ಪಿಎಸ್ಐ ಹುದ್ದೆಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ

0

Gummata Nagari : Bijapur News

ತಿಕೋಟಾ : ಮನುಷ್ಯ ಏನನ್ನಾದರು ಸಾಧನೆ ಮಾಡಬೇಕಾದರೆ, ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂದು ಬಾಬಾನಗರದ ಷನ್ಮೂಕಾರೂಢ ಶಿವಾಚಾರ್ಯರ ಮಠದ ಮುಂದಿನ ಉತ್ತರ ಅಧಿಕಾರಿ ಪರಮಪೂಜ್ಯ ಅಭಿನವ ಈರಣ್ಣ ದೇವರು ಹೇಳಿದರು.

ಶ್ರೀಮದ ಉಜ್ಜಯಿನಿ ಶಾಖಾ ಮಠ, ಶ್ರೀ ಹೀರೆಮಠ ಟ್ರಸ್ಟ, ಸಿದ್ದಮಲ್ಲೆಶ್ವರ ಸ್ವಾಮಿ ದೇವಸ್ಥಾನ ಹಾಗೂ ಬಾಬಾನಗರ ಗ್ರಾಮದ ಭಕ್ತರ ವತಿಯಿಂದ ಪಿ.ಎಸ್.ಐ. ಹುದ್ದೆಗೆ ಆಯ್ಕೆಯಾದ ಸಾಧಕರಿಗೆ ಬಾಬಾನಗರದ ಷನ್ಮೂಕ ಶಿವಾಚಾರ್ಯರ ಮಠದಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

ಹುಟ್ಟಿದ ಮನುಷ್ಯನಿಗೆ ಹೆಸರು ಇರುವುದಿಲ್ಲ, ಉಸಿರು ಇರುತ್ತದೆ. ಅವನ ಮರಣದ ಸಮಯದಲ್ಲಿ ಉಸಿರು ಇರುವುದಿಲ್ಲ ಹೆಸರು ಮಾತ್ರ ಇರುತ್ತದೆ. ಆದ ಕಾರಣ ಭೂಮಿಯ ಮೇಲೆ ಬಂದ ನಂತರ ಏನನ್ನಾದರೂ ಸಮಾಜದಲ್ಲಿ ಸಾಧನೆ ಮಾಡಿ ತಮ್ಮ ಹೆಸರನ್ನು ಉಳಿಸಿಕೋಳಬೇಕು ಎಂದರು.

ತಿಕೋಟಾ ಪೋಲಿಸ್ ಠಾಣೆಯ ಪಿ.ಎಸ್.ಐ ಬಸವರಾಜ ಬಿನಸಿಕೋಪ್ಪ ಮಾತನಾಡಿ ಪೋಲಿಸ್ ಠಾಣೆ ರಕ್ಷಣೆ ಮಾಡುವ ದೇವಸ್ಥಾನ ಇದ್ದ ಹಾಗೆ. ಅದನ್ನು ಒಳ್ಳೆಯ ರೀತಿ ಬಳಸಿಕೋಳ್ಳಬೇಕು ಎಂದರು.

ಯಾರು ಕೋರ್ಟ್ ಕಚೇರಿಗೆ ಹೋಗಬೇಡಿ, ಹೊಗಿ ನಿಮ್ಮ ಸಮಯ, ನೇಮ್ಮದಿ, ಹಣ, ಹಾಳು ಮಾಡದೇ ಧಾನ ಧರ್ಮ ಹಾಗೂ ಸಮಾಜದಲ್ಲಿ ಒಳ್ಳೆಯ ಕಾರ್ಯಗಳು ಮತ್ತು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಕೋಡಬೇಕು ಎಂದರು.

ಪಿ.ಎಸ್.ಐ ಹುದ್ದೆಗೆ ಆಯ್ಕೆಯಾದ ನಾಗಮ್ಮ ಯಂಕಪ್ಪ ಹೊನವಾಡ ಮತ್ತು ನಾಗಮ್ಮ ಮುತ್ತಪ್ಪಾ ಪಕಿರಪ್ಪಗೋಳ ಇವರಿಗೆ ಪೂಜ್ಯರಿಂದ ಸತ್ಕಾರ್ಯ ಕಾರ್ಯಕ್ರಮ ನಡೆಯಿತು.

ಮಠದ ಷಣ್ಮೂಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಈರಣ್ಣಗೌಡ ರುದ್ರಗೌಡ, ಮಲ್ಲಕನಗೌಡ ರುದ್ರಗೌಡ, ರಾಚಣಗೌಡ ಪಾಟೀಲ, ಸಾಬು ಚೌಧರಿ, ರಾಚಯ್ಯ ಸಕ್ರಿಮಠ, ಮೃತುಂಜಯ ಮಠಪತಿ, ವಿಜಯಕುಮಾರ ಮಠಪತಿ, ಸಿದಗೊಂಡ ರುದ್ರಗೌಡ, ಶಿವಾನಂದ ಮೆಂಡಗುದ್ಲಿ ಇದ್ದರು.

ಶ.ಸಾ.ಪ ತಿಕೋಟಾ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಹೀರೆಮಠ, ನಿರೂಪಿಸಿ ಸ್ವಾಗತಿಸಿ, ಶಂಕ್ರಯ್ಯ ಮಠ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.