾಂತರದಿಂದ ಗ್ರಾಮೀಣ ಭಾಗದಲ್ಲಿ ಬಿದ್ದ ಮನೆಗಳು ಹಾಗೂ ನೀರಿನಿಂದ ಹಾಳಾದ ಬೆಳೆಗಳ ಸಮೀಕ್ಷೆ ನಡೆಯುತ್ತಿದೆ. ಸಂಪೂರ್ಣವಾಗಿ ಸಮೀಕ್ಷೆ ಮುಗಿದ ನಂತರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ ಬಿ ಎಸ್ ಕಡಕಬಾವಿ ತಿಳಿಸಿದ್ದಾರೆ.

ಪರಿಹಾರ ಘೋಷಣೆಗೆ ಸಾರ್ವಜನಿಕರ ಆಗ್ರಹ:

ಅಕಾಲಿಕ ಮಳೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಅದೆಷ್ಟೋ ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಪಾಲಾಗಿವೆ. ಬೆಳೆಯೆಲ್ಲ ನೀರಲ್ಲಿ ನಿಂತು ಕೊಳೆಯುತ್ತಿದ್ದು, ವರ್ಷಕ್ಕಾಗುವ ಗಂಜಿಯೂ ಇಲ್ಲದಂತಾಗಿದೆ. ಸಾಲ ಸೋಲ ಮಾಡಿ ಬಿತ್ತಿ ಬೆಳೆದ ಬೆಳೆಯೆಲ್ಲ ಹಾಳಾಗಿ ಹೋಗಿದೆ ಅದಕ್ಕಾಗಿ ಮಳೆಯ ಅವಾಂತರದಿAದ ಹಾಳಾದ ಮನೆಗಳು ಹಾಗೂ ಬೆಳೆಗಳನ್ನು ತಕ್ಷಣವೇ ಸಮೀಕ್ಷೆ ಮಾಡಿ ಇಡೀ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರು ಹಾಗೂ ಸಾರ್ವಜನಿಕರ ನೆರವಿಗೆ ಬರಬೇಕು ಎಂದು ರೈತರಾದ ಮುಳಸಾವಳಗಿಯ ಸಾಹೇಬಗೌಡ ಬಿರಾದಾರ, ಶಿವಪ್ಪ ಕೊಟೀನ, ರೈತ ಮುಖಂಡರಾದ ಅಜೀಜ ಯಲಗಾರ, ಸಿದ್ದು ಮಸಬಿನಾಳ ಸೇರಿದಂತೆ ಮತ್ತೀತರರು ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.