ತಳವಾರ ಸಮುದಾಯದಿಂದ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ತಳವಾರ ಮತ್ತು ಪರಿವಾರ ಸಮಾಜದಿಂದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಎಲ್ಲಿಯವರೆಗೆ ತಳವಾರ ಮತ್ತು ಪರಿವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವುದಿಲ್ಲವೋ ಅಲ್ಲಿಯವರೆಗೆ ಧರಣಿ ಅನಿರ್ಧಿಷ್ಟಾವಧಿಯವರೆಗೆ ನಿರಂತರವಾಗಿ ನಡೆಯಲಿದೆ ಎಂದು ಧರಣಿ ನಡೆಸಿದರು.

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿಕೊಂಡಿರುವ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರು ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರವನ್ನು ಕೊಡುವಂತೆ ಸ್ಪಷ್ಟ ನಿರ್ದೇಶನ ನೀಡದಿರುವುದನ್ನು ಖಂಡಿಸುತ್ತಾ, ಸರ್ಕಾರದ ನಡೆಯನ್ನು ವಿರೋಧಿಸಿ ಕೂಡಲೆ ಪ್ರಮಾಣ ಪತ್ರವನ್ನು ನೀಡಲು ನಿರ್ದೇಶನ ನೀಡಬೇಕು ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅದರಂತೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿ.ಜೆ.ಪಿ ಮುಖಂಡ ಉಮೇಶ ವಂದಾಲ, ಶಿವಾನಂದ ಬುಯ್ಯಾರ, ರಮೇಶ ನಾಯಕ, ಬಸವರಾಜ ಕೋಕಟನೂರ, ಗೊಲ್ಲಾಳಪ್ಪ ಪಾಟೀಲ ಅವರು ಪಕ್ಷಬೇಧ, ಜಾತಿ ಬೇಧ ತೊರೆದು ತಳವಾರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ಒದಗಿಸಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟಕ್ಕೆ ಬೆಂಬಲ ನೀಡಿದರು.

ಬಬಲೇಶ್ವರ ತಾಲೂಕಿನಲ್ಲೂ ಪ್ರತಿಭಟನೆ

ಇದೇ ರೀತಿ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಳವಾರ/ಪರಿವಾರ ಪರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಅಮೋಘಿ ವಾಲಿಕಾರ ನೇತೃತ್ವದಲ್ಲಿ ತಾಲೂಕು ತಹಶೀಲ್ದಾರ ಕಚೇರಿ ಆವರಣದಲ್ಲಿ ತಳವಾರ ಸಮುದಾಯದಿಂದ ತಳವಾರ ಮತ್ತು ಪರಿವಾರ ಸಮಾಜದಿಂದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಪ್ರಕಾಶ ಸೊನ್ನದ, ನಾಗು ಹೊಳೆಪ್ಪಗೋಳ, ಸಿ.ಎಚ್.ಚಿಕ್ಕಲಕಿ, ಬಾಬುರಾವ್ ಕೋಲಕಾರ್, ಸದಾಶಿವ ಕೋಲಕಾರ, ಯಲ್ಲಪ್ಪ ಕೋಲಕಾರ, ಸಂಗಮೇಶ ಕೋಲಕಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.