ಖಾದಿ ನೂಲುವ ಮಾತೆಯರಿಗೆ ಮುಶ್ರೀಫ್ ರಿಂದ ಸನ್ಮಾನ

0

Gummata Nagari : Bijapur News

ಬಿಜಾಪುರ : ಮಹಾತ್ಮಾ ಗಾಂಧಿಜಿ ಅವರ ಜಯಂತಿಯ ಪ್ರಯುಕ್ತ ಬಿಜಾಪುರ ನಗರದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಖಾದಿ ನೂಲುವ ಮಾತೆಯರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್‌ರವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, 1956 ರಲ್ಲಿ ಸ್ಥಾಪಿತಗೊಂಡ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘವು ಬಿಜಾಪುರ ಜಿಲ್ಲೆಯ ಹೆಮ್ಮೆಯ ಆಗಿದೆ. ಇದನ್ನು ಸ್ಥಾಪಿಸಲು ಹಾಗೂ ಬಲಪಡಿಸಲು ದಿವಂಗತ ಬಿ.ಡಿ.ಜತ್ತಿ ಹಾಗೂ ದಿವಂಗತ ಬಿ.ಎಂ.ಪಾಟೀಲರು ತುಂಬಾ ಶ್ರಮಿಸಿದ್ದಾರೆ. ಇವರ ಶ್ರಮದ ಫಲವಾಗಿ ಕರ್ನಾಟಕ ಖಾದಿ

ಖಾದಿ ನೂಲುವ ಮಾತೆಯರಿಗೆ ಮುಶ್ರೀಫ್ರಿಂದ ಸನ್ಮಾನ - Gummata Nagari

ಗ್ರಾಮೋದ್ಯೋಗ ಸಂಘ ಕಳೆದ 66 ವರ್ಷಗಳಿಮದ ಕಾರ್ಯನಿರ್ವಹಿಸುತ್ತಿದ್ದು ನೂರಾರು ಬಡ ಜನರಿಗೆ ಕೆಲಸ ನೀಡಿದೆ. ಖಾದಿಯನ್ನು ಮಹಾತ್ಮಾ ಗಾಂಧಿಜಿ ತಮ್ಮ ಜೀವನದ ವಿಭಿನ್ನ ಅಂಗವಾಗಿಸಿದ್ದರು. ಇದು ಸ್ವದೇಶಿಯ ಉದ್ಯಮದ ಪ್ರಾಮುಖ್ಯ ಸಂಕೀರ್ಣವಾಗಿದೆ. ಖಾದಿ ಉಳಿಸಲು ಹಾಗೂ ಬೆಳೆಸಲು ಸರ್ಕಾರ ಹಾಗೂ ಸಾರ್ವಜನಿಕರು ಸಹಕರಿಸಬೇಕು. ಇದರ ನಿಟ್ಟಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಹಾಗೂ ವಿವಿಧ ಇಲಾಖೆಯಲ್ಲಿಯೂ ಕೊಡುವ ಸಮವಸ್ತ್ರವನ್ನು ಕಡ್ಡಾಯವಾಗಿ ಖಾದಿಯಿಂದ ತಯಾರಿಸುವ ಬಟ್ಟೆಗಳನ್ನು ಕೊಡಬೇಕು ಇದರಿಂದ ಖಾದಿ ಉತ್ಪನ್ನಗಳನ್ನು ಬೆಳೆಸಲು ಹಾಗೂ ಉಳಿಸಲು ಸಹಾಯವಾಗುತ್ತದೆ. ಅದೇ ರೀತಿ ಪೊಲೀಸರಿಗೂ ಸಹ ಖಾದಿ ಬಟ್ಟೆ ಕೊಡಬೇಕು. ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂಧಿಯವರಿಗೆ ಬಟ್ಟೆ ಕೊಡಬೇಕು. ಖಾದಿಯಿಂದ ಮಾಡಿದ್ದ ಬಟ್ಟೆ ವಿತರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎಲ್.ಹಿರೇಮಠ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್‌ರವರನ್ನು ಸನ್ಮಾನಿಸಿ ಮಾತನಾಡಿದ ಅವರು, ಗಾಂಧೀಜಿಯವರ ಕನಸಿನಂತೆ ಖಾದಿ ಕೈಮಗ್ಗಗಳ ಬಗ್ಗೆ ಮುಖಂಡರಿಗೆ ಇದ್ದ ಒಲವವನ್ನು ಶ್ಲಾಘಿಸಿದರು. ಸದಾ ಶ್ರೀಯುತರು ಖಾದಿ ಉದ್ಯಮದ ಬೆಳವಣಿಗೆಗೆ ತಮ್ಮ ಕಡೆಯಿಂದ ಸರ್ಕಾರದ ಕೆಲವು ಇಲಾಖೆಗಳಲ್ಲಿ ಖಾದಿ ವಸ್ತ್ರಗಳ ಬಳಕೆಗೆ ಒತ್ತಾಯಿಸಬೇಕೆಂದು ಕೇಳಿಕೊಂಡಿರುವುದು ಶ್ಲಾಘನೀಯ ಎಂದರು.

ಸುಮಾರು ವರ್ಷಗಳಿಂದ ಖಾದಿ ನೇಯುತ್ತಿರುವ ಶ್ರೀಮತಿ ನೀಲವ್ವ ಗೋಳಸಂಗಿ, ಶ್ರೀಮತಿ ಸಂಗಮ್ಮ ಅಂಗಡಿ, ಶ್ರೀಮತಿ ಸರೋಜಿನಿ ಜಾಲಿಹಾಳ, ಶ್ರೀಮತಿ ಫರೀದಾ ಇನಾಮದಾರ ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳಾದ ಎಸ್. ಎಲ್. ಹಿರೇಮಠ, ಎಸ್. ಡಿ. ಸೊನ್ನ, ಎಸ್.ಜಿ. ಹಿರೇಮಠ, ಎಂ.ಆರ್. ಅರಕೇರಿಮಠ, ಎಸ್. ವಾಯ್. ಅಂಗಡಿ, ಎಚ್.ಎಸ್. ಬಿರಾದಾರ, ಪ್ರಶಾಂತ ಗೊಳಸಂಗಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಸ್.ಜಿ.ಹಿರೇಮಠ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.