ಕಡಿಮೆ ವೆಚ್ಚದ ಸ್ಯಾನಿಟೈಜರ್ ಯಂತ್ರ ಅಭಿವೃದ್ಧಿ

ಬಿಎಲ್ಡಿಇ ಎಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಗುರುರಾಜ ಬಡಿಗೇರ ಸಾಧನೆ

0

Gummata Nagari

ಬಿಜಾಪುರ : ಅವಶ್ಯಕತೆಗಳು ಅನ್ವೇಷಣೆಯ ತಾಯಿ ಎನ್ನುವಂತೆ ಕೊರೊನಾ ಹಾವಳಿಯಿಂದ ಹೊರಬರಲು ಹಲವಾರು ಅನ್ವೇಷಣೆಗಳು ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಲ್ಲಿ ಹಲವು ಅನ್ವೇಷಣೆಗಳು ನಡೆಯುತ್ತಿರುವ ಈ ಸಂಧರ್ಭದಲ್ಲಿ ಬಿಜಾಪುರದ ಬಿ.ಎಲ್.ಡಿ.ಈ ಇಂಜನೀಯರಿಂಗ್ ಮಹಾವಿದ್ಯಾಲಯದ ಲೀಡ್ ವಿದ್ಯಾರ್ಥಿ ಗುರುರಾಜ ಬಡಿಗೇರ ಕಡಿಮೆ ವೆಚ್ಚದ ಸೆನ್ಸಾರ್ ಆಧಾರಿತ ಸ್ಯಾನಿಟೈಜರ್ ಯಂತ್ರ ಅಭಿವೃದ್ಧಿಪಡಿಸಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಬಳಕೆಗಾಗಿ ಕಾಲೇಜಿನಲ್ಲಿ ಅಳವಡಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ಅದೇ ಮಹಾವಿದ್ಯಾಲಯದಲ್ಲಿ ಇಲೇಕ್ಟ್ರಿಕಲ್ ವಿಭಾಗದಲ್ಲಿ ತೃತೀಯ ವರ್ಷದ ಇಂಜನೀಯರಿಂಗ್ ಪೂರೈಸುತ್ತಿರುವ ಲೀಡ್ ವಿದ್ಯಾರ್ಥಿ ಗುರುರಾಜ ಬಡಿಗೇರ್ ಕಡಿಮೆ ವೆಚ್ಚದಲ್ಲಿ ಈ ಸೆನಿಟೈಜರ್ ಯಂತ್ರ ರೂಪಿಸಿದ್ದಾರೆ. ಹ್ಯಾಂಡ್ ಸೆನಿಟೈಜರ್ ಬಳಕೆ ಮಾಡಲು ಕೈಗಳನ್ನು ಬಳಸಬೇಕಾಗುತ್ತದೆ, ಅನೇಕರು ಕೈಗಳನ್ನು ಹ್ಯಾಂಡ್ ಸೆನೆಟೈಜರ್‌ಗೆ ಸ್ಪರ್ಶಿಸುವುದರಿಂದ ಅಫಾಯದ ಸಾಧ್ಯತೆಯೂ ಇರುತ್ತದೆ, ಈ ಕಾರಣಕ್ಕೆ ಹ್ಯಾಂಡ್ ಸೆನಿಟೈಜರ್ ಸ್ಪರ್ಶಿಸದೇ ಸೆನಿಟೈಜರ್ ಸಿಂಪಡಣೆ ಮಾಡುವ ಯಂತ್ರ ಇದಾಗಿದ್ದು, ಕೈಗಳನ್ನು ಕೆಳಭಾಗದಲ್ಲಿ ಇರಿಸಿದರೆ ಸಾಕು ಸೆನ್ಸಾರ್ ಅಧ್ಯಯನ್ನು ರೀಡ್ ಮಾಡಿ ಸೆನಿಟೈಜರ್ ಸಿಂಪಡಣೆಯಾಗುವಂತೆ ಮಾಡುವಂತೆ ಬಿಜಾಪುರದ ಗುರುರಾಜ್ ಬಡಿಗೇರ ಯಂತ್ರವನ್ನು ಸಿದ್ಧಪಡಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ನನ್ನ ರಜಾ ಸಮಯದ ಸದುಪಯೋಗವನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದೆ ನನ್ನ ತಾಂತ್ರಿಕ ಶಿಕ್ಷಣದ ಜ್ಙಾನದ ಆಧಾರದ ಮೇಲೆ ಕಡಿಮೆ ವೆಚ್ಚದ ಸ್ಯಾನಿಟೈಜರ್ ಯಂತ್ರ ತಯ್ಯಾರಿಸಿದ್ದೇನೆ ಹಾಗೂ ಮುಂಬರುವ ದಿನಗಳಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಕಡಿಮೆ ವೆಚ್ಚದಲ್ಲಿ ಈ ಯಂತ್ರವನ್ನು ಅಳವಡಿಸಲು ಯೋಜನೆ ಹೊಂದಿದ್ದೇನೆ ಎಂದು ವಿದ್ಯಾರ್ಥಿ ಬಡಿಗೇರ್ ತಮ್ಮ ಅನುಭವ ಹಂಚಿಕೊಂಡರು.

ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಾಚಾರ್ಯ ಡಾ.ಅತುಲ್ ಅಯರೆ ಮಾತನಾಡಿ, ವಿನೂತನ ಆಲೋಚನೆಯುಳ್ಳ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದಿಂದ ಸದಾ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು, ಸಾರ್ವಜನಿಕರಿಗೆ ಉಪಯೋಗಿ ಹಾಗೂ ಅತ್ಯಂತ ಸುರಕ್ಷಿತವಾದ ಯಂತ್ರವನ್ನು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಮಹಾವಿದ್ಯಾಲಯದ ಉಪನ್ಯಾಸಕ ಗೋವಿಂದ ಮಧಭಾವಿ,ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಲೀಡ್ ಕಾರ್ಯಕ್ರಮ ಸಹ ವ್ಯವಸ್ಥಾಪಕ ಪ್ರಮೋದ ಹುಕ್ಕೇರಿ ಮೊದಲಾದವರು ವಿದ್ಯಾರ್ಥಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.