ಗ್ರಾಮೀಣ ಪ್ರದೇಶ ಅಭಿವೃದ್ದಿಯಾದರೆ ದೇಶ ಅಭಿವೃದ್ದಿಯಾಗುತ್ತದೆ: ಮನಗೂಳಿ

ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ೨೦ ರೂ. ಲಕ್ಷಗಳ ಅನುದಾನದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು

0

ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುತ್ತದೆ. ಆದ್ದರಿಂದ ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.

ಸಿಂದಗಿ: ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುತ್ತದೆ. ಆದ್ದರಿಂದ ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.

ಸೊಮವಾರ ತಾಲೂಕಿನ ಬೋರಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ೨೦ ರೂ. ಲಕ್ಷಗಳ ಅನುದಾನದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗ ಕ್ಷೇತ್ರದಲ್ಲಿ ಸಾಕಷ್ಟು ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡೆಸಿದೆ. ಈಗ ಸರಕಾರದ ಯೋಜನೆ ಅಡಿಯಲ್ಲಿ ೨೦ ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಗ್ರಾಮದಲ್ಲಿ ಅಭಿವೃದ್ದಿ ಪಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಮತಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ವಿವಿಧ ಯೋಜನೆಗಳಲ್ಲಿ ಅನುಧಾನ ತಂದು ಅವುಗಳ ಅಭಿವೃದ್ದಿ ಮಾಡುವುದೇ ಗುರಿಯಾಗಿದೆ. ಚುಣಾವಣೆಯಲ್ಲಿ ಕೊಟ್ಟ ಮಾತಿನಂತೆ ಕೆಲಸಗಳು ಮಾಡಲಾಗುತ್ತಿದೆ.

ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಹಕಾರ ನೀಡುತ್ತಿರುವುದು ನನಗೆ ಉತ್ಸಾಹ ತಂದಿದೆ ಎಂದರು.

ಸಿಸಿ ರಸ್ತೆ ನಿರ್ಮಾಣ ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಕೆಸಲಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಕೆಆರ್‌ಐಡಿಎಲ್ ಇಂಜನಿಯರ್ ಆದ್ ಪ್ರಫುಲ್ ಖ್ಯಾತನ್, ಶಿವಣ್ಣ ಕೊಟಾರಗಸ್ತಿ , ಪ್ರಭು ದುದ್ದಣಗಿ, ಶರಣಪ್ಪ ಡಂಬಳ, ಷಣ್ಮುಖ ತೆಲಗಾಣಿ, ವಿಶ್ವನಾಥ ಹಗಟಗಿ, ಶಂಕರ ಬೋರಗಿ, ಗೋಲ್ಲಾಳ ಡಂಬಳ, ಬಸವರಾಜ ಕಾಳಗಿ, ಬಸವರಾಜ ಯಲಗೋಡ, ಕಾಸಯ್ಯ ಸಾಲಿಮಠ, ಕಲ್ಲಪ್ಪ ಕೊಂಡಗೂಳಿ ಭೀಮಣ್ಣ ಹಿಂಚಗೇರಿ, ವೀರಭದ್ರ ಶಾಬಾದಿ, ಸಿದ್ದರಾಮ ರಠಗಲ್ಲ, ಈರಣ್ಣ ರಠಗಲ್ಲ ಹಾಗೂ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.