ಪ್ರವಾಸೋದ್ಯಮ ಪ್ರಗತಿಗೆ ಆದ್ಯತೆ ನೀಡಿ

ಬಿಜಾಪುರ ಹೇರಿಟೇಜ್ ಫೌಂಡೇಶನ್ದಿಂದ ಜಿಲ್ಲಾಧಿಕಾರಿಗೆ ಮನವಿ

0

Gummata Nagari : Bijapur News

ಬಿಜಾಪುರ : ಬಿಜಾಪುರ ಪ್ರವಾಸೋದ್ಯಮ ಪ್ರಗತಿಗೆ ವಿಶೇಷ ಆದ್ಯತೆ ನೀಡುವುದು, ಪ್ರವಾಸೋದ್ಯಮ ಇನ್ನಷ್ಟೂ ಬೆಳೆಸುವ ನಿಟ್ಟಿನಲ್ಲಿ ಪೂರಕವಾದ ಅಭಿವೃದ್ಧಿ ಕಾರ್ಯ ಚಟುವಟಿಕೆ ಕೈಗೊಳ್ಳುವಂತೆ ಒತ್ತಾಯಿಸಿ ಬಿಜಾಪುರ ಹೇರಿಟೇಜ್ ಫೌಂಡೇಶನ್ ತಂಡದ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಪುರಾತತ್ವ ಇಲಾಖೆಯ ಉನ್ನತಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಪ್ರಮುಖ ಅನೀಸ್ ಮನಿಯಾರ, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪ್ರವಾಸೋದ್ಯಮವನ್ನು ಬಲವರ್ಧನೆಗೊಳಿಸುವ ಕೆಲಸ ನಡೆಯಬೇಕಿದೆ, ಬಿಜಾಪುರದಲ್ಲಿ ಕೈಗೊಳ್ಳಬೇಕಾದ ಪ್ರವಾಸೋದ್ಯಮ ಕಾರ್ಯಚಟುವಟಿಕೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದರು.

ಬೇಡಿಕೆ ಮಂಡಿಸಿದ ಅವರು, ಬಿಜಾಪುರ ಜಿಲ್ಲೆಯ ಪ್ರತಿಯೊಂದು ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಪುರಾತನ ಸ್ಮಾರಕಗಳ ಮುಂದೆ ವಿವರವಾದ ಮಾಹಿತಿ ಬೋರ್ಡ ಅಳವಡಿಸಬೇಕು. ಬಿಜಾಪುರ ನಗರದ ಹೃದಯ ಭಾಗದಲ್ಲಿರುವ ಗಂಗನಮಹಲ್ ಕಂದಕವನ್ನು ಸಂಗೀತ ಕಾರಂಜಿ ಅಳವಡಿಸಿ, ವಾಕಿಂಗ್ ಟ್ರ್ಯಾಕ್ ನಿರ್ಮಿಸುವದು ಹಾಗೂ ಪೈಡಲ್ ಬೋಟಿಂಗ್ ವ್ಯವಸ್ಥೆ ಮಾಡುವದು. ನಗರದ ಸುರಂಗಬಾವಡಿಯಲ್ಲಿ ಆದಿಲ್‌ಶಾಹಿ ಹಳೆಯ ಬಾವಡಿಯಲ್ಲಿ ನೀರಾವರಿ ವ್ಯವಸ್ಥೆಯ ಪುನಶ್ಚೇತನ ಗೊಳಿಸುವದು. ಅದರಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುವದು. ಗೋಲಗುಂಬಜ್ ಯುನಸ್ಕೋ ವರ್ಲ್ಡ ಹೇರಿಟೇಜ್ ಸೈಟಿಗಾಗಿ ಶಿಫಾರಸ್ಸು ಕಳುಹಿಸುವದು. ಪುರಾತತ್ವ ಸ್ಥಳಗಳ ಸುತ್ತಮುತ್ತ ಸುಮಾರು 100 ಮೀಟರ್ ಅಂತರ ಬಿಟ್ಟು ಬಿಲ್ಟಿಂಗ್ , ಮನೆ ಹಾಗೂ ಕಟ್ಟಡಕ್ಕೆ ಪರವಾನಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅಮೀತ ಹುದ್ದಾರ, ಹಮ್ಜಾ ಮೆಹಬೂಬ, ಆಸೀಫ ಹೆರಿಕಲ್, ಶೌಖತ್ ಕೋತ್ವಾಲ್, ಕಾವ್ಯಾ ಹಣಮಸಾಗರ, ಯುವರಾಜ ಚೋಳಕೆ, ಹಿರೇಮಠ, ಸತೀಶ, ಶಕೀಲ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.