ಕರ್ನಾಟಕ ಬಂದ್: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0

Gummata Nagari : Bijapur News

ಇಂಡಿ : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭೂಸುಧಾರಣೆ ಕಾಯ್ದೆ ಜಾರಿಗೆ ತರಲು ಹೊರಟಿರುವ ಕ್ರಮವನ್ನು ಖಂಡಿಸಿ ರಾಜ್ಯ ಬಂದ್ ಕರೆ ಹಿನ್ನಲೆಯಲ್ಲಿ ಜೆಡಿಎಸ್, ಸಿ.ಐ.ಟಿ.ಯು, ರೀಪಬ್ಲೀಕ ಪಾರ್ಟಿ, ಅಖಂಡ ಕರ್ನಾಟಕ ರೈತ ಸಂಘ, ಪ್ರಾಂತ ರೈತ ಸಂಘ, ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಇಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆ ಮುಖಾಂತರ ಬಂದು ಪ್ರತಿಭಟನಾ ಸಭೆ ನಡೆಸಿದರು. ನಂತರ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಚಿದಂಬರ ಕುಲಕರ್ಣಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ಡಿ.ಪಾಟೀಲ ಮಾತನಾಡಿ, ಕಾಯ್ದೆ ಜಾರಿಗೆ ತರಲು ಹೂರಟಿರುವ ಸರ್ಕಾರ ಕೂಡಲೆ ತನ್ನ ನಿರ್ಧಾರವನ್ನು ಬದಲಿಸಿ ರೈತರ, ಕಾರ್ಮಿಕರ ಹಿತ ಕಾಪಾಡಬೇಕು. ಹಾಗೂ ಭೂ ಕಾಯ್ದೆಯನ್ನು ಬದಲಿಸಿ ರೈತರ ಶೋಷಣೆ ತಡೆಯಬೇಕು, ಇಲ್ಲವಾದರೆ ಕೇಂದ್ರ, ರಾಜ್ಯ ಸರ್ಕಾರಗಳು ತರುತ್ತೀರುವ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ ವಾಗುತ್ತದೆ ಎಂದರು

ಪ್ರಾಂತ ರೈತ ಸಂಘದ ಭೀಮರಾಯ ಪೂಜಾರಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬುದ್ಧುಗೌಡ ಬಿರಾದಾರ, ರೀಪಬ್ಲೀಕ ಪಾರ್ಟಿಯ ನಾಗೇಶ್ ತಳಕೇರಿ, ಸಿ.ಐ.ಟಿ.ಯು.ದಿಂದ ಭಾರತಿ ವಾಲಿ, ಅಶ್ವೀನಿ ತಳವಾರ, ಜೆಡಿಎಸ್ ದಿಂದ ಶ್ರೀಶೈಲಗೌಡ ಪಾಟೀಲ ಕಾಯ್ದೆ ವಿರುದ್ಧ ವಾಗ್ದಾಳಿ ನಡೆಸಿದರು.

ಹೋರಾಟದಲ್ಲಿ ನಾನಾಗೌಡ ಪಾಟೀಲ, ಸಿದ್ದು ಡಂಗಾ, ಮಹಿಬೂ ಬೇವನೂರ, ಶ್ರೀಶೈಲ ಪೂಜಾರಿ, ಸುದೀರ್ ಕರಕಟ್ಟಿ, ಮಾಜಿದ ಸೌದಾಗರ, ಶ್ರೀಶೈಲ ತೋನಶಾಳ, ಖಲೀಲ್ ತೋಳನೂರ, ಬಸವರಾಜ ಹಂಜಗಿ, ನೀಯಾಜ ಅಗರಖೇಡ, ಫಜಲು ಮುಲ್ಲಾ, ದುಂಡು ಬಿರಾದಾರ, ರಾಕೇಶ್ ಅಗಸರ, ಮಾಳು ಮ್ಯಾಕೇರಿ, ಮುತ್ತು ಹೂಸಮನಿ, ಬಾಬು ಮೇತ್ರಿ, ಮಾಹಾದೇವ ಕಂಟಿಕಾರ, ನಾರಾಯಣ ವಾಲಿಕಾರ,ಗೋಪಾಲ ಸುರಪೂರ, ಮುಂತಾದವರು ಹೋರಾಟದಲ್ಲಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.