ಕಾರ್ಮಿಕರಿಗೆ ಸೌಲಭ್ಯ ಒದಗಿಸಲಿ

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಹಾಗೂ ಬಿಜಾಪುರ ನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ಮಾತನಾಡಿ, ಬಿಜಾಪುರ ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಸಾವಿರಾರು ಜನ ಇದ್ದು ಅವರಿಗೆ ಇಲ್ಲಿಯವರೆಗೆ ಸರಕಾರದಿಂದ ಯಾವುದೇ ಸಹಾಯ ಸವಲತ್ತುಗಳು ಸಿಗುತ್ತಿಲ್ಲ ಮತ್ತು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಗುರುತಿನ ಚೀಟಿ ಹೊಂದಿದ ಕಾರ್ಮಿಕ ಫಲಾನುಭವಿಗಳಿಗೆ ಸರಕಾರದಿಂದ ಸಹಾಯ ಸವಲತ್ತುಗಳು ಸಿಗಬೇಕು. ಕಾರ್ಮಿಕರು ಯಾವುದೇ ಸಹಾಯ ಸವಲತ್ತುಗಳಿಗೆ ಅರ್ಜಿ ಸಲ್ಲಿಸಿದರೆ ಆದಷ್ಟು ಬೇಗನೆ ಪರಿಶೀಲಿಸಿ ಅವರಿಗೆ ಸಹಾಯ ಸೌಲಭ್ಯ ಒದಗಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಮಹ್ಮದ್ ಹನೀಫ್ ಮಕಾನದಾರ, ನಗರ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಬಾಬು ಯಾಳವಾರ, ನಗರಸಭೆ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೋರ್ತಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಇರ್ಫಾನ್ ಶೇಖ್, ವಸಂತ ಹೊನಮೊಡೆ, ಇಲಿಯಾಸ್ ಸಿದ್ದಿಕಿ, ತಾಜುದ್ದೀನ ಖಲೀಪ, ಡಿ.ಎಂ.ಬಡದಾಳೆ, ರವೀಂದ್ರ ಜಾಧವ, ರಜಾಕ್ ಕಾಖಂಡಕಿ, ಮುಕುಂದ ಸಾಳುಂಕೆ, ದಾವಲಸಾಬ ಬಾಗವಾನ, ಆಯುಬ್ ನಧಾಪ್, ಮಂಜುಳಾ ಜಾಧವ, ಲಕ್ಷ್ಮೀಬಾಯಿ ಬಳ್ಳಾರಿ, ಹುಲಿಗೆಮ್ಮಾ ಬಳ್ಳಾರಿ, ಜಾವೀದ್ ಶೇಖ, ಆಸೀಫ್ ಪುಂಗಿವಾಲೆ, ಅಜಾದ್ ಅಗಸಿಮನಿ ಮುಂತಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.