ಮಳೆ ನೀರಿನಲ್ಲಿ ಮುದ್ದೇಬಿಹಾಳ ಸಿಡಿಪಿಒ ಕಚೇರಿ

ಹಳೆ ಕಾಲದ ಸರ್ಕಾರಿ ಕಟ್ಟಡ: ದಾಖಲೆ ಹಾಳಾಗುವ ಆತಂಕ

0

ಸಿಡಿಪಿಓ ಸಾವಿತ್ರಿ ಗುಗ್ಗರಿ ಮಾತನಾಡಿ, ಹಳೆ ಕಾಲದ ಕಟ್ಟಡವಾಗಿದ್ದು ಮಳೆ ಬಂದಾಗಲೊಮ್ಮೆ ಸೋರಿ ಸಮಸ್ಯೆ ಉಂಟಾಗತೊಡಗಿದೆ. ಸೂಕ್ತ ಬಾಡಿಗೆ ಕಟ್ಟಡ ದೊರೆಯದಿರುವುದರಿಂದ ಅನಿವಾರ್ಯವಾಗಿ ಇಲ್ಲಿಯೇ ಕೆಲಸ ಮಾಡಬೇಕಿದೆ. ಸೂಕ್ತ, ವಿಶಾಲವಾದ ಬಾಡಿಗೆ ಕಟ್ಟಡ ದೊರೆತಲ್ಲಿ ಅಲ್ಲಿಗೆ ಸ್ಥಳಾಂತರಿಸುವ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Gummata Nagari : Bijapur News

ಮುದ್ದೇಬಿಹಾಳ : ಪಟ್ಟಣದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆಯವರೆಗೂ ನಿರಂತರ ಸುರಿದ ಮಳೆಗೆ ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಸಿಡಿಪಿಒ ಕಚೇರಿ ಸೋರತೊಡಗಿದ್ದು ಮಹತ್ವದ ದಾಖಲೆಗಳು ಬಸಿನೀರಿಗೆ ಸಿಲುಕಿ ಹಾಳಾಗುವ ಆತಂಕ ತಲೆದೋರಿದೆ.

ಹಳೆ ಕಾಲದ ಈ ಸರ್ಕಾರಿ ಕಟ್ಟಡದಲ್ಲಿ ಮೊದಲು ತಹಮಳೆ ನೀರಿನಲ್ಲಿ ಮುದ್ದೇಬಿಹಾಳ ಸಿಡಿಪಿಒ ಕಚೇರಿ - Gummata Nagari (2)ಶೀಲ್ದಾರ್ ಕಚೇರಿ ಇತ್ತು. ಆ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಮೇಲೆ ಕೆಲ ವರ್ಷ ಖಾಲಿ ಬಿದ್ದಿತ್ತು. 2-3 ವರ್ಷಗಳ ಹಿಂದೆ ಇಲ್ಲಿಗೆ ಬಾಡಿಗೆ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಸಿಡಿಪಿಓ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸದಾಗಿನಿಂದಲೂ ಸೋರುವಿಕೆ ಸಮಸ್ಯೆ ಕಾಡತೊಡಗಿದೆ. ಈಗಿನ ನಿರಂತರ ಮಳೆಗೆ ಮೇಲ್ಛಾವಣಿಯಿಂದ, ಗೋಡೆಗಳಿಂದ ನೀರು ಸೋರತೊಡಗಿದೆ. ಇದರ ಪರಿಣಾಮ ಅಲ್ಲಲ್ಲಿ ಇಟ್ಟಿರುವ ಮಹತ್ವದ ದಾಖಲೆಗಳು, ಕಡತಗಳು, ವಿವಿಧ ಅರ್ಜಿಗಳು ನಾಶವಾಗುವ ಸಂಭವ ಹೆಚ್ಚಾಗಿದೆ.

ಗೋಡೆಗಳು ತಂಪು ಹಿಡಿದಿದ್ದರಿಂದ ವಿದ್ಯುತ್ ವ್ಯವಸ್ಥೆಯೂ ಅಪಾಯಕಾರಿ ಎನ್ನುವಂತಾಗಿದೆ. ಕಂಪ್ಯೂಟರ್ ಸಂಪರ್ಕ ಹೊಂದಿರುವ ವಿದ್ಯುತ್ ಬೋರ್ಡಗಳಲ್ಲಿ ಗೋಡೆಯೊಳಗಿಂದ ಒಸರಿದ ನೀರು ನಿಂತಿದ್ದು ಕಂಪ್ಯೂಟರ್ ಪ್ರಾರಂಭಿಸಿದ ಕೂಡಲೇ ಶಾರ್ಟ ಸರ್ಕ್ಯೂಟ್ ಆಗುತ್ತಿರುವುದು ಮಗದೊಂದು ಸಮಸ್ಯೆಗೆ ಅವಕಾಶ ಮಾಡಿಕೊಟ್ಟಿದೆ.

ಮೇಲ್ಛಾವಣಿ ಮತ್ತು ಗೋಡೆಯ ಸಿಮೆಂಟ್ ಪ್ಲಾಸ್ಟರ್ ಕಳಚಿ ಬೀಳುತ್ತಿರುವುದು ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ. ಕನಿಷ್ಠ 18 ವರ್ಷ ಸಂಗ್ರಹಿಸಿ ಇಡಬೇಕಾಗಿರುವ ಭಾಗ್ಯಲಕ್ಷ್ಮೀ ಬಾಂಡ್‌ಗಳ ಸಂರಕ್ಷಣೆಯ ಆತಂಕ ಎಲ್ಲರನ್ನೂ ಕಾಡತೊಡಗಿದೆ. ಮೇಲ್ಛಾವಣಿ, ಗೋಡೆಗಳಿಂದ ಬಸಿಯುವ ನೀರು ಸಿಡಿಪಿಓ ಕಚೇರಿ, ಸಿಬ್ಬಂದಿ ಕೊಠಡಿ ಸೇರಿ ಎಲ್ಲಾ ಕಡೆ ನೆಲದ ಮೇಲೆ ನಿಲ್ಲತೊಡಗಿದ್ದು ಇಂಥದ್ದರಲ್ಲೇ ಸಿಬ್ಬಂದಿ ಖುರ್ಚಿಯ ಮೇಲೆ ಕಾಲು ಮಡಿಚಿಟ್ಟು ಅಥವಾ ನೆಲದ ಮೇಲಿನ ನೀರಿನಲ್ಲೇ ಕಾಲಿಟ್ಟು ಕೆಲಸ ಮಾಡುವಂತಾಗಿದೆ.

ಸಂಬಂಧಿಸಿದ ಮೇಲಧಿಕಾರಿಗಳು ಕೂಡಲೇ ಈ ಗಂಭೀರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು. ಅಂದಾಗ ಮಾತ್ರ ಈ ಸಮಸ್ಯೆಗೆ ಮುಕ್ತಿ ಸಿಗುವುದು ಸಾಧ್ಯವಿದೆ ಎಂದು ಈ ಕಚೇರಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.