ಮುಶ್ರೀಫ್ ಜನರ ಸಹಾಯಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ; ರಜಾಕ ಹೋರ್ತಿ

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಪ್ ರವರ ನೇತೃತ್ವದಲ್ಲಿ “ ಆರೋಗ್ಯ ಹಸ್ತ”

0

ವಿಜಯಪುರ ನಗರ ಮತಕ್ಷೇತ್ರದಾದ್ಯಂತ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ್ ರವರು ಜನರಿಗಾಗಿ ತೊಡಗಿಸಿಕೊಂಡು ಜನರ ಸಹಾಯಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದ್ದು ನಾವು ಕಾಂಗ್ರೆಸ್ ಪಕ್ಷದ ವಾರಿರ‍್ಸಗಳಾಗಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜನರ ಆರೋಗ್ಯ ರಕ್ಷಣೆಗೆ ಮುಂದಾಗೋಣ ಎಂದು ಕಾರ್ಯಕರ್ತರಿಗೆ ರಜಾಕ ಹೋರ್ತಿ ಕರೆ ನೀಡಿದರು.

ವಿಜಯಪುರ; ಕರೋನಾ ಮಹಾಮಾರಿ ರೋಗ ತಡೆ ಹಾಗೂ ಇತರೆ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾಂಗ್ರೆಸ್ ಪಕ್ಷದ ವಿನೂತನ “ ಆರೋಗ್ಯ ಹಸ್ತ” ಕಾರ್ಯಕ್ರಮವನ್ನು ಇಂದು ವಿಜಯಪುರ ನಗರ ಮತಕ್ಷೇತ್ರದ ವಾರ್ಡ ನಂ ೩೪ ರಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಪ್ ರವರ ನೇತೃತ್ವದಲ್ಲಿ ಹಾಗೂ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಅಬ್ದುಲ ರಜಾಕ ಹೋರ್ತಿರವರ ಮುಖಂಡತ್ವದಲ್ಲಿ ಮನೆ-ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಅಬ್ದುಲರಜಾಕ ಹೋರ್ತಿರವರು ಮಾತನಾಡಿ ಕರೋನಾ ಮಹಾಮಾರಿ ರೋಗದ ಭಯದಿಂದ ಜನ ಸಮಯಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡದೇ ಬೇರೆ ಕಾಯಿಲೆಗಳಿಂದ ಸಾವಿಗಿಡಾಗುತ್ತಿದ್ದು. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಭರದಿಂದ ಸಾಗಬೇಕಾಗಿದ್ದು ಆತ್ಮಸ್ಥೆöÊರ್ಯ ಹೆಚ್ಚಿಸಬೇಕಾಗಿದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಆರೋಗ್ಯ ಹಸ್ತ ಕಾರ್ಯಕ್ರಮ ಶ್ಲಾಘನೀಯವಾಗಿದ್ದು ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಕರೋನಾ ಮಹಾಮಾರಿ ರೋಗ ಇಳಿವಯಸ್ಸಿನವರಿಗೆ ಘಾತಕವಾಗಿದ್ದು ಅವರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿದ್ದುಕೊಂಡು ಸಾಮಾಜಿಕ ಅಂತರ ಕಾಯುವ ಮೂಲಕ ತಾವೇ ಸ್ವತಃ ತಮ್ಮ ಜೀವ ರಕ್ಷಣೆ ಮಾಡಬಹುದು ಹಾಗೂ ಜನ ಈ ರೋಗದ ಬಗ್ಗೆ ಇರುವ ಭಯವನ್ನು ತೆಗೆದುಹಾಕಿ ತಮ್ಮ ದಿನ ನಿತ್ಯದ ಕೆಲಸದಲ್ಲಿ ಸಾಗಬೇಕು. ವಿಜಯಪುರ ನಗರ ಮತಕ್ಷೇತ್ರದಾದ್ಯಂತ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ್ ರವರು ಜನರಿಗಾಗಿ ತೊಡಗಿಸಿಕೊಂಡು ಜನರ ಸಹಾಯಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದ್ದು ನಾವು ಕಾಂಗ್ರೆಸ್ ಪಕ್ಷದ ವಾರಿರ‍್ಸಗಳಾಗಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜನರ ಆರೋಗ್ಯ ರಕ್ಷಣೆಗೆ ಮುಂದಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರಅಹ್ಮದ ಬಕ್ಷಿ, ಜಲ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಆರತಿ ಶಾಹಪೂರ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಜಯಶ್ರೀ ಭಾರತೆ, ಅಲ್ತಾಫ ಅಸ್ಕಿ, ಅಬ್ದುಲ ನಬಿ ಜಮಖಂಡಿ, ಜಮೀರ ಬಾಂಗಿ, ರಾಜೇಶ್ವರಿ ಚೋಳಕೆ, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ವಾಜೀದ ಬಾಗವಾನ, ಜಾಪರ ಸೌದಾಗರ, ಇಮಾಮಸಾಬ ಚಣ್ಣೆಗಾಂವ, ಎಮ್.ಎಮ್.ಬಕ್ಷಿ, ಅಶ್ಪಾಕ ಮನಗೂಳಿ, ವಸೀಮ ತಾವರಗೇರಿ, ಇಲಿಯಾಸ ಸುತಾರ, ಹಾಜಿ ಪೀಂಜಾರ, ಬುಡನ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.