ಭಾರತ ಬಂದ್ ಗೆ ಜೆಡಿಎಸ್ ಬೆಂಬಲ

0

Gummata Nagari : Bijapur News

ಇಂಡಿ : ಭೂಸುಧಾರಣೆ ತಿದ್ದುಪಡೆ ಕಾಯ್ದೆ ವಿರೋಧಸಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಇಂಡಿ ತಾಲೂಕಾ ಜೆಡಿಎಸ್ ಘಟಕ ಬೆಂಬಲಿಸಿ ತಹಶೀಲ್ದಾರ್ ಚಿದಂಬರಂ ಕುಲಕರ್ಣಿಯವರಿಗೆ ಮನವಿ ಸಲ್ಲಿಸಿದರು.

ಹೋರಾಟದ ನೇತೃತ್ವವನ್ನು ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲರು ವಹಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂಸುಧಾರಣೆ ಹಾಗೂ ಎ.ಪಿ.ಎಮ್.ಸಿ.ಮತ್ತು ಕಾರ್ಮೀಕ ವಿರೋಧಿ ನೀತಿಯನ್ನು ಜಾರಿಗೆ ತರಲು ಹೋರಟಿರುವದು ಜನವಿರೋಧಿಯಾಗಿದೆ ಇಂತಹ ಶಾಸನಗಳು ರೈತ ಕುಲಕ್ಕೆ ಮರಣಶಾಸನವಾಗಿದೆ ಎಂದರು.

ಹೋರಾಟದಲ್ಲಿ ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ, ಪುರಸಭಾ ಸದಸ್ಯ ಸುದೀರ್ ಕರಕಟ್ಟಿ, ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ದುಂಡು ಬಿರಾದಾರ, ಸಿದ್ದಾರಾಮ ಹಂಜಗಿ, ಶಿವಪ್ಪ ಸೂರಪೂರ, ಧರೇಪ್ಪ ನಾವಿ, ಮಾಹಾದೇವ ಬಿರಾದಾರ, ಶೇಖರ ಕಾಂಬ್ಳೆ, ಮುತ್ತು ಹೂಸಮನಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.