ಎಂಬಿಪಿ ಹುಟ್ಟು ಹಬ್ಬ: ಹಣ್ಣು ಹಂಪಲ ವಿತರಣೆ

0

Gummata Nagari : Bijapur News

ಕಲಕೇರಿ : ಬಿಜಾಪುರ ಜಿಲ್ಲೆಯ ಆಧುನಿಕ ಭಗಿರಥ ಎಂದೇ ಖ್ಯಾತಿಯ ಎಂ.ಬಿ.ಪಾಟೀಲರ 56ನೇ ಜನ್ಮದಿನದ ನಿಮಿತ್ಯ ಬುಧುವಾರದಂದು ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಲಕೇರಿಯ ಕಾಂಗ್ರೇಸ್ ಮುಖಂಡರು ಹಾಗೂ ಯುವ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಣ್ಣು ಹಂಪಲ ಹಂಚಿ ಸಂಭ್ರಮಿಸಿ, ಶುಭ ಹಾರೈಸಿದರು.

ಈ ವೇಳೆ ಕಾಂಗ್ರೇಸ್ ಹಿರಿಯ ಮುಖಂಡರಾದ ವಾಯ್.ಬಿ.ಕುಲಕರ್ಣಿ ಮಾತನಾಡಿ ಬರಗಾಲ ಜಿಲ್ಲೆಯೆಂದೆ ಖ್ಯಾತಿ ಪಡೆದ ಬಿಜಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಯ ನೀರನ್ನು ಹರಿಸಿ ರೈತರ ಬಾಳನ್ನು ಹಸನಾಗಿಸಿ, ರೈತರ ಆದಾಯವನ್ನು ದ್ವೀಗುಣಗೊಳಿಸಿದ ಅಭಿವೃದ್ಧಿ ಹರಿಕಾರ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವ ನಮ್ಮೆಲ್ಲರ ಮೆಚ್ಚಿನ ನಾಯಕ ಎಂ.ಬಿ.ಪಾಟೀಲರ ಜನ್ಮದಿನವನ್ನು ಹಣ್ಣು ಹಂಪಲ ಹಂಚುವುದರ ಮೂಲಕ ಬಹಳ ಅರ್ಥಪೂರ್ವವಾಗಿ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ಇದೇ ವೇಳೆ ಸ್ಥಳೀಯ ಯುವ ಕಾಂಗ್ರೇಸ್ ಮುಖಂಡರಾದ ಮೇಹೆಬೂಬಸುಬಾನಿ ಮೇಲಿನಮನಿ ಮಾತನಾಡಿ ಕೋಟಿ ವೃಕ್ಷದ ರೂವಾರಿ, ರೈತ ನಾಯಕ, ಶಿಕ್ಷಣ ಪ್ರೇಮಿ, ಅಭಿವೃದ್ದಿ ಹರಿಕಾರ, ನೀರಾವರಿ ಹರಿಕಾರ, ಮಾಚಿ ಗೃಹ ಮತ್ತು ನೀರಾವರಿ ಸಚಿವರು ಆದ ಎಂ.ಬಿ.ಪಾಟೀಲರ 56ನೇ ಜನ್ಮ ದಿನದ ನಿಮಿತ್ಯ ಶುಭ ಹಾರೈಸುತ್ತೆನೆ, ಅದೇ ರೀತಿ ಅವರಿಗೆ ದೇವರು ಆಯಸ್ಸು , ಆರೋಗ್ಯ ಕೊಟ್ಟು ಕಾಪಾಡಲಿ, ನಮ್ಮ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದಿನ ದಿನಗಳಲ್ಲಿ ಅವರಿಂದ ಇನ್ನು ಹೆಚ್ಚಿನ ಅಭಿವೃದ್ದಿಯಾಗಿ ಸಂಪೂರ್ಣ ದೇಶದಾದ್ಯಂತ ಅವರ ಹೆಸರು ಮನೆಮಾತಾಗಲಿ ಎಂದರು.

ಈ ಸಂದರ್ಭದಲ್ಲಿ ವೈಧ್ಯಾಧಿಕಾರಗಳಾದ ಡಾ|| ಸೋಯೆಲ್ ಸಿರಸಗಿ, ಡಾ|| ಮಹಮ್ಮದ ಇರ್ಪಾನ್ ವಲ್ಲಿಬಾಯಿ, ಹಿರಿಯರಾದ ಮಶಾಕಸಾಬ ವಲ್ಲಿಭಾವಿ, ಡಿ.ವ್ಹಿ.ಜಂಬಗಿ, ಬಾಪು ದೇಸಾಯಿ, ರಮೇಶ ಮೋಪಗಾರ, ದಾವಲ್ ನಾಯ್ಕೋಡಿ, ನಬಿಲಾಲ ನಾಯ್ಕೋಡಿ, ಅಪ್ಪಸಾಹೇಬ ದೇಸಾಯಿ, ಘನಿ ಉಸ್ತಾದ, ಮೈನುದ್ಧಿನ ಮನಿಯಾರ, ರಾಜು ಸಿರಸಗಿ, ಮುರಗೆಪ್ಪ ಹೊಸಮನಿ, ರಫಿಕ ಮುಲ್ಲಾ, ಚಾಂದಪಾಶಾ ಹವಾಲ್ದಾರ, ಸೇರಿದಂತೆ ಯುವ ಕಾಂಗ್ರೇಸ್ ಮುಖಂಡರಾದ ಬಬಲು ನಾಯ್ಕೋಡಿ, ಬಾಷಾ ತುರುಕನಗೇರಿ, ಮಹಿಬೂಬ ಈಚನಾಳ, ಸದ್ದಾಂ ತುರಕನಗೇರಿ, ಲಾಳೇಮಶಾಕ ನಾಯ್ಕೋಡಿ, ಅಯುಬ್ ಮುಲ್ಲಾ, ಶಫೀಕ ಮನಿಯಾರ, ಶಬ್ಬಿರ ಹೊನ್ನಳ್ಳಿ, ನೆಹರೂ ರಾಠೋಡ, ದಾವಲ ನಾಯ್ಕೋಡಿ, ಸುಲೇಮಾನ ದರ್ಗಾ, ಅಹಮ್ಮದ ಬಡೇಘರ, ಮೈನು ನಾಯ್ಕೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.