ಮಹಾನಾಯಕ ಧಾರವಾಹಿಯ ಫ್ಲೆಕ್ಸ್ ಅನಾವರಣ

0

Gummata Nagari : Bijapur News

ಮುದ್ದೇಬಿಹಾಳ : ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಸಮಾನತೆಯ ಹರಿಕಾರ ಎನ್ನಿಸಿಕೊಂಡಿದ್ದಾರೆ. ಇಂಥ ಮಹಾನ್ ವ್ಯಕ್ತಿಯ ತತ್ವಾದರ್ಶಗಳನ್ನು ಜಾತಿಭೇದ ಮರೆತು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುದ್ದೇಬಿಹಾಳ ಪೊಲೀಸ್ ವೃತ್ತದ ಸಿಪಿಐ ಆನಂದ ವಾಗಮೋಡೆ ಹೇಳಿದರು.

ಇಲ್ಲಿನ ಪುರಸಭೆ ಕಚೇರಿ ಎದುರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಯ 21ನೇ ಸಂಚಿಕೆಯ ಸಂಭ್ರಮಾಚರಣೆ ಮತ್ತು ಧಾರವಾಹಿ ಕುರಿತ ನೂತನ ಫ್ಲೆಕ್ಸ್ ಅನಾವರಣ ಸಮಾರಂಭದಲ್ಲಿ ಫ್ಲೆಕ್ಸ್ಗೆ ಹೂಮಾಲೆ ಹಾಕಿ ಅವರು ಮಾತನಾಡಿದರು.

ಮಹಾನಾಯಕ ಧಾರವಾಹಿಯ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ರಾಜ್ಯದೆಲ್ಲೆಡೆ ಪರಿಶಿಷ್ಟ ಸಮಾಜ ಬಾಂಧವರು ಈ ಕುರಿತು ಫ್ಲೆಕ್ಸ್ ಹಾಕಿ ಗಮನಸೆಳೆಯುತ್ತಿದ್ದಾರೆ. ಧಾರವಾಹಿಯ ಬಗ್ಗೆ ಸಾಕಷ್ಟು ಕುತೂಹಲ ಎಲ್ಲರಲ್ಲೂ ಕಂಡುಬರುತ್ತಿದೆ. ಪ್ರತಿಯೊಬ್ಬರೂ ಇದನ್ನು ನೋಡಬೇಕು. ಧಾರವಾಹಿ ಪ್ರಸಾರ ಮುಕ್ತಾಯದವರೆಗೂ ಇಲ್ಲಿ ಹಾಕಿರುವ ಫ್ಲೆಕ್ಸ್ ಅನ್ನು ಪುರಸಭೆಯವರು ತೆರವುಗೊಳಿಸಬಾರದು ಎಂದರು.

ಸಮಾರಂಭವನ್ನು ಕೇಕ್ ಕತ್ತರಿಸಿ, ಡಾ|ಅಂಬೇಡ್ಕರ್, ಬುದ್ಧನ ಪುತ್ಥಳಿಗಳಿಗೆ ಪುಷ್ಪಾರ್ಪಣೆ ಸಲ್ಲಿಸಿ ಉದ್ಘಾಟಿಸಿದ ಪಿಎಸೈ ಮಲ್ಲಪ್ಪ ಮಡ್ಡಿ ಮಾತನಾಡಿ ಇತ್ತೀಚೆಗೆ ಟಿವಿಯಲ್ಲಿ ಬರುತ್ತಿರುವ ಧಾರವಾಹಿಗಳಿಂದ ಪ್ರಯೋಜನ ಇಲ್ಲ ಎನ್ನುವ ಕೊರಗು ವೀಕ್ಷಕರಲ್ಲಿ ಕಂಡುಬರುತ್ತಿತ್ತು. ಆದರೆ ಮಹಾನಾಯಕ ಆ ಕೊರಗು ನಿವಾರಿಸಿ ಉತ್ತಮ ಧಾರವಾಹಿ ಎನ್ನಿಸಿಕೊಂಡಿದೆ. ಈ ಧಾರವಾಹಿಯನ್ನು ಕುಟುಂಬ ಸಮೇತ ನೋಡುವುದು ಮಾತ್ರವಲ್ಲದೆ ವಿಶೇಷವಾಗಿ ಮಕ್ಕಳಿಗೂ ತೋರಿಸಬೇಕು ಎಂದರು.

ಮುಖಂಡರಾದ ಚನ್ನಪ್ಪ ವಿಜಯಕರ್, ಬಸವರಾಜ ಪೂಜಾರಿ, ಪ್ರಕಾಶ ಚಲವಾದಿ ಅವರು ಡಾ| ಅಂಬೇಡ್ಕರ್ ಕುರಿತು ಮಾತನಾಡಿದರು. ಪುರಸಭೆ ಸದಸ್ಯರಾದ ಶಿವು ಶಿವಪುರ, ಮಹಿಬೂಬ ಗೊಳಸಂಗಿ, ಕಂದಾಯ ಅಧಿಕಾರಿಣಿ ಎಂ.ಬಿ.ಮಾಡಗಿ, ಪ್ರಮುಖರಾದ ಪ್ರಶಾಂತ ಕಾಳೆ, ರೇವಣೆಪ್ಪ ಅಜಮನಿ, ಸಿದ್ದು ಚಲವಾದಿ, ಪ್ರಕಾಶ ಚಲವಾದಿ ಸರೂರ, ದೇವರಾಜ ಹಂಗರಗಿ, ಮಾನಪ್ಪ ನಾಯಕ, ಸಂಗು ನೇಬಗೇರಿ, ಶೇಖು ಆಲೂರ, ಮಾನಸಿಂಗ ನಾಯಕ, ಬಸ್ಸು ಸಿದ್ದಾಪುರ, ಶರಣು ಚಲವಾದಿ, ನಾಗರಾಜ ಕೆಸಾಪುರ, ಮಾಂತೇಶ ಚಲವಾದಿ, ಸಂತೋಷ ಅಜಮನಿ, ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.