ರಾಜ್ಯ ಖಜಾಂಚಿಯಾಗಿ ಸುರೇಶ ಶಡಶ್ಯಾಳ ಅವಿರೋಧ ಆಯ್ಕೆ: ಜಿಲ್ಲೆಯ ನೌಕರರಲ್ಲಿ ಸಂತಸ

0

Gummata Nagari : Bijapur News

ಬಿಜಾಪುರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ) ಬೆಂಗಳೂರ 2005-25 ನೇ ಸಾಲಿನ  ರಾಜ್ಯ ಪಧಾಧಿಕಾರಿಗಳ ಆಯ್ಕೆಯಲ್ಲಿ ವಿಜಯಪುರ ಜಿಲ್ಲೆಯ ಸರ್ಕಾರಿ ನೌಕರ ಸಂಘದ ಜಿಲ್ಲಾದ್ಯಕ್ಷ ಸುರೇಶ ಶಡಶ್ಯಾಳ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜಾಪುರ ಜಿಲ್ಲೆಯ ನೌಕರ ಸಂಘದ ಜಿಲ್ಲಾಧ್ಯಕ್ಷರಾಗಿರುವ ಸುರೇಶ ಶಡಶ್ಯಾಳ ಜಿಲ್ಲೆಯ ನೌಕರರ ಹಿತೈಷಿಯಾಗಿದ್ದು, ಸಾಕಷ್ಟು ನೌಕರ ಹಿತ ಕಾಪಾಡುವಲ್ಲಿ ಹಾಗೂ ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿಯಾಗಿ ಆಯ್ಕೆಯಾಗಿದ್ದು, ಸಮಸ್ತ ರಾಜ್ಯದ ಶಿಕ್ಷಕರ ಸೇವೆ ಮಾಡುವ ಹೆಚ್ಚಿನ ಜವಾಬ್ದಾರಿ ಇವರ ಮೇಲಿದೆ.

ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿ ಆಗಿ  ಅಭಿನಂದನೆಗಳನ್ನು ಸಲ್ಲಿಸಿದರು.

ನಮ್ಮ ಜಿಲ್ಲೆಯ ನೌಕರರು ನನಗೆ ಹಲವಾರು ಬಾರಿ ಆಶಿರ್ವಾದ ಮಾಡಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈಗ ರಾಜ್ಯ ಸಂಘದಲ್ಲಿ ನನಗೆ ಸ್ಥಾನ ದೊರೆತಿದ್ದು, ನೌಕರರ ಸೇವೆ ಮಾಡಲು ಪ್ರಾಮಾಣಿಕ ಪಯತ್ನ ಮಾಡುತ್ತೇನೆ ಎಂದು ಸುರೇಶ ಶಡಶ್ಯಾಳ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಆಯ್ಕೆಯಾದ ಸುರೇಶ ಶಡಶ್ಯಾಳರವರಿಗೆ ಬಿಜಾಪುರ ಜಿಲ್ಲೆಯ ನೌಕರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೇರೂರ ಹಾಗೂ ಜಿಲ್ಲೆಯ ಎಲ್ಲ ನೌಕರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.