ಕರ್ನಾಟಕ ಬಂದ್: ಸಿಂದಗಿಯಲ್ಲಿ ರಸ್ತೆ ತಡೆದು ಪ್ರತಿಭಟನೆ

0

Gummata Nagari : Bijapur News

ಸಿಂದಗಿ : ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಮ್‌ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಅಖಂಡ ಕನಾಟಕ ರೈತ ಸಂಘನೆ ಮೂಲಕ ರೈತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದರು.

ನೂತನ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಅತಿವೃಷ್ಟಿ, ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದಿಡಲಿವೆ. ಕೆಲವೇ ಕೆಲವು ವ್ಯಾಪಾರಿಗಳು ಮತ್ತು ಬಂಡವಾಳ ಶಾಹಿಗಳು ಅಮಾಯಕರ ಸುಲಿಗೆ ಮಾಡಲಿದ್ದಾರೆ ಎಂದು ಹೇಳುತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನ ವಿರೋಧಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸಿಂದಗಿ ತಹಶೀಲ್ದಾರ್ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ತಾಲೂಕಾ ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಚನ್ನಪ್ಪಗೌಡ ಪಾಟೀಲ, ಈರಪ್ಪ ಅಂಕಲಗಿ, ಬಸವರಾಜ ಕುಂಬಾರ, ಮಡಿವಾಳಪ್ಪ ದೇಸಾಯಿ, ಗೋಲ್ಲಾಳಪ್ಪ ಚೌಧರಿ, ಅರ್ಜುಣ ಪೂಜಾರಿ, ಅಶೋಕ ಅಲ್ಲಾಪೂರ, ಚಾಯಪ್ಪ ಹೊಸಮನಿ, ಅನೀಲ ತೇಲಿ, ಶ್ರೀಕೃಷ್ಣ ಪರೀಟ, ರಾಜು ಬಡಿಗೇರ, ಕಲ್ಲಪ್ಪ ತಡ್ಲಗಿ, ರಮೇಶ ಹೊರಕೇರಿ, ಗೊಲ್ಲಾಳ ಅಗಸರ, ಶ್ರೀಕಾಂತ ಹೂಗಾರ, ಸಿದ್ದು ಉಪ್ಪಾರ, ಭೀಮರಾಯ ಭಂಟನೂರ, ಬಸನಗೌಡ ಪಾಟೀಲ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಾಂಕೆತಿಕ ಬಂದ : ರೈತರು ಕರೆದ ಬಂದಗೆ ಪಟ್ಟಣದಲ್ಲಿ ಯಾರು ಪ್ರತಿಕ್ರಯಿಸಿಲ್ಲ. ಎಂದಿನಂತೆ ಜನಜೀವನ, ವ್ಯಾಪಾರ ವಹಿವಾಟು, ಸಾರಿಗೆ ಸಂಚಾರ, ಹೋಟೆಲ ಉದ್ಯಮ ನಡೆದಿವೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.