ಚರಂಡಿ ನೀರಿಗೆ ಬಾಳೆ ಬೆಳೆ ನಷ್ಟ
ನಾಲತವಾಡದಲ್ಲಿ ಎಪಿಎಂಸಿ ಪಕ್ಕದ ರೈತರಿಗೆ ಲಕ್ಷಾಂತರ ರೂ. ಹಾನಿ
ನಾಲತವಾಡ : ಅಧಿಕ ಮಳೆಯ ಜೋತೆಗೆ ಚರಂಡಿ ನೀರು ಕೂಡಿಕೊಂಡು ಲಕ್ಷಾಂತರ ರೂಪಾಯಿಯ ಬಾಳೆ ನಷ್ಟವಾಗಿದೆ.
ಸ್ಥಳೀಯ ಎ.ಪಿ.ಎಮ್.ಸಿ ಎದುರು ಮುದ್ದೇಬಿಹಾಳ ರಸ್ತೆಗೆ ಹೊಂದಿಕೊಂಡಿರುವ ರೈತ ವೀರೇಶ ಮಲ್ಲಪ್ಪ ಗಂಗನಗೌಡರ ಅವರು ಬಾಳೆ ತೋಟವಿದ್ದು ಆದರೆ ಅವರಿಗೆ ಅಧಿಕ ಮಳೆಯ ಜೋತೆಗೆ ಜಗದೇವ ನಗರದ ಚರಂಡಿಯ ಕೊಳಚೆಯ ನೀರಿನ ಕಾಟವೂ ಶುರುವಾಗಿದೆ. ಪಟ್ಟಣ ಪಂಚಾಯತ ಅವರು ಬೇಜವಾಬ್ದಾರಿಯಿಂದ ಕೈಗೆ ಬಂದು ತುತ್ತು ಬಾಯಿಗೆ ಬರದಂತೆ ಆಗಿದೆ. ಮೊದಲೆ ಅಧಿಕ ಮಳೆಯಿಂದ ತೋಟದಲ್ಲಿ ನೀರು ಸಂಗ್ರಹವಾಗಿ ಬಾಳೆ ಬೆಳೆಯುವ ಪ್ರಮಾಣ ಕಡಿಮೆಯಾಗಿತ್ತು ಇದರ ಮೇಲೆ ಜಗದೇವನಗರದ ಎಲ್ಲ ಚರಂಡಿ ನೀರು ಸಹ ತೋಟದಲ್ಲಿ ನುಗ್ಗಿ ಬರುವ ಕಾರಣ ಕೊಳಚೆ ನೀರಿನಿಂದ ಬಾಳೆ ನೆಲಕ್ಕೆ ಉರುಳುತ್ತಿವೆ ಲಕ್ಷಾಂತರ ರೂಪಾಯಿ ಹಣ ಸಾಲ ಮಾಡಿ ಬಾಳೆ ಬೆಳದಿದ್ದೇವೆ ಈಗ ಪಟ್ಟಣ ಪಂಚಾಯತ ಅವರ ನಿಸ್ಕಾಳಜಿಯಿಂದ ಸಂಪೂರ್ಣ ಬೆಳೆ ಹಾಳಾಗಿದೆ ಪಟ್ಟಣ ಪಂಚಾಯತ ನವರು ಬಾಳೆ ಬೆಳೆಯ ನಷ್ಟ ಭರಿಸಬೇಕು ಎಂದು ರೈತ ವೀರೇಶ ಗಂಗನಗೌಡರ ಆಗ್ರಹಿಸಿದ್ದಾರೆ.
ಪಟ್ಟಣದ ಒಂದನೇ ವಾರ್ಡ ಜಗದೇವನಗರ ಹಾಗೂ ಬಸವೇಶ್ವರ ನಗರದ ಚರಂಡಿ ನೀರು ವೀರೇಶ ಅವರ ತೋಟಕ್ಕೆ ಬಂದು ನಿಲ್ಲುವ ಅವರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಪ.ಪಂ ನವರು ಮುಖ್ಯ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡದಿರುವ ಕಾರಣ ಇಷ್ಟೆಲ್ಲ ಅವಾಂತರ ಆಗುತ್ತಿದೆ ಕೂಡಲೆ ಪ.ಪಂ ನವರು ಎಚ್ಚತ್ತುಕೊಂಡು ಚರಂಡಿ ನಿರ್ಮಾಣ ಮಾಡಬೇಕು ಹಾಗೂ ರೈತನಿಗೆ ಬೆಳೆ ನಷ್ಟದ ಪರಿಹಾರ ನೀಡಬೇಕು ಎಂದು ಬಸವೇಶ್ವರ ನಗರದ ನಿವಾಸಿ ಮುದಕಪ್ಪ ಗಂಗನಗೌಡರ ಆಗ್ರಹಿಸಿದ್ದಾರೆ.
ಈ ವೇಳೆ ಶರಣು ಕಾನಿಕೇರಿ, ಅಂಬ್ರೇಶ ಗಂಗನಗೌಡರ, ಮುದಕಪ್ಪ ಹುನಗುಂಡ, ಕಾಶೀಮಸಾಬ ತೆಗ್ಗಿನಮನಿ ಇದ್ದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..