ಕಲಕೇರಿ ಹೋಬಳಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ

ಹೋಬಳಿ ಆಗುವವರೆಗೂ ಮುಖಂಡರ ಬೆಂಬಲ

0

ಕಳೆದ ವರ್ಷ ಕೊಟ್ಟ ಮನವಿಗೆ ತಹಸೀಲ್ದಾರರಿಂದ ಹಾರಿಕೆ ಉತ್ತರ ಕೊಡುತ್ತಿರುವುದಾಗಿ ಸೇರಿದ ಸಂಘಟಿಕರು ಕೆಲವು ನಿಮಿಷಗಳ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು, ಅಲ್ಲಿಯ ಉಪಸ್ಥಿತರಿರುವ ಹಿರಿಯರು ಸಂಘಟಕರಿಗೆ ಮನವೊಲಿಸಿ ಪ್ರತಿಭಟನೆಯನ್ನು ಮನವಿ ನೀಡುವುದರ ಮುಖಾಂತರ ಮೊಟಕುಗೊಳಿಸಿದರು.

Gummata Nagari : Bijapur News

ಕಲಕೇರಿ : ಗ್ರಾಮದ ಡಾ.ಬಾಬಾ ಸಾಹೇಬ ಅಂಬೇಡ್ಕರರ ಭಾವಚಿತ್ರಕ್ಕೆ ಹೂಮಾಲೆಯನ್ನು ಹಾಕುವುದರ ಮೂಲಕ ಕಲಕೇರಿ ಹೋಬಳಿ ಘೋಷಣೆ ಮಾಡಬೇಕೆಂದು ಕಲಕೇರಿ ಹೋಬಳಿ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಮುಖ್ಯ ಬಜಾರಕ್ಕೆ ಆಗಮಿಸಿ ಸರ್ವಪಕ್ಷದ ನಾಯಕರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಭಾಗವಹಿಸಿ ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಂಗಮೇಶ ಚಾಯಾಗೋಳ ಮಾತನಾಡಿ, ಕಲಕೇರಿ ಭಾಗದ ಜನರೊಂದಿಗೆ ಸದಾ ನಾನಿದ್ದೇನೆ, ನಿಮ್ಮ ಹೋರಾಟಕ್ಕೆ ಯಾವಾಗಲೂ ಬೆಂಬಲವಿದೆ, ಕಲಕೇರಿ ಗ್ರಾಮವೂ 42 ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿದೆ, ಇದನ್ನು ಹೋಬಳಿ ಮಾಡಲೇಬೇಕು ಎಂದು ಆಗ್ರಹಿಸಿದರು.

ಬಿಂಜಲಭಾವಿಯ ಕಾಂಗ್ರೆಸ್ ಧುರೀಣ ಸುರೇಶ ನಾಡಗೌಡ ಮಾತನಾಡಿ, ಕಲಕೇರಿ ಗ್ರಾಮವೂ ಸುಮಾರು 1500 ಸರ್ವೇ ನಂಬರ್‌ಗಳನ್ನು ಹೊಂದಿದ್ದು ತಾಳಿಕೋಟಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದೆ, ಇಲ್ಲಿ ಸುಮಾರು 19000 ಜನಸಂಖ್ಯೆ ಹೊಂದಿದ್ದು, ಮತ್ತು ಸುತ್ತಿನ ಹಳ್ಳಿಗಳಿಗೆ ದೊಡ್ಡ ವ್ಯಾಪಾರಿ ಕೇಂದ್ರವಾಗಿರುವುದರಿಂದ ಹೋಬಳಿ ಮಾಡಲು ಹಿಂದೆಟು ಹಾಕಬಾರದು ಎಂದು ಆಗ್ರಹಿಸಿದರು.

ಬಿಎಸ್‌ಪಿ ಮುಖಂಡ, ವಕೀಲ ಶ್ರೀನಾಥ ಪೂಜಾರಿ ಮಾತನಾಡಿ, ಕಲಕೇರಿಯು 20 ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ರಾಜಕೀಯದ ಯಾರೊಬ್ಬ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಅಭಿವೃದ್ಧಿ ಆಗುತ್ತಿಲ್ಲ ಗ್ರಾ.ಪಂ, ತಾ.ಪಂ, ಜಿ.ಪಂ, ಹಾಗೂ ಶಾಸಕರ, ಸಂಸದರು ಇತ್ತ ಕಡೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಬಳಸಿಕೊಂಡು ಈಗ ಅಭಿವೃದ್ಧಿಯ ಬಗ್ಗೆ ಧ್ವನಿ ಎತ್ತಿದರೆ ಯಾರೊಬ್ಬರು ಖ್ಯಾರೆ ಅನ್ನುವುದಿಲ್ಲ ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಸರಕಾಕ್ಕೆ ಈ ಪ್ರಸ್ತಾವನೆಯನ್ನು ಸಲ್ಲಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಜಿಪಂ ಸದಸ್ಯರ ಪ್ರತಿನಿಧಿ ಸಿದ್ದು ಬುಳ್ಳಾ ಮಾತನಾಡಿ, ಕಲಕೇರಿಯೂ ಹೋಬಳಿ ಮಾಡುವುದು ಶಾಸಕರ ಮೂಲಕ ಸರಕಾರಕ್ಕೆ ತಿಳಿಸಲಾಗುವುದು, ಹೋರಾಟಗಾರರ ಬೆಂಬಲಿಗೆ ಸದಾ ಸಿದ್ದನಿರುತ್ತೇನೆ, ಇದು ಕೇವಲ ಮನವಿಗೆ ಮಾತ್ರ ಸಿಮಿತವಾಗಬಾರದು ನಿರಂತರವಾಗಿ ಹೋಬಳಿ ಮಾಡುವವರೆಗೆ ಎಲ್ಲರೂ ಹೋರಾಟ ಮಾಡೋಣ ಎಂದರು.

ಕಾಂಗ್ರೆಸ್ ಮುಖಂಡರಾದ ದೇವಿಂದ್ರ ಜಂಬಗಿ, ಸೋಮಶೇಖರ ಸಜ್ಜನ, ಶರಣಪ್ಪಣ್ಣ ಮೋಪಗಾರ ಡಾ| ಈರಣ ಗುಮಶೆಟ್ಟಿ, ಸುನೀಲ ಕಲಕೇರಿ, ಬಾಫು ದೇಸಾಯಿ, ಅಪ್ಪಾಸಾಹೇಬ ದೇಸಾಯಿ, ಯಲ್ಲಪ್ಪ ಹೊಸಮನಿ, ಶಿವಶಂಕರ ಸಜ್ಜನ ಜಗು ವಡ್ಡೊಡಗಿ, ದಾವಲಸಾಬ ನಾಯ್ಕೋಡಿ, ಮೈಬೂಬಸಾಬ ಮೇಲಿನಮನಿ, ನಾನಾಗೌಡ ಚೌಧರಿ, ಮುದಕು ಹೊಸಮನಿ, ಮಡಿವಾಳಪ್ಪ ದೊಡಮನಿ, ದೇವಿಂದ್ರ ಕಡಕೋಳ, ವಿಶ್ವನಾಥ ಸಬರದ, ಪ್ರವೀಣ ಜಗಶೆಟ್ಟಿ, ಅಶೋಕ ವಡ್ಡರ, ಮಲಕು ಕಟ್ಟಿಮನಿ, ಜಗು ವಡೊಢಗಿ, ಮಲ್ಲು ನಾವಿ, ಮಹಮ್ಮದಲಿ ಯಾಳವಾರ, ವಿನೋದ ವಡಗೇರಿ, ಮಾಂತಯ್ಯ ಕಪ್ಪಡಿಮಠ, ಆನಂದ ಬೆಣ್ಣಿ, ಮೈಬೂಬಸಾಬ್ ಮನಗೂಳಿ, ರಾಜು ಸಿರಸಗಿ, ಸೇರಿದಂತೆ ಕಲಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ಬಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ರಾಜು ಅಡಕಿ, ವಾಯ್.ಬಿ.ಕುಲಕರ್ಣಿ, ಎಂ.ಪಿ.ನದಾಫ, ನಬೀಲಾಲ ನಾಯ್ಕೋಡಿ, ಸಾಯಬಣ್ಣ ಬಾಗೇವಾಡಿ, ಪ್ರದೀಪ ದೇಶಪಾಂಡೆ, ಮಾತನಾಡಿದರು. ಹಣಮಂತ ವಡ್ಡರ ನಿರೂಪಿಸಿದರು. ಸುಧಾಕರ ಅಡಕಿ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.