ಕೈಗಾರಿಕಾ ಕ್ಷೇತ್ರವನ್ನಾಗಿ ಮುದ್ದೇಬಿಹಾಳ ಕ್ಷೇತ್ರ

ಆಹಾರ ನಾಗರಿಕ ಸರಬರಾಜ ಅಧ್ಯಕ್ಷ, ಶಾಸಕ ನಡಹಳ್ಳಿ ಭರವಸೆ

0

Gummata Nagari : Bijapur News

ನಾಲತವಾಡ : ಮುದ್ದೇಬಿಹಾಳ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಕೈಗಾರಿಕ ಕ್ಷೇತ್ರವನಾಗಿಸುತ್ತೇನೆ ಎಂದು ಆಹಾರ ನಾಗರಿಕ ಸರಬರಾಜ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭರವಸೆ ನೀಡಿದರು.

ಸಮೀಪದ ಹಿರೇಮುರಾಳ ಗ್ರಾಮದಲ್ಲಿ ನಡೆದ 110ಕೆವಿ ವಿದ್ಯುತ್ ಉಪಕೇಂದ್ರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಅಭಿವೃದ್ದಿಗೆ ಮೂಲ ವಿದ್ಯುತ್ ಅವಶ್ಯವಾಗಿರುತ್ತದೆ ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಹೊಸ ವಿದ್ಯುತ್ ಕೇಂದ್ರಗಳನ್ನು ಮಂಜೂರು ಮಾಡಿಸಿದ್ದೇನೆ ಮುರಾಳ ಗ್ರಾಮ ಸೇರಿ ಇನ್ನು ನಾಲ್ಕು ಕಡೆ 110 ಕೆವಿ ಉಪಕೇಂದ್ರಗಳನ್ನು ಮಂಜೂರು ಮಾಡಿಸಿದ್ದೇನೆ ಮುಂದಿನ ದಿನಗಳಲ್ಲಿ ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಕಾರ್ಯನಿರ್ವಹಿಸಲಿದೆ.

ಕ್ಷೇತ್ರದಲ್ಲಿ ನೀರು, ಮತ್ತು ವಿದ್ಯುತ್ ಸಮಸ್ಯಯನ್ನು ಪರಿಹರಿಸಿದ್ದೇನೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕೈಗಾರಿಗೆ ಸ್ಥಾಪನೆಗಳು ನಿರ್ಮಾಣ ಮಾಡುವ ಗುರಿ ಇದೆ. ನಮ್ಮ ಪ್ರದೇಶದ ಜನರು ಕಾರ್ಖಾನೆಯಲ್ಲಿ ಕಲಸ ಮಾಡಲು ನಗರ ಪ್ರದೇಶದ ಕಡೆ ಮುಖ ಮಾಡುತಿದ್ದಾರೆ ಆದರೆ ನಾನು ಆ ಎಲ್ಲ ಕಾರ್ಖಾನೆಗಳನ್ನು ನನ್ನ ಕ್ಷೇತ್ರದಲ್ಲಿ ತರುವ ಕನಸುಗಳನ್ನು ಕಂಡಿದ್ದೇನೆ. ನಮ್ಮ ಭಾಗದಲ್ಲಿ ಹೆಚ್ಚು ಕಾರ್ಖಾನೆಗಳು ಪ್ರಾರಂಭವಾದರೆ ನಮ್ಮ ಕ್ಷೇತ್ರ ಕೂಡ ಅಭಿವೃದ್ದೀ ಹೊಂದುತ್ತದೆ ಮತ್ತು ಇಲ್ಲಿಯ ರೈತರು ಕೂಡ ಶ್ರೀಮಂತರಾಗುತ್ತಾರೆ.

ಒಂದು ಪ್ರದೇಶ ಅಭಿವೃದ್ಧಿ ಆಗಬೇಕಾದರೆ ಅಲ್ಲಿ ಮೂಲಸೌಕರ್ಯ ಸಮರ್ಪವಾಗಿರಬೇಕಾಗಿರುತ್ತದೆ ಆ ನಿಟ್ಟಿನಲ್ಲಿ ನಾನು ಪೂರ್ವ ನಿಯೋಜಿತ ಮುಂದಾಲೋಚನೆಯಿAದ ಮೂಲಸೌಕರ್ಯ ಒದಗಿಸುವ ಪ್ರಯತ್ನ ಮಾಡುತಿದ್ದೇನೆ, ಮುಂದಿನ ದಿನಗಳಲ್ಲಿ ರೈತರಿಗೆ 24 ಗಂಟೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಆಗಲಿದೆ. ರೈತರಿಗೆ ವಿದ್ಯುತ್ ಪೂರೈಕೆ ಆದರೆ ಅವರು ಈ ಭೂಮಿಯಲ್ಲಿ ಬಂಗಾರದ ಬೆಳೆಯನ್ನು ಬೆಳೆದು ತೋರಿಸುತ್ತಾರೆ ರೈತರು ಆರ್ಥಿಕವಾಗಿ ಸಬಲರಾದರೆ ಈ ದೇಶ ಕೂಡ ಆರ್ಥಿಕತೆಯಿಂದ ಮೇಲೆ ಬರುತ್ತದೆ. ಕೇಂದ್ರ ಸರಕಾರ ಇವತ್ತು ರೈತರಿಗೆ ಎಲ್ಲಾದರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಮಸೂದೆ ಜಾರಿಗೊಳಿಸಿದ್ದಾರೆ ಇದರಿಂದ ರೈತರಿಗೆ ಉತ್ತಮ ಆದಾಯ ಕೂಡ ಲಭ್ಯವಾಗಲಿದೆ ಇದೆ ರೀತಿ ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಪ್ರತಿ ಒಂದು ಮನೆಗೆ ವಿದ್ಯುತ್ ಹಾಗೂ ನೀರು ಪೂರೈಕೆ ಮಾಡುವ ಯೋಜನೆ ಹಮ್ಮಿಕೊಂಡಿದೆ ಪ್ರತಿ ಹಳ್ಳಿ ಹಳ್ಳಿಯ ಮನೆಗು ಸಹ ಇನ್ನು ಮುಂದೇ ನಿರಂತರ ನೀರು ದೊರೆಯಲಿದೆ ಎಂದರು.

ಕೆ.ಪಿ.ಟಿ.ಸಿ.ಎಲ್ ಅಧೀಕ್ಷಕ ಅಭಿಯಂತರರಾದ ಜಿ.ಕೆ.ಗೋಟಿಹಾಳ ಮಾತನಾಡಿ ಬಿಜಾಪುರ ಜಿಲ್ಲೆ ಮುಂದಿನ ದಿನಗಳಲ್ಲಿ ಸಂಪೂರ್ಣ ನೀರಾವರಿ ಪ್ರದೇಶವಾಗಲಿದೆ ಆ ನಿಟ್ಟಿನಲ್ಲಿ ನೀರಾವರಿ ಪ್ರದೇಶಕ್ಕೆ ವಿದ್ಯುತ್ ಕೊರತೆ ಆಗದಂತೆ ಮುಂದಾಲೊಚನೆ ಇಟ್ಟುಕೊಂಡು ಶಾಸಕರು 6 ಕಡೆ 110ಕೆವಿ ಉಪಕೇಂದ್ರ ಹಾಗೂ ಮುದ್ದೇಬಿಹಾಳ ಪಟ್ಟಣಕ್ಕೆ 220ಕೆವಿ ಕೇಂದ್ರ ಬೇಕಾಗುತ್ತದೆ ಎಂದು ಇಲಾಖೆ ಗಮನಕ್ಕೆ ತಂದು ಮುತವರ್ಜಿ ವಹಿಸಿ ಮಂಜೂರು ಮಾಡಿಸಿದ್ದಾರೆ ಅವರು ಈ ಕಾರ್ಯ ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿ ಆಗಲಿದೆ. ತಾಲೂಕಿನಲ್ಲಿ ಸದ್ಯ ಈಗ ವಿದ್ಯುತ್ ಓವರ ಲೋಡ ಆದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಗುತ್ತದೆ, ಮುಂದಿನ ದಿನಗಳಲ್ಲಿ ಈ ರೀತಿ ಆಗುವದಿಲ್ಲ ನಿರಂತರವಾಗಿ ವಿದ್ಯುತ್ ನಿಗಲಿದೆ. ರೈತರು ಹಾಗೂ ಎಲ್ಲ ಜನರಿಗೆ ಈ ಯೋಜನೆ ಅತ್ಯಮೂಲ್ಯವಾಗಲಿದೆ ಎಂದರು.

ಈ ವೇಳೆ ಇಇ ಸುನಂದಾ ಜಂಬಗಿ, ಜಿ.ಶರಣಪ್ಪ, ಜಗದೀಶ ಜಾಧವ, ಮುರಾಳ ಗ್ರಾಮದ ಜಾಗೀರದಾರರಾದ ಪ್ರಸನ್ನಕುಮಾರ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ಪಾಟೀಲ ನಾಲತವಾಡ, ಶಿವಶಂಕರಗೌಡ ಹಿರೇಗೌಡರ, ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ತಾಪಂ ಸದಸ್ಯ ಶಿವನಗೌಡ ಮುದ್ದೇಬಿಹಾಳ, ಬಿ.ಬಿ.ಭೋವಿ, ನಿಂಗಣ್ಣ ರಾಮೋಡಗಿ, ಬಸವರಾಜ ಗುಳವಾಳ, ಪಿಡಿಒ ಸಂಗಯ್ಯ ಹಿರೇಮಠ, ಬಸವರಾಜ ಡೇರೆದ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಎಂ.ಎಸ್.ತೆಗ್ಗಿನಮಠ ಇದ್ದರು.

ಗ್ರಾಪಂ ಕೇಂದ್ರವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಲು ಶಾಸಕರಿಗೆ ಒತ್ತಾಯ

ಹಿರೇಮುರಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಗ್ರಾಮಸ್ಥರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಈ ವೇಳೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಹಿರೇಮುರಾಳ ಗ್ರಾಮಕ್ಕೆ ಆಗಮಿಸಿದ್ದ ಶಾಸಕರನ್ನು ಭೇಟಿ ಆದ ಗ್ರಾಮಸ್ಥರು, ಹಿರೇಮುರಾಳದಿಂದ ನಾಲತವಾಡ, ಮುದ್ದೇಬಿಹಾಳ, ಅಡವಿ ಸೋಮನಾಳ ಆರೋಗ್ಯ ಕೇಂದ್ರಗಳು ದೂರವಾಗುತ್ತಿದ್ದು ಇಲ್ಲಿಯೇ ಒಂದು ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ರುದ್ರು ರಾಮೋಡಗಿ, ಸುರೇಶ್ ಅಗ್ನಿ,ಅಯ್ಯಪ್ಪ ತಂಗಡಗಿ, ಸಂಗಯ್ಯ ಹಿರೇಮಠ, ನಿಂಗಪ್ಪ ಜಾಲವಾದಗಿ, ಬಸವರಾಜ ಸರೂರ, ಸುರೇಶ ಭೋವಿ, ಚಂದ್ರಶೇಖರ ನಾರಾಯಣಪುರ, ರಾಜುಬಾಕ್ಷ ಬಾಗೇವಾಡಿ, ಚಂದ್ರು ರಾಮೋಡಗಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.