ಯುವಜನತೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಲಿ

ಕ್ಲಾಸಿಕ್ ಸಂಸ್ಥೆಯಲ್ಲಿ ಭಾರತೀಯ ವಾಯುಪಡೆ ದಿನಾಚರಣೆ

0

Gummata Nagari : Dharwad News

ಧಾರವಾಡ : ನಗರದ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್ ಮತ್ತು ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ವತಿಯಿಂದ ಭಾರತೀಯ ವಾಯುಪಡೆ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ವಾಯುಪಡೆಯ ನಿವೃತ್ತ ಏರ್ ಕಮಾಡೋರ್ ಸಿ.ಎಸ್.ಹವಾಲ್ದಾರ್ ಭಾಗವಹಿಸಿ, ಇಂದಿನ ಯುವಜನತೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ವಾಯುಪಡೆಯಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಲಭ್ಯವಿದ್ದು ಯುವಕರು ಅದರ ಸದುಪಯೋಗ ಪಡೆದುಕೊಂಡು ದೇಶಸೇವೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ಭಾರತದ ಹೆಮ್ಮೆಯ ವಾಯುಪಡೆ: ಸ್ವಾತಂತ್ರ್ಯ ನಂತರ ರಾಯಲ್ ಇಂಡಿಯನ್ ಏರ್‌ಫೋರ್ಸ್ ಕರೆಯಲ್ಪಡುತ್ತಿದ್ದ ಭಾರತೀಯ ವಾಯುಪಡೆಯು 1950ರಲ್ಲಿ ಭಾರತದ ಸಂವಿಧಾನ ರಚನೆಯಾದ ನಂತರ ರಾಯಲ್ ಹೆಸರನ್ನು ಕೈ ಬಿಟ್ಟು ಇಂಡಿಯನ್ ಏರ್‌ಫೋರ್ಸ್ ಎಂದು ಕರೆಯಲಾಯಿತು. 1932ರ ಅಕ್ಟೋಬರ್ 8ರಂದು ಸ್ಥಾಪನೆಯಾಗಿದ್ದು ಇದು 88ನೇ ದಿನಾಚರಣೆಯಾಗಿದೆ. ವಾಯುಪಡೆಯಲ್ಲಿ 1.4ಲಕ್ಷಕ್ಕೂ ಅಧಿಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು ಭಾರತದ ರಾಷ್ಟçಪತಿಯವರು ಇದರ ಸುಪ್ರೀಂ ಕಮಾಂಡರ್ ಆಗಿದ್ದಾರೆ. ಇವಲ್ಲದೇ ಚೀಫ್ ಆಫ್ ಏರ್ ಸ್ಟಾಫ್, ಏರ್ ಚೀಫ್ ಮಾರ್ಷಲ್, ಎಂಬ ಮುಂತಾದ ಹುದ್ದೆಗಳಿವೆ. 1700ಕ್ಕೂ ಹೆಚ್ಚು ಏರ್ ಕ್ರಾಫ್ಟ್ಗಳಿವೆ.

ಚೀನಾ, ಪಾಕಿಸ್ತಾದೊಂದಿಗೆ ನಡೆದ ನಾಲ್ಕು ಪ್ರಮುಖ ಯುದ್ಧಗಳಲ್ಲಿ ವಾಯುಪಡೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಐದು ಕಾರ್ಯಕಾರಿ ಕಮಾಂಡ್‌ಗಳು, ಮತ್ತು ಎರಡು ಕ್ರಿಯಾತ್ಮಕ ಕಮಾಂಡ್‌ಗಳಿವೆ. ಭಾರತೀಯ ವಾಯುಪಡೆಯು ರಷ್ಯಾ, ಫ್ರಾನ್ಸ್, ಜಪಾನ್, ಬಾಂಗ್ಲಾದೇಶ ಮುಂತಾದ ದೇಶಗಳೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದೆ.

ಇತ್ತೀಚೆಗೆ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧವಿಮಾನವನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗಿದ್ದು ಇಂಥ 36 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯನ್ನು ಸೇರಲಿವೆ. ಇವಲ್ಲದೇ ಸುಖೋಯ್, ತೇಜಸ್, ಅಪಾಚಿ, ಮಿಗ್ ಸೇರಿದಂತೆ ಅನೇಕ ಯುದ್ಧ ವಿಮಾನಗಳು ವಾಯುಪಡೆಯಲ್ಲಿವೆ. ಮುಂದಿನ 10 ವರ್ಷಗಳಲ್ಲಿ 400 ವಿಮಾನಗಳು ಭಾರತೀಯ ವಾಯುಪಡೆಯಲ್ಲಿ ಸೇರಲಿವೆ ಎಂದು ಹವಾಲ್ದಾರ್ ತಿಳಿಸಿದರು.

ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್‌ನ ನಿರ್ದೇಶಕರು ಹಾಗೂ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಲಕ್ಷ್ಮಣ ಎಸ್ ಉಪ್ಪಾರ ಅವರು ನಿವೃತ್ತ ಏರ್ ಕಮಾಡೋರ್ ಸಿ ಎಸ್ ಹವಾಲ್ದಾರ್ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.