ದೇಶಕಂಡ ಅತ್ಯುನ್ನತ ರಾಜಕಾರಣಿ ಕಾನ್ಶಿರಾಂ

0

Gummata Nagari : Bijapur News

ದೇವರಹಿಪ್ಪರಗಿ : ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳುವಳಿ ರೂಪಿಸಿ, ಸಂಘಟನೆಯ ಮೂಲಕ ಅಧಿಕಾರ ದೊರಕಿಸಿ ಕೊಟ್ಟ ಕೀರ್ತಿ ಕಾನ್ಶಿರಾಂ ಅವರಿಗೆ ಸಲ್ಲುತ್ತದೆ ಎಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಉಸ್ತುವಾರಿ ಯಶವಂತ ಪೂಜಾರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಕಾನ್ಸಿರಾಂ ಅವರ 14ನೇ ಪುಣ್ಯಸ್ಮರಣೆ ಹಾಗೂ ಬಿಎಸ್ಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಕಾನ್ಶಿರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾನ್ಶಿರಾಂ ದೇಶ ಕಂಡ ಅತ್ಯುನ್ನತ ರಾಜಕಾರಣಿ ಜೊತೆಗೆ ದೀನ ದಲಿತರ ಪರ ಕಳಕಳಿಯುಳ್ಳ ಧೀಮಂತ ಧುರೀಣರಾಗಿದ್ದರು ಎಂದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ್ ಮುಲ್ಲಾ ಮಾತನಾಡಿ, ಅಸಂಖ್ಯಾತ ಹಿಂದುಳಿದ ಜನತೆಯ ಆಶಾಕಿರಣವಾಗಿದ್ದ ಕಾನ್ಶಿರಾಂ ತುಳಿತಕ್ಕೆ ಒಳಗಾದ ಸಮುದಾಯಗಳ ಪರ ನಿಂತ ಏಕೈಕ ನಾಯಕ ಹಾಗೂ ಜನತೆಯಲ್ಲಿ ಹೋರಾಟ ಮನೋಭಾವ ತುಂಬಿದ ತ್ಯಾಗಮಯಿ ಎಂದರು. ನಂತರ ಸಭೆಯ ಮೂಲಕ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ನೇಮಿಸಿ, ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.

ಸಭೆಯಲ್ಲಿ ರಾಜ್ಯಕಾರ್ಯದರ್ಶಿ ಕಲ್ಲಪ್ಪ ತೊರವಿ, ತಾಲೂಕು ಪಂಚಾಯಿತಿ ಸದಸ್ಯ ಲಕ್ಕಪ್ಪ ಬಡಿಗೇರ, ಹಣಮಂತ ಬಮ್ಮನಜೋಗಿ, ಕಾಶೀನಾಥ ತಳಕೇರಿ, ಅರುಣ ಕೋರವಾರ, ಅರುಣಕುಮಾರ ಬಟವಾಲ್, ರಾವುತ ಮಲ್ಲಾರಿ, ಪ್ರಕಾಶ ತಳಕೇರಿ, ರಾಜು ದೊರೆ, ರಸೂಲ್ ಮಳ್ಳಿ, ಸಿದ್ಧನಗೌಡ ಗೊಟಗುಣಕಿ, ಪ್ರಶಾಂತ ಮ್ಯಾಕೇರಿ, ಮಲ್ಲಿಕಾರ್ಜುನ ತಳಕೇರಿ, ನಿಸರ್ಗರಾಜ ನಾಡಕರ್ಣಿ ಸೇರಿದಂತೆ ವಿವಿಧ ಗ್ರಾಮಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.