ಧರ್ಮ ಜಾಗೃತಿಗೆ ಮಹಾ ಶಿವಯೋಗ

0

Gummata Nagari

ಬಿಜಾಪುರ : ಜಾಗತಿಕ ಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಅನೇಕ ಲೋಕಕಲ್ಯಾಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಸರುವಾಸಿಯಾಗಿರುವ ಬುರಣಾಪೂರದ ಮಲ್ಲಿಕಾರ್ಜುನ ದೇವಾಲಯದ ಧರ್ಮದರ್ಶಿ ಲಕ್ಷ್ಮಣ ಶಿವಶರಣರು ಈಗ ಧರ್ಮ ಜಾಗೃತಿಗಾಗಿ ಮಹಾ ಶಿವಯೋಗ ಆರಂಭಿಸಿದ್ದಾರೆ.

ಪ್ರತಿ ದಿನ 12 ಗಂಟೆ ಮೌನ ಶಿವಯೋಗ ಹಾಗೂ ಗಂಟೆಗೊಮ್ಮೆ ಇಷ್ಟಲಿಂಗ ಪೂಜೆಯನ್ನು ಮಾಡುವ ದಿವ್ಯ ಸಂಕಲ್ಪವನ್ನು ಮಾಡಿ ಸರ್ವರಿಗೂ ವಿಭೂತಿಧಾರಣೆ, ಲಿಂಗಪೂಜೆ, ರುದ್ರಾಕ್ಷಿಧಾರಣೆಯ ಮಹತ್ವ, ಗುರುಸೇವೆಯ ಫಲ ಹಾಗೂ ಶಿವಶರಣರ ಸಂದೇಶಗಳನ್ನು ತಮ್ಮ ಅಮೃತವಾಣಿಯಿಂದ ತಿಳಿಸಲು ನಿರ್ಧರಿಸಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ನಾಡಿನಲ್ಲಿ ಉತ್ತಮವಾದ ಮಳೆಯಾಗಿ ಬೆಳೆ ಬಂದು ಸರ್ವರು ಶಾಂತಿಯುತವಾದ ಜೀವನವನ್ನು ನಡೆಸಬೇಕು ಹಾಗೂ ಸಕಲ ಜೀವರಾಶಿಗಳಿಗೂ ಒಳಿತಾಗಬೇಕು ಎಂದು ಪ್ರಾರ್ಥಿಸಿ ಸಹಸ್ರನಾಮಾವಳಿಯ ಮಹಾಶಿವಪೂಜೆ ನೆರವೇರಿಸುತ್ತಿದ್ದು, ಒಂದು ವರ್ಷದ ಕಾಲ ಮಹಾಶಿವಯೋಗ ವೃತವನ್ನು ಕೈಗೊಂಡಿದ್ದಾರೆ.

ಮಹಾಶಿವಯೋಗದ ಮಹತ್ವದ ಕುರಿತು ವಿವರಿಸಿದ ಶ್ರೀ ಲಕ್ಷ್ಮಣ ಶಿವಶರಣರು, ವಿಶ್ವದಲ್ಲಿರುವ ಸಕಲ ಮನುಜರೆಲ್ಲರೂ ಧರ್ಮದ ಮಾರ್ಗದಲ್ಲಿ ನಡೆದು ಧರ್ಮವಂತರಾಗಿ ಬಾಳಿ ಬದುಕಬೇಕು, ಜಗದೊಡೆಯನಾದ ಶ್ರೀಗಿರಿಯ ಮಲ್ಲಿಕಾರ್ಜುನನಲ್ಲಿ ಪ್ರಾರ್ಥಿಸಿ ನಿತ್ಯ ಕಾಯಕದೊಂದಿಗೆ ಪ್ರಾರ್ಥಿಸಬೇಕು, ಸದಾ ಎಲ್ಲರಿಗೂ ಒಳಿತನ್ನೇ ಬಯಸಬೇಕು ಎಂದು ಕರೆ ನೀಡಿದರು.

ಅನೀಲ ಶರಣರು ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ಭಕ್ತಾದಿಗಳು ಶ್ರದ್ಧೆಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.