ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

0

Gummata Nagari : Bijapur News

ದೇವರಹಿಪ್ಪರಗಿ : ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ಕಚೇರಿಯ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರು ಕೈಗೆ ಕಪ್ಪು ಬಟ್ಟೆ ಧರಿಸುವುದರ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದರು.

ಪಟ್ಟಣದಲ್ಲಿ ಹೆಸ್ಕಾಂ ಕಚೇರಿಯ ಆವರಣದಲ್ಲಿ ಸೇರಿದ ಸಿಬ್ಬಂಧಿಗಳು ಹಾಗೂ ಗುತ್ತಿಗೆದಾರರು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಚಂದ್ರಶೇಖರ ಬೋಳೆಗಾಂವ, ದೇವರಹಿಪ್ಪರಗಿ ಗ್ರಾಮೀಣ ಶಾಖಾಧಿಕಾರಿಗಳಾದ ಅಶೋಕ ಕಂದಗಲ್ಲ, ಎಂ.ಆರ್.ಪುರೋಹಿತ ಹಾಗೂ ಶಿವಾನಂದ ಜಗನ್ನಾಥ ಮಾತನಾಡಿ, ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಯ ಪ್ರಸ್ತಾಪಿತ ತಿದ್ದುಪಡಿಯನ್ನು ಜಾರಿಗೊಳಿಸುವ ಉದ್ದೇಶದಿಂದ ದೇಶಾದ್ಯಂತ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಖಾಸಗೀಕರಣದಿಂದ ಕಾರ್ಮಿಕರ ಹಿತರಕ್ಷಣೆ ಅಸಾಧ್ಯ ಆದ್ದರಿಂದ ಕೇಂದ್ರ ಸರ್ಕಾರ ಖಾಸಗೀಕರಣ ನೀತಿಯನ್ನು ಕೈಬೀಡಬೇಕೆಂದು ಆಗ್ರಹಿಸಿದರು. ನಂತರ ಕೈಗೆ ಕಪ್ಪು ಬಟ್ಟೆ ಧರಿಸಿ ಕೆಲಸಕ್ಕೆ ಹಾಜರಾದರು.

ಪ್ರತಿಭಟನೆಯಲ್ಲಿ ಎಇಇ ಬಿ.ಎಸ್. ಅವಟಿ, ಭೀಮನಗೌಡ ಬಿರಾದಾರ, ಜಾಫರ್ ಮಕಾಂದಾರ್, ಎನ್.ಎಸ್.ಕರಡಿಮಠ, ದೇವೇಂದ್ರ ಯಾಳಗಿ, ಎಂ.ಬಿ.ಮುಲ್ಲಾ, ಸುಭಾಸ ಕೊಕಟನೂರ, ಎಂ.ಆರ್.ವಗ್ಗರ, ಎ.ಡಿ.ಮಳಖೇಡ, ಸಂತೋಷ ಸಜ್ಜನ, ಸಂತೋಷ ಕುಂಬಾರ, ಸುರೇಶ ನಡಗೇರಿ, ರಾಘವೇಂದ್ರ ಕುಲಕರ್ಣಿ, ಪುನೀತ ದೇಸೂಣಗಿ, ಶಿವಾನಂದ ಮಾಳಗಿಮನಿ, ವಿಜಯಕುಮಾರ ನಾಯಕ, ಹಣಮಂತ್ರಾಯ ಪಾಟೀಲ ಗುತ್ತಿಗೆದಾರರಾದ ವಸಂತ ನಾಡಗೌಡ, ಕಾಶೀನಾಥ ಹಿರೇಮಠ, ಭಾಗಣ್ಣ ಹಡಪದ, ಸಿದ್ದು ಪಾಟೀಲ, ಸತೀಶ ಪಾಟೀಲ, ವೇಣು ರಾಠೋಡ, ಮಹೇಶ ಪಾಟೀಲ, ಮಲಕಪ್ಪ ತಳವಾರ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.