ಶಿವಣಗಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಗ್ರಾಪಂ ಕಚೇರಿ ಎದುರು ರೈತ ಕೃಷಿ-ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ತರ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಶಿವಣಗಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಣಗಿ ಗ್ರಾಮಸ್ಥರು ರೈತ ಕೃಷಿ-ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳಿಲ್ಲದೇ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಕೆಎಸ್ ಸಂಘಟನೆ ಮುಖಂಡ ಶ್ರೀಶೈಲ ಮಲ್ಲಯ್ಯಗೋಳ ಮಾತನಾಡಿ, ಶಿವಣಗಿ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ, ಕೊರೊನಾ ಮೊದಲಾದ ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗಿದೆ, ಇಂತಹ ಸಂದರ್ಭದಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡದೇ ಹೋದರೆ ಗ್ರಾಮಸ್ಥರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ, ಗ್ರಾಮದ ಹಲವು ಕಡೆಗಳಲ್ಲಿ ಸ್ವಚ್ಛತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಉಪಾಧ್ಯಕ್ಷ ಮಹಾದೇವಪ್ಪ ಹೂಗಾರ ಮಾತನಾಡಿ, ಗ್ರಾಮದ ಇಂದಿರಾ ನಗರದ ರಸ್ತೆಗಳಲ್ಲಿ ವಿಪರೀತ ಕೊಳಚೆ ನೀರುನಿಂತು ಸೊಳ್ಳೆಗಳು ಜನ್ಮತಾಳುತ್ತಿವೆ, ರಸ್ತೆಗಳ ಮಧ್ಯದಲ್ಲಿಯೇ ಮುಳ್ಳು ಕಂಟಿಗಳು ಬೆಳೆದು ಸಂಚಾರಕ್ಕೂ ವ್ಯತ್ಯಯವಾಗುತ್ತಿದೆ, ಮಹಿಳಾ ಶೌಚಾಲಯದಲ್ಲಿ ಮುಳ್ಳುಕಂಟಿಗಳೇ ತುಂಬಿಹೋಗಿವೆ. ಫಾಗ್ಗಿಂಗ್, ಬ್ಲಿಚಿಂಗ್ ಫೌಡರ್ ಸಿಂಪಡಣಾ ಕಾರ್ಯವಂತೂ ಗಗನಕುಸುವೇ ಸರಿ ಎಂದರು.

ಗ್ರಾಮದಲ್ಲಿ ಕನಿಷ್ಠ ವಾರಕ್ಕೊಮ್ಮೆ ಫಾಗ್ಗಿಂಗ್ ಮಾಡಬೇಕು. ಚರಂಡಿ ಮತ್ತು ಕೊಳಚೆ ಪ್ರದೇಶದಲ್ಲಿ ಬ್ಲೀಚಿಂಗ್ ಸಿಂಪಡಿಸಬೇಕು, ರಸ್ತೆಗೆತೊಂದರೆಯಾಗಿರುವ ಸ್ಮಶಾನದ ಮುಳ್ಳುಕಂಟಿಗಳನ್ನು ತೆರವುಗೊಳಿಸಬೇಕು, ಕೆಟ್ಟು ನಿಂತಿರುವ ಬೋರವೆಲ್‌ಗಳನ್ನು ಕೂಡಲೇ ದುರಸ್ತಿಗೊಳಿಸುವುದು, ಅವಶ್ಯಕತೆ ಇರುವ ಸ್ಥಳಗಳಲ್ಲಿ ಬೀದಿದೀಪಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಲಾಯಿತು.

ಸುಭಾಸ್ ಇವಣಗಿ, ಕಲ್ಲಪ್ಪ ನೆಗಿನಾಳ, ಹುಸೇನಸಾಬ್ ಬೀಳಗಿ, ಬೀರಪ್ಪ ಕಗ್ಗೋಡ, ಆನಂದ ಹೂಗಾರ, ಕರಿಸಿದ್ದ ಗೂಗದಡ್ಡಿ, ಮಂಜುನಾಥ್‌ ಇವಣಗಿ, ಭೀಮರಾಯ ಗೂಗದಡ್ಡಿ, ಸಂಗಮೇಶ ಹಡಪದ, ಮಾದಪ್ಪ ಕಠಾರಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.