ಪರಿಹಾರ ಒದಗಿಸಲು ಒತ್ತಾಯ

ಕಾಲುವೆ ನೀರು ಸೊರಿಕೆ: ಲಕ್ಷಾಂತರ ಮೌಲ್ಯದ ಬೆಳೆ ನಾಶ

0

Gummata Nagari : Bijapur News

ಬಿಜಾಪುರ : ಜಿಲ್ಲೆಯು ಬರಗಾಲ ಜಿಲ್ಲೆಯೆಂದೆ ಹಣೆ ಪಟ್ಟಿಯನ್ನು ಹೊಂದಿರುವುದನ್ನು ಹೋಗಲಾಡಿಸಲು ಕೊಟ್ಯಾಂತರ ರೂಪಾಯಿ ಖರ್ಚುಮಾಡಿ ರೈತರಿಗೆ ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ಸರ್ಕಾರ ಮುಳವಾಡ ಎತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವುದು ಖುಷಿ ತಂದಿದೆ.

ಆದರೆ ಕಲಕೇರಿ ಭಾಗದ ರೈತರ ದುರಾದೃಷ್ಟ ಅನುವ ಹಾಗೆ ಕಳೆದ ವರ್ಷವೂ ಕಾಲುವೆ ಮಾಡುವ ಸಮಯದಲ್ಲಿ ನೀರು ಸೋರಿಕೆಯಾಗಿ ಬೆಳೆ ಬರದೆ ನಷ್ಟ ಅನಭವಿಸುವ ಹಾಗೆ ಆಗಿತ್ತು.

ರೈತರು ದೃತಿಗೆಡದೆ ಈ ವರ್ಷ ಹೋದಿತೂ ಎಂದು ನಂಬಿದ್ದರೂ ಆದರೆ ಗುತ್ತಿಗೆದಾರರ ಅತಿ ಆಸೆಯಿಂದ ಕಳಪೆ ಕಾಮಗಾರಿ ಆಗಿ, ಈ ವರ್ಷ ಕಾಲುವೆಯಲ್ಲಿ ಹರಿಯಬೇಕಾದ ನೀರು ಹೊಲದಲ್ಲಿ ಹರಿಯುತಿವೆ ಇದರಿಂದಾಗಿ ಸುಮಾರು ಕಾಲುವೆಯ ಅಕ್ಕ ಪಕ್ಕದಲ್ಲಿರುವ ಹೊಲಗಳಲ್ಲಿ ನೀರು ಬಸಿದು ನೂರಾರು ಎಕರೆ ಹೊಲದಲ್ಲಿ ನೀರು ನಿಂತು ಬೆಳೆ ಹಾನಿಯಾದ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಕಲಕೇರಿ ಭಾಗದ ರೈತರು ಮನವಿ ಕೊಟ್ಟು ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಹಾಗೆ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಾದ ಸುಧಾಕರ ಅಡಕಿ ಮಾತನಾಡಿ, ಮುಂಗಾರು ಬೆಳೆಯನ್ನೆ ನಂಬಿದ ರೈತರು ಹಾಗೂ ರೈತ ಕುಟುಂಬದವರು ನೇಣು ಹಾಕಿಕೊಂಡು ಸಾಯುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಕೂಡಲೆ ಬೆಳೆ ನಷ್ಟ ಪರಿಹಾರ ಒದಗಿಸಬೇಕು ಮತ್ತು ಗುತ್ತಿಗೆದಾರರ ವಿರುದ್ದ ಕ್ರಮ ಕೈ ಗೊಳ್ಳಬೇಕು ಎಂದರು.

ಇನ್ನೊಬ್ಬ ನೊಂದ ರೈತ ಮಲ್ಲಯ್ಯ ಹಿರೇಮಠ ಮಾತನಾಡಿ, ಈ ವರ್ಷ ಮಳೆ ಚೆನ್ನಾಗಿ ಬಂದಿದೆ, ಬೆಳೆ ಚೆನ್ನಾಗಿ ಬರುಬಹುದು ಎಂಬ ಆಸೆಯಿಂದ ಸಾಲ ಸೋಲ ಮಾಡಿ ಬಿತ್ತನೆ ಮಾಡಿವಿರಿ, ಈಗ ನೋಡ್ರಿ ಕ್ಯಾನಲ್ ಪೂರಾ ಸೋರಿ ನಮ್ಮ ಹೋಲದಾಗ ನೀರ ನಿಂತು ತೊಗರಿ ನೆಟೆ ಹೊಗ್ಯಾವರಿ….. ಹಿಂಗೆ ಆದರ ನಮ್ಮ ಕುಟುಂಬದ ಗತಿ ಹ್ಯಾಂಗರಿ ಎಂದು ನೋವು ತೋಡಿಕೊಂಡರು.

ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ, ಕಲಕೇರಿ ಭಾಗದ ಮುಳವಾಡ ಎತ ನೀರಾವರಿ ಕಾಲುವೆಯೂ ಸಂಪೂರ್ಣ ಕಳಪೆಯಾಗಿದೆ. ಇದರಿಂದಾಗಿ ರೈತರ ಹೊಲದಲ್ಲಿ ನೀರು ನಿಂತು ಹಾನಿಯಾಗಿದೆ. ಆದ್ದರಿಂದ ಶೀಘ್ರವಾಗಿ ರೇತರಿಗೆ ಪರಿಹಾರ ಒದಗಿಸಬೇಕು, ಅಮೃತ್ ಎಜೆನ್ಸಿ ಅವರ ಮೇಲೆ ಮೊಕದಮ್ಮೆ ದಾಖಲಿಸಿ, ಆ ಕಳಪೆ ಕಾಮಗಾರಿಯನ್ನು ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುಧಾಕರ ಅಡಕಿ, ಶಾಂತಯ್ಯ ಗಣಾಚಾರಿ, ಮಲ್ಲಯ್ಯ ಹಿರೇಮಠ, ಸದಾನಂದ ಹಿರೇಮಠ, ಮಹೆಬೂಬಬಾಷಾ ಮನಗೂಳಿ, ಪ್ರೇಮು ಪವಾರ, ದ್ಯಾವಪ್ಪ ದೊಡ್ಡಮನಿ, ಮಡಿವಾಳಪ್ಪ ಚಳ್ಳಗಿ, ರಮೇಶ ಪೂಜಾರಿ, ಆನಂದ ಬೆಣ್ಣಿ, ರಾಜು ದೇಸಾಯಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.