ಸಿಂಧೊಳ್ಳು ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಿ

0

Gummata Nagari : Bijapur News

ಬಸವನಬಾಗೇವಾಡಿ : ಪಟ್ಟಣದ ಬಸವ ನಗರದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಈ ಸಿಂಧೊಳ್ಳು ಸಮುದಾಯದ ಜನಾಂಗದವರು ರೈತ ಸಂಘಟನೆ ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಬಿಜಾಪುರ ಜಿಲ್ಲೆಯಾದ್ಯಂತ ವಾಸಿಸುತ್ತಿರುವ ಸಿಂಧೊಳ್ಳು (ದುರುಗಮುರಗಿ- ಪೋತರಾಜ) ಜನಾಂಗಕ್ಕೆ ಸರಕಾರ ಜಾತಿಯ ಪ್ರಮಾಣಪತ್ರ ನೀಡಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕೆಂದು ಅಖಂಡ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಸರಕಾರ ಸಿಂಧೊಳ್ಳು ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಗೆಜೆಟ್ ನೋಟಿಪಿಕೇಷನ್ ಹೋರಡಿಸಿ ಪ್ರತಿಯೊಂದು ಜಿಲ್ಲೆಯಲ್ಲಿ ವಾಸವಾಗಿರುವ ಸಿಂಧೊಳ್ಳು ಸಮುದಾಯದ ಜನತೆಗೆ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಆದರೆ ಬಿಜಾಪುರ ಜಿಲ್ಲೆಯಲ್ಲಿ ವಾಸಿಸುತ್ತಿರುವ ಈ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಹೀಗಾಗಿ ಸಮುದಾಯದ ಮಕ್ಕಳು ಶಿಕ್ಷಣದಿಂದ ಹಾಗೂ ಸರಕಾರದಿಂದ ಬರುವ ಸೌಲಬ್ಯದಿಂದ ವಂಚಿತರಾಗಿದ್ದಾರೆ ಕೂಡಲೇ ಜಿಲ್ಲಾಡಳಿತ ಸಿಂಧೊಳ್ಳು ಸಮುದಾಯದ ಜನತೆಗೆ ಸರಕಾರದ ಆದೇಶದಂತೆ ಜಾತಿ ಪ್ರಮಾಣ ಪತ್ರ ನೀಡಿ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಕಾರ್ಯಧರ್ಶಿ ಸದಾಶಿವ ಬರಟಗಿ ಮಾತನಾಡಿ ಸಿಂಧೊಳ್ಳು ಸಮಾಜದ ಜನತೆ ರೈತ ಸಂಘಟನೆಗೆ ಸೇರ್ಪಡೆಗೊಂಡದ್ದು ಸಂಘಟನೆಗೆ ಬಲನೀಡಿದಂತಾಗಿದ್ದು ಹೋರಾಟದ ಸಂಧರ್ಭದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದರು.

ತಾಲೂಕ ಅಧ್ಯಕ್ಷ ಸಿದ್ರಾಮ ಅಂಗಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ತಾಲೂಕ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಸಿಂದಗಿ ತಾಲೂಕ ಸಂಘಟನಾ ಕಾರ್ಯಧರ್ಶಿ ಗೊಲ್ಲಾಳಪ್ಪ ಚೌದರಿ, ಕೃಷ್ಣಪ್ಪ ಬಮರಡ್ಡಿ ಶಿವಪ್ಪ ಪಾಟೀಲ್ ಸುಭಾಷ ಬಿಸಿರೊಟ್ಟಿ ಈರಣ್ಣ ದೇವರಗುಡಿ ಮುತ್ತಪ್ಪ ಸಿಂಧೊಳ್ಳ ಬುಡ್ಡಪ್ಪ ಸಿಂಧೊಳ್ಳ ಸುಬ್ಬು ಸಿಂಧೊಳ್ಳ ಕಾಟೇಪ್ಪ ಸಿಂಧೊಳ್ಳ ಜಂಬಯ್ಯ ಸಿಂಧೊಳ್ಳ ದುರ್ಗಪ್ಪ ಸಿಂಧೊಳ್ಳ ಮಹಿಳಾ ಘಟಕದ ತಾಲೂಕ ಅಧ್ಯಕ್ಷರು ಶಾರದಾ ಲಮಾಣಿ ಇತರರು ಇದ್ದರು . ಯಲ್ಲಪ್ಪ ಸಿಂಧೊಳ್ಳು ಕಾರ್ಯಕ್ರಮ ನೀರೂಪಿಸಿ ವಂದಿಸಿದರು . ಕಾರ್ಯಕ್ರಮದ ನಂತರ ಅರವಿಂದ ಕುಲಕರ್ಣಿ ಪ್ರಮಾಣ ವಚನ ಬೋಧಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.