ಎಸ್ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ಧರಣಿ ಶುರು

0

Gummata Nagari : Bijapur News

ಬಸವನಬಾಗೇವಾಡಿ : ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಳವಾರ ಹಾಗೂ ಪರಿವಾರ ಸಮುದಾಯದ ಜನಾಂಗದವರು ಮಂಗಳವಾರ ತಹಶೀಲ್ದಾರ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ತಳವಾರ ಸಮಾಜದ ತಾಲೂಕಾ ಅಧ್ಯಕ್ಷ ಎಸ್ ಎಸ್ ದೇಗಿನಾಳ ಧರಣಿಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರ್ಪಡೆ ಮಾಡಿ ರಾಜ್ಯ ಪತ್ರ ಹೊರಡಿಸಿದ್ದರು ರಾಜ್ಯ ಸರಕಾರ ಅನಾವಶ್ಯವಾಗಿ ಗೊಂದಲ ಸೃಷ್ಟೀಸುತ್ತಿದೆ ತಳವಾರ ಮತ್ತು ಪರಿವಾರ ಎಂಬುದು ನಾಯಕ ಪದದ ಪರ್ಯಾಯ ಪದ ಎಂದು ರಾಜ್ಯ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಅದಾಗ್ಯೂ ಕೆಲ ಹಿತಾಸಕ್ತಿಗಳು ಬೇರೆ ಜಾತಿಗಳೊಂದಿಗೆ ತಳಕು ಹಾಕಿ ಮೀಸಲಾತಿಯಿಂದ ವಂಚಿತಗೊಳಿಸುವ ಹುನ್ನಾರ ನಡೆಸಿವೆ ಸರಕಾರ ಕೂಡಲೇ ಎಚ್ಚೆತ್ತು ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಿ ನ್ಯಾಯ ದೂರಕಿಸಬೇಕು ಈಗಾಗಲೆ ನಾವುಗಳು ಶಾಂತಿಯುತ ಹೋರಾಟವನ್ನು ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಹೋರಾಟದ ರೂಪ ರೇಷಗಳು ಬದಲಾಗಲಿವೆ ಎಂದು ಹೇಳಿದರು.

ತಳವಾರ ಸಮಾಜದ ಗೌರವ ಅಧ್ಯಕ್ಷ ಪಿ,ಕೆ ಕೋಲಕಾರ, ಉಪಾಧ್ಯಕ್ಷ ಯಲ್ಲಪ್ಪಾ ಕೋಲಕಾರ, ಕಾರ್ಯದರ್ಶಿ ಮಲ್ಲು ಕೋಲಕಾರ, ರಾಜು ಮುಳವಾಡ, ಶರಣು ವಾಲಿಕಾರ, ಮಾಂತೇಶ ನಾಟೀಕಾರ, ಹುಸನಪ್ಪಾ ತಳವಾರ, ರಾವತಪ್ಪಾ ಕೂಲಿಕಾರ, ರಮೇಶ ಜಿಂಗೋಣಿ, ಚಂದ್ರಶೇಖರ ನಾಟೀಕಾರ ಸೇರಿದಂತೆ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.