ವಿದ್ಯಾಗಮ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

0

Gummata Nagari : Bijapur News

ಬಸವನಬಾಗೇವಾಡಿ : ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಗಮ ಕೇಂದ್ರವಾದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಯಟ್ ಪ್ರಾಚಾರ್ಯ ಪಿ ಟಿ ಬೊಂಗಾಳೆ ಹಾಗೂ ಹಿರಯ ಉಪನ್ಯಾಸಕ ಮಂಜುನಾಥ ಗುಳೆದಗುಡ್ಡ ಭೇಟಿ ನೀಡಿ ಮಕ್ಕಳ ಅಭ್ಯಾಸ ಚಟುವಟಿಕೆಗಳನ್ನು ವೀಕ್ಷಿಸಿದರು.

ಸ್ಥೂಲವಾಗಿ ಪರೀಕ್ಷಿಸಿದ ಎಲ್ಲ ಮಕ್ಕಳ ಕೃತಿ ಸಂಪುಟ ಹಾಗೂ ಅಭ್ಯಾಸ ಪುಸ್ತಕಗಳನ್ನು ಗಮನಿಸಿ ವಿದ್ಯಾಗಮ ಕಾರ್ಯಕ್ರಮಕ್ಕೆ ಅವಶ್ಯವಾಗಿರುವ ದಾಖಲೆಗಳನ್ನು ಪರಿಶೀಲಿಸಿ ಮಕ್ಕಳ ಪ್ರಗತಿಯನ್ನು ಕಂಡು ಭೇಷ್ ಎಂದು ಶಿಕ್ಷಕರಿಗೆ ಹುರುದುಂಬಿಸಿದರು, ಹಾಗೇ ವಿದ್ಯಾಗಮ ಆಗಮಿಸಿದಂತ ಎಲ್ಲ ಮಕ್ಕಳನ್ನು ಉದ್ದೇಶಿಸಿ ಎಲ್ಲಾ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೂಂಡು ಎಲ್ಲರು ಮಾಸ್ಕ ಧರಿಸಬೇಕೆಂದು ಮಕ್ಕಳಿಗೆ ತಿಳಿ ಹೇಳಿದರು.

ಶಾಲೆ ಪ್ರಾರಂಭ ಆಗುವ ವಿಚಾರ ಕುರಿತು ಮಕ್ಕಳಿಂದ ಅನಿಸಿಕೆಯನ್ನು ಪಡೆದುಕೂಂಡರು, ಆಗ ವಿದ್ಯಾರ್ಥಿನಿಯೂಬ್ಬಳು ಶಾಲೆಯು ಪ್ರಾರಂಬವಾಗುವುದೇ ಚಲೋ ಎಂದು ತನ್ನ ಮುಗ್ದ sಭಾಷೆಯಲ್ಲಿ ಹೇಳಿದಳು ಯಾಕೆ ಅಂತ ಪ್ರಶ್ನಿಸಿದಾಗ ಶಾಲೆಯಲ್ಲಿ ಕಲಿಕಾ ಚಟುವಟಿಕೆಗಳು ಇದಕ್ಕಿಂತ ವ್ಯವಸ್ಥಿತವಾಗಿ ಸಾಗುತ್ತದೆ, ಹಾಗೇ ಶಾಲೆಯಲ್ಲಿ ಕುಡಿಯಲು ಹಾಲು, ಮಧ್ಯಾಹ್ನದ ಬಿಸಿಯೂಟ ಇವುಗಳಿಂದ ನಾನು ವಂಚಿತನಾಗಿದ್ದೆನೆ, ಶಾಲೆಯಲ್ಲಿ ಕಲಿಕಾ ವಾತಾವರಣ ಇಲ್ಲಿಗಿಂತ ಇನ್ನೂ ಚನ್ನಾಗಿರುತ್ತದೆ, ನಾವು ಕೂಡಾ ಸುರಕ್ಷೀತವಾಗಿರುತ್ತೆವೆ ಎಂದು ಆ ಬಾಲಕಿ ಹೇಳಿದಳು.

ಇದೇ ಸಂಧರ್ಭದಲ್ಲಿ ಪ್ರಾಚಾರ್ಯರು ಮಕ್ಕಳಿಂದ ಪಾಠವನ್ನು ಓದಿಸಿಕೂಂಡು ವಿದ್ಯಾರ್ಥಿಗಳ ಕಲಿಕೆಯನ್ನು ಪರೀಕ್ಷಿಸಿದರು, ಇಂತಹ ಕೊರೊನಾ ಮಹಾಮಾರಿಯ ದುರ್ಗಮ ಸ್ಥಿತಿಯಲ್ಲಿಯೂ ವಿದ್ಯಾಗಮ ಕಾರ್ಯಕ್ರಮವು ವ್ಯವಸ್ಥಿತವಾಗಿ ಸಾಗಿರುವುದನ್ನು ಕಂಡು ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ವಿದ್ಯಾಗಮ ಕಾರ್ಯಕ್ರಮವನ್ನು ಸುಧಾರಿಸಲು ಕೆಲವು ತಮ್ಮ ಸೂಕ್ಷ್ಮ ಸೂಚನೆಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಹೂವಿನಹಿಪ್ಪರಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ರಾಜನಾಳ, ಶಿಕ್ಷಕಿಯರಾದ ಎಸ್ ವಾಯ್ ಬೆಳ್ಳಕ್ಕಿ, ಎಸ್ ಆರ್ ಕದಂ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.