ಕಾಲುವೆ ಕಾಮಗಾರಿ ಕಳಪೆ: ತನಿಖೆಗೆ ಆಗ್ರಹ

ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ವಿನೂತನ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಕೆಬಿಜೆಎನ್‌ಎಲ್ ವತಿಯಿಂದ ಕೈಗೊಂಡ ಕ್ಲೋಸರ್ ಹಾಗೂ ಕಾಲುವೆಗಳ ದುರಸ್ತಿ ಕಾಮಗಾರಿಗಳಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರಿಂದ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆದಿದ್ದು ಹಾಗೂ ಬಿಜಾಪುರ ತಾಲ್ಲೂಕಿನ ಆಹೇರಿ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಬರುವ ಯಲ್ಲ ಕಾಲುವೆಗಳು ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಲ್ಲಿ ತಾಯಿ ಭುವನೇಶ್ವರಿ ವೇಷ ಭೂಷಣವನ್ನು ತೊಟ್ಟು ತಾಯಿಗೆ ಕೇಳಿಕೊಳ್ಳುತ್ತ ರೈತರಿಗೆ ಅನ್ಯಾಯವಾಗಿದೆ ಎಂದು ತಾಯಿ ಭುವನೇಶ್ವರಿ ಸುತ್ತ ಪ್ರದಕ್ಷಿಣೆ ಹಾಕಿ ವಿಭಿನ್ನ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವ ಪೂರ್ವದಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ಕೊಟ್ಯಾಂತರ ಹಣ ಖರ್ಚು ಮಾಡಿ ಕ್ಲೋಸರ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಈ ಕ್ಲೋಸರ್ ಕಾಮಗಾರಿ ಗುತ್ತಿಗೆ ಪಡೆದ ಒಂದಷ್ಟು ಗುತ್ತಿಗೆದಾರರು ಕೆಲವಡೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದು, ಇನ್ನೂ ಕೆಲವಡೆ ಕಾಲುವೆಗಳ ಹೂಳು ತಗೆಯದೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿ ಬಿಲ್ ನೀಡಿ ಅಕ್ರಮವಾಗಿ ಹಣ ಮಾಡಿಕೊಳ್ಳುವ ಯತ್ನ ನಡೆಸಿದ್ದಾರೆ. ಈ ಅಕ್ರಮಗಳಿಗೆ ಇಲಾಖೆಯ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡುತ್ತಿದ್ದು, ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟರೂ ಕೆಲವು ಕಾಲುವೆಗಳಲ್ಲಿ ಹೂಳು ತುಂಬಿಕೊಂಡ ಪರಿಣಾಮ ಹಲವಾರು ವರ್ಷಗಳಿಂದ ನೀರೇ ಹರಿದಿಲ್ಲ. ಕ್ಲೋಸರ್ ಕಾಮಗಾರಿಗಳ ಹೆಸರಿನಲ್ಲಿ ಕೆಲವು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಅಕ್ರಮವಾಗಿ ಹಣ ಮಾಡುವ ಕೆಲಸಕ್ಕೆ ಇಳಿದಿದ್ದು, ನೀರಿಗಾಗಿ ಅನ್ನದಾತರ ಪರದಾಟ ತಪ್ಪಿಲ್ಲ. ಆದ ಕಾರಣ ಗುತ್ತಿಗೆದಾರರ ಬಿಲ್ ಪಾವತಿಸುವ ಮೊದಲು ಅವರು ಪೂರ್ಣಗೊಳಿಸಿರುವ ಕಾಮಗಾರಿಗಳ ಗುಣಮಟ್ಟವನ್ನು ಹಿರಿಯ ಅಧಿಕಾರಿಗಳು ಪಾರದರ್ಶಕವಾಗಿ ತಪಾಸಣೆ ಮಾಡಿ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪಾರದರ್ಶಕವಾಗಿ ತಪಾಸಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವು ಚಿಕ್ಕೋಡಿ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಗಳವೆ, ಮಹೇಶ ಯರನಾಳ, ರಾಜು ಮನಗೂಳಿ (ಮಹಾಲ), ಉಮೇಶ ರುದ್ರಮುನಿ, ದಿಲೀಪ ನಾಯಕ, ನಿಕೇಶ ನಾಯಕ, ರಾಘವೇಂಧ್ರ ಭಜಂತ್ರಿ, ಗಣೇಶಕುಮಾರ ಹಾದಿಮನಿ,ಶಿವು ಜಂಗ್ಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.