ಹಿಂದಿ ವಿಶೇಷ ಸಪ್ತಾಹ ಆಚರಣೆ

0

Gummata Nagari : Bijapur News

ಬಿಜಾಪುರ : ಬಿಜಾಪುರದ ಸೈನಿಕ ಶಾಲೆಯಲ್ಲಿ ಹಿಂದಿ ವಿಶೇಷ ಸಪ್ತಾಹ ಆಚರಿಸಲಾಯಿತು.

ಹಿಂದಿ ಭಾಷೆಯ ಮಹತ್ವ, ಹಿಂದಿ ಸಾರಸ್ವತ ಲೋಕದ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.

ಹಿಂದಿ ಭಾಷೆಯ ಮಹತ್ವ, ಆತ್ಮನಿರ್ಭರ ಭಾರತ ಹಾಗೂ ಹಿಂದಿ ಎಂಬ ವಿಷಯಗಳ ಕುರಿತು ಹಿಂದಿ ಭಾಷೆಯಲ್ಲಿ ನಿಬಂಧ ಸ್ಪರ್ಧೆ, ಹಿಂದಿಯಲ್ಲಿ ಕಥೆ ಬರೆಯುವ ಹಾಗೂ ಹಿಂದಿ ಕವನ ವಾಚಿಸುವ ಸ್ಫರ್ದೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಸಂತೋಷದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಹಿಂದಿ ಭಾಷಾ ಶ್ರೀಮಂತಿಕೆಯನ್ನು ಅರಿತುಕೊಂಡರು.

ಅದೇ ತೆರನಾಗಿ ರಕ್ಷಣಾ ಪಡೆಯ ಅಧಿಕಾರಿಗಳ ಸಾಹಸಗಾಥೆ ವಿವರಿಸುವ ಪುಸ್ತಕ ಸಮೀಕ್ಷೆ, ಆ ಪುಸ್ತಕಗಳ ಸಾರಾಂಶ ಹಾಗೂ ವಿಮರ್ಶೆಯನ್ನು ಹಿಂದಿ ಭಾಷೆಯಲ್ಲಿ ಬರೆಯುವ, ಹಿಂದಿ ಸಂಭಾಷಣೆ ಬರೆಯುವ ಹೀಗೆ ನಾನಾ ರೀತಿಯ ಭಿನ್ನ-ವಿಭಿನ್ನ ಹಾಗೂ ಅರ್ಥಪೂರ್ಣ ಸ್ಪರ್ಧೆಗಳನ್ನು ಸಹ ಸಂಘಟಿಸಲಾಗಿತ್ತು. ಆನಲೈನ್ ಮೂಲಕ ನಡೆದ ಈ ಸಪ್ತಾಹದಲ್ಲಿ ಹಿಂದಿ ಭಾಷೆಯಲ್ಲಿ ನುರಿತ ಪಂಡಿತರು, ಹಿಂದಿ ಭಾಷಾ ವಿದ್ವಾಂಸರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿ ಹಿಂದಿ ಭಾಷೆಯ ಮಹತ್ವದ ಬಗ್ಗೆ ಸಾರಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸೈನಿಕ ಶಾಲೆಯ ಪ್ರಾಚಾರ್ಯ ಕ್ಯಾಪ್ಟನ್ ವಿನಯ ತಿವಾರಿ, ಹಿಂದಿ ಭಾರತದ ರಾಷ್ಟçಭಾಷೆ, ಹಿಂದಿ ಭಾಷೆ ಭಾವೈಕ್ಯತೆಯನ್ನು ಬೆಸೆಯುವ ಆದ್ಯ ಭಾಷೆಯಾಗಿದೆ, ಹಿಂದಿ ಭಾಷೆಯ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ, ಹಿಂದಿ ಭಾಷೆಗೆ ಕೊಡುಗೆ ನೀಡಿರುವ ಸಾಹಿತಿಗಳ ಬಗ್ಗೆ ನಾವು ಅಧ್ಯಯನ ಮಾಡಬೇಕು, ಹಿಂದಿ ಭಾಷೆಯನ್ನು ಕಲಿಯುವ, ಹಿಂದಿ ಸಾಹಿತ್ಯವನ್ನು ಅಧ್ಯಯನ ಮಾಡುವ ಮನೋಭಾವ ರೂಡಿಸಿಕೊಳ್ಳಬೇಕು, ಹಿಂದಿ ಭಾಷೆಯ ಬಗ್ಗೆ ಸದಾ ಗೌರವ ಹೊಂದಿರಬೇಕು ಎಂದರು.

ಅಂಜುಮನ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಎಂ.ಎ. ಪೀರಾ ಅವರು ಹಿಂದಿ ರಾಷ್ಟ್ರದ ಸಂಪರ್ಕ ಭಾಷೆ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.

ಉಪ ಪ್ರಾಚಾರ್ಯ ಲೆಫ್ಟಿನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಮ್ ಸಿಂಗ್, ವರಿಷ್ಠ ಶಿಕ್ಷಕ ಡಾ. ಸಿ.ರಾಮ್‌ರಾವ್ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.