ಸಹಜ ಸ್ಥಿತಿಗೆ ಮರಳದ ಜನಜೀವನ

ನೀರಿನಲ್ಲಿ ಕೊಚ್ಚಿಹೋದ ಬೆಳೆಗಳು, ಕೋಟ್ಯಂತರ ಹಾನಿ: ರೈತರ ಕನಸು ನುಚ್ಚುನೂರು

0

Gummata Nagari : Bijapur News

ಬಿಜಾಪುರ : ಜಿಲ್ಲೆಯಲ್ಲಿ ಏಳು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ಗ್ರಾಮಗಳು ಜಲಾವೃತವಾಗಿ, ಅನೇಕ ಗ್ರಾಮಗಳಲ್ಲಿ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಬೆಳೆದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿ ರೈತರ ಕನಸು ನುಚ್ಚು ನೂರಾಗಿದೆ.

2447 ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ 8 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದರೆ, 2447 ಮನೆಗಳು ಭಾಗಶಃ ಹಾನಿಗೀಡಾಗಿವೆ. ಇಂಡಿ ತಾಲೂಕು ಒಂದರಲ್ಲೇ ಅತೀ ಹೆಚ್ಚು ಅಂದರೆ 352 ಮನೆಗಳು ಭಾಗಶಃ ಹಾನಿಗೀಡಾಗಿವೆ.

ತಾಲೂಕಿನಲ್ಲಿ 166, ಬಬಲೇಶ್ವರ ತಾಲೂಕಿನಲ್ಲಿ 141, ತಿಕೋಟಾ ತಾಲೂಕಿನಲ್ಲಿ 307, ಬಸವನ ಬಾಗೇವಾಡಿ ತಾಲೂಕಿನಲ್ಲಿ 238, ಕೊಲ್ಹಾರ ತಾಲೂಕಿನಲ್ಲಿ 95, ನಿಡಗುಂದಿ ತಾಲೂಕಿನಲ್ಲಿ 120, ಮುದ್ದೇಬಿಹಾಳ ತಾಲೂಕಿನಲ್ಲಿ 133, ತಾಳಿಕೋಟೆ ತಾಲೂಕಿನಲ್ಲಿ 59, ಇಂಡಿ ತಾಲೂಕಿನಲ್ಲಿ 552, ಚಡಚಣ ತಾಲೂಕಿನಲ್ಲಿ 135, ಸಿಂದಗಿ ತಾಲೂಕಿನಲ್ಲಿ 300, ದೇವರಹಿಪ್ಪರಗಿ ತಾಲೂಕಿನಲ್ಲಿ 191 ಮನೆಗಳು ಹಾನಿಗೀಡಾಗಿವೆ.

28 ಗ್ರಾಮಗಳು ಜಲಾವೃತ

ಭೀಮಾ ನದಿ ಪ್ರವಾಹಕ್ಕೆ ಜಿಲ್ಲೆಯ 28 ಗ್ರಾಮಗಳು ಜಲಾವೃತವಾಗಿವೆ. ಚಡಚಣ ತಾಲೂಕಿನ 08, ಇಂಡಿ ತಾಲೂಕಿನ 12 ಹಾಗೂ ಸಿಂದಗಿ ತಾಲೂಕಿನ 08 ಗ್ರಾಮಗಳು ಜಲಾವೃತವಾಗಿವೆ.

ಚಡಚಣ ತಾಲೂಕಿನ ಚಣೇಗಾಂವ, ಧೂಳಖೇಡ, ಶಿರನಾಳ, ಉಮರಾಣಿ, ಟಾಕಳಿ, ಅಣಚಿ, ಶಿರಗೂರ, ಸಂಖ ಗ್ರಾಮಗಳು, ಇಂಡಿ ತಾಲೂಕಿನ ಹಿಂಗಣಿ, ಬರಗುಡಿ, ಪಡನೂರ, ಶಿರಗೂರ ಇನಾಂ, ಗುಬ್ಬೇವಾಡ, ಅಗರಖೇಡ, ಚಿಕ್ಕಮಣ್ಣೂರ, ಭುಯ್ಯಾರ, ಹಳೇ ನಾಗರಳ್ಳಿ, ಖೇಡಗಿ, ರೂಡಗಿ, ಮಿರಗಿ ಹಾಗೂ ಸಿಂದಗಿ ತಾಲೂಕಿನ ತಾರಾಪೂರ, ಶಂಭೇವಾಡ, ದೇವಣಗಾಂವ, ತಾವರಖೇಡ, ಕಡ್ಲೇವಾಡ ಪಿ.ಎ, ಬ್ಯಾಡಗಿ, ಕಡಣಿ, ಕುಮಸಗಿ ಗ್ರಾಮಗಳು ಜಲಾವೃತವಾಗಿವೆ.

12,217 ಜನರ ಸ್ಥಳಾಂತರ: 1516 ಜನರ ರಕ್ಷಣೆ

ಭೀಕರ ಭೀಮೆಯ ಪ್ರವಾಹಕ್ಕೆ ಅನೇಕರು ಸಂತ್ರಸ್ತರಾಗಿದ್ದಾರೆ. ಜನರ ರಕ್ಷಣೆಗಾಗಿ 16 ಜನರನ್ನೊಳಗೊಂಡ ಒಟ್ಟು ಎರಡು ಎನ್‌ಡಿಆರ್‌ಎಫ್ ತಂಡಗಳು ಹಾಗೂ ಮರಾಠಾ ಲೈಟ್ ಇನಫೆಂಟ್ರಿಯ ಪ್ರವಾಹ ರೆಸ್ಕ್ಯೂನ 80 ಜನರ ತಂಡ ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದೆ.

ಪ್ರವಾಹದಿಂದಾಗಿ ತೊಂದರೆ ಅನುಭವಿಸಿದ ಚಡಚಣ ತಾಲೂಕಿನಲ್ಲಿ 1844 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 121 ಜನರನ್ನು ರಕ್ಷಣಾ ತಂಡದಿAದ ರಕ್ಷಣೆ ಮಾಡಲಾಗಿದೆ, ಇಂಡಿ ತಾಲೂಕಿನಲ್ಲಿ 8952 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 515 ಜನರನ್ನು ರಕ್ಷಣಾ ತಂಡದವರು ರಕ್ಷಣೆ ಮಾಡಿದ್ದಾರೆ, ಅದೇ ತೆರನಾಗಿ ಸಿಂದಗಿ ತಾಲೂಕಿನಲ್ಲಿ 1421 ಜನರನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 880 ಜನರನ್ನು ರಕ್ಷಣಾ ತಂಡದವರು ರಕ್ಷಣೆ ಮಾಡಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ 881 ಕುಟುಂಬಗಳಿಗೆ ಆಶ್ರಯ

ಪ್ರವಾಹದಿಂದಾಗಿ ತೊಂದರೆ ಅನುಭವಿಸಿದ ಜನತೆಗೆ ಜಿಲ್ಲೆಯ 39 ಭಾಗದಲ್ಲಿ ಕಾಳಜಿ ಕೇಂದ್ರ ತೆರೆದು ವಸತಿ, ಊಟ ಮೊದಲಾದ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸಿದ್ದು, 881 ಕುಟುಂಬಗಳು ಆಶ್ರಯ ಪಡೆದಿವೆ.

ಇಂಡಿ ತಾಲೂಕಿನಲ್ಲಿ 21 ಕಾಳಜಿ ಕೇಂದ್ರಗಳಲ್ಲಿ 1,758, ಚಡಚಣ ತಾಲೂಕಿನಲ್ಲಿ 7 ಕಾಳಜಿ ಕೇಂದ್ರಗಳಲ್ಲಿ 1,042 ಜನರನ್ನು ಹಾಗೂ ಸಿಂದಗಿ ತಾಲೂಕಿನಲ್ಲಿ 11 ಕಾಳಜಿ ಕೇಂದ್ರಗಳಲ್ಲಿ 1,631 ಜನರಿಗೆ ವ್ಯವಸ್ಥೆ ಮಾಡಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.