ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ

0

Gummata Nagari : Bijapur News

ಬಿಜಾಪುರ : ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಿ ಕೂಡಲೇ ವರದಿಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕದಂಬ ಸೈನ್ಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಎನ್.ಸಿ.ಕಾಂಬಳೆ ಮಾತನಾಡಿ, ಲಕ್ಷಾಂತರ ಉದ್ಯೋಗ ಹೊರ ರಾಜ್ಯದವರ ಪಾಲಾಗಿದೆ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರಕಾರಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಾಯಿದೆ ಜಾರಿ ಮಾಡಲಿಲ್ಲ. ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ, ಆರ್ಥಿಕ ಕೇಂದ್ರಗಳಲ್ಲಿ, ಕೈಗಾರಿಕೆಗಳಲ್ಲಿ ಮತ್ತು ಐಟಿ ಬಿಟಿಗಳಲ್ಲೂ ಕೂಡ ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ, ಈ ಎಲ್ಲ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವ ಆಶಯದಿಂದ ಇಂದಿನ ಕಾಲ ಘಟಕ್ಕೆ ತಕ್ಕಂತೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಪುನರ್ ಪರಾಮರ್ಶಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನವಿಯ ಮೇರೆಗೆ 2016ರಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಆ ಸಮಿತಿಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು 14 ಶಿಫಾರಸ್ಸುಗಳು ಕೇಂದ್ರ ಸರಕಾರ ಅನುಷ್ಠಾನ ಮಾಡಲು 7 ಶಿಫಾರಸ್ಸುಗಳನ್ನು ಗುರುತಿಸಿ ಪರಿಸ್ಕೃತ ವರದಿಯನ್ನು ಫೆಬ್ರವರಿ 2017 ರಂದು ರಾಜ್ಯ ಸರಕಾರಕ್ಕೆ ಸಲ್ಲಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2017 ರಲ್ಲಿ ಸಲ್ಲಿಸಿರುವ ಡಾ. ಸರೋಜಿನಿ ಮಹರ್ಷಿ ಪರಿಷ್ಕೃತ ವರದಿಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳನ್ನು ಒಳಗೊಂಡಂತೆ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ನೀಡಬೇಕೆಂಬ ಷರತ್ತು ವಿಧಿಸಬೇಕೆಂದು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಕೂಡ ಮಾಡಿದೆ. ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡನೆ ಮಾಡಿ ಕಾಯಿದೆಯಾಗಿ ಇದುವರೆಗೂ ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ನಗರ ಘಟಕದ ಅಧ್ಯಕ್ಷ ವಿನಾಯಕ ಸೊಂಡೂರ ಮಾತನಾಡಿ, ಕನ್ನಡಿಗರಿಗೆ ಉದ್ಯೋಗಕ್ಕಾಗಿ ಪರಿಷ್ಕೃತ ವರದಿಯನ್ನು ಜಾರಿಗೆ ತರದಿದ್ದರೆ ಕನ್ನಡ ಅಭಿವೃದ್ಧಿ ಪ್ರಾದಿಕಾರ ಏಕೆ ಬೇಕು ಎಂಬುದು ಸಮಸ್ತ ಕನ್ನಡಿಗರ ಪ್ರಶ್ನೆಯಾಗಿದೆ, ಕನ್ನಡಿಗರ ಉದ್ಯೋಗ ಮೀಸಲಾತಿಗೆ ಎಲ್ಲಾ ಸರ್ಕಾರಗಳು ಹಗಲು ಮೋಸ ಮಾಡಿವೆ, ಇನ್ನಾದರೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಡಾ.ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸುನೀಲ ಹೊಸಳ್ಳಿ, ನಜೀರ ಗುಲಬರ್ಗಾ, ಸಂಜೀವ ಕೆಂಗನಾಳ ಶಿವಕುಮಾರ ಕಾಂಬಳೆ, ಸಂತೋಷ ಭಾಸ್ಕರ ಪಿ.ಎಸ್. ಧನ್ಯಾಳ, ಆರ್.ಬಿ. ಮಾನಕರ, ಸುರೇಶ ಹಳ್ಳಿ, ಬಸವರಾಜ ನಾಯ್ಕೋಡಿ, ಕಾಸೆ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.