ತಾಲೂಕಿನಾದ್ಯಂತ ಭಾರಿ ಮಳೆ, ತುಂಬಿದ ಹಳ್ಳಗಳು

0

Gummata Nagari : Bijapur News

ತಾಳಿಕೋಟೆ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಶುಕ್ರವಾರ ಸಂಜೆಯಿAದಲೇ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಎಲ್ಲಿ ನೋಡಿದರಲ್ಲಿ ಮಳೆ ನೀರು. ನೀರು ಹರಿಯದ ಪ್ರದೇಶಗಳು ಕೆರೆಗಳಂತಾಗಿದ್ದವು.

ಭಾರಿ ಮಳೆಯಿಂದಾಗಿ ಎಷ್ಟೋ ವರ್ಷಗಳಿಂದ ಸ್ವಚ್ಛಗೊಳ್ಳದ ಪಟ್ಟಣದ ಚರಂಡಿಗಳು ಮಳೆಯ ಹೊಡೆತಕ್ಕೆ ಸಂಪೂರ್ಣ ಸ್ವಚ್ಛವಾಧವು. ಇದರಿಂದ ಡೋಣಿ ನದಿಯಲ್ಲಿನ ನೀರಿನ ಬಣ್ಣವೇ ಕಪ್ಪಾಗಿ ಹೋಯಿತು. ಅಷ್ಟೊಂದು ಕೊಳೆ ನ

ತಾಲೂಕಿನಾದ್ಯಂತ ಭಾರಿ ಮಳೆ, ತುಂಬಿದ ಹಳ್ಳಗಳು - Gummata Nagari (2)ದಿ ಸೇರಿ, ಊರು ಸ್ವಚ್ಛ ಮಾಡಿ ನದಿ ಮಲೀನಗೊಳಿಸಿದವು. ಬಾರಿ ಮಳೆಯಿಂದಾಗಿ ಡೋಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಏಕ ಕಾಲದಲ್ಲಿ ಬಾರಿ ಪ್ರಮಾಣದಲ್ಲಿ ಪ್ರವಾದಿಂದ ಹರನಾಳ ಹಾಗೂ ಹಡಗಿನಾಳ ಮಾರ್ಗದಲ್ಲಿರುವ ಸೇತುವೆಗಳು ಜಲಾವೃತವಾಗಿದ್ದ ಜನ ಸಂಚಾರ ನಿಂತು ಹೋಗಿದೆ.

ಕಡಿಮೆ ಪ್ರವಾಹವನ್ನು ಅಂದಾಜಿಸಿ ನದಿ ದಾಟಲು ಹೋದ ಬೈಕ್ ಸಮೇತ ಸೇತುವೆ ಪಕ್ಕಕ್ಕೆ ವಾಲಿದ ಘಟನೆ ನಡೆದಿದೆ. ಮೂಕಿಹಾಳ ಗ್ರಾಮದ ಮಲ್ಲಣ್ಣ ತಳವಾರ ಪ್ರವಾಹದಲ್ಲಿ ನದಿ ದಾಟಲು ಹೋಗಿ ಅಪಾಯಕ್ಕೆ ಸಿಲುಕಿ ಸೇತುವೆ ಪಕ್ಕದ ಕಲ್ಲಿಗೆ ಸಿಲುಕಿದ್ದಾನೆ. ತಕ್ಷಣ ನದಿ ದಂಡೆಯಲ್ಲಿರುವರು ತಕ್ಷಣ ನೆರವಿಗೆ ದಾವಿಸಿ ಬೈಕನ್ನು ಮರಳಿ ತೆಗೆದುಕೊಂಡು ಹೋಗಿದ್ದು ಅಪಾಯದಿಂದ ಪಾರಾಗಿದ್ದಾನೆ.

ಸೋಗಲಿ ಹಳ್ಳ ಹಾಗೂ ಡೋಣಿ ನದಿ ಪ್ರವಾಹದಿಂದ ಇವೆರಡರ ಮಧ್ಯೆ ಇರುವ ಹಡಗಿನಾಳ ಮತ್ತೆ ದ್ವೀಪವಾಗಿದೆ. ಜನತೆ ಹೊರಬರದಂತೆ ಆಗಿದೆ. ಪಟ್ಟಣದಲ್ಲಿನ ಜಾನಕಿ ಹಳ್ಳಿ, ಅರೆ ಹಳ್ಳ ತುಂಬಿ ಹರಿದವು. ಜಾನಕಿ ಹಳ್ಳ ತುಂಬಿ ಹರಿದಿದ್ದರಿಂದಾಗಿ ಆಶ್ರಯ ಕಡೆಗೆ ಹೋಗುವ ಜನ ಪರದಾಟ ನಡೆಸುವಂತಾಯಿತು. ಬಾರಿ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ಕೆರೆಗಳಾಗಿದ್ದು ರೈತಾಪಿಗಳು ಕಂಗಾಲಾಗಿದ್ದಾರೆ.

ಪಟ್ಟಣದಲ್ಲಿ 65.1ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಒಂದೇ ದಿನ ಬಾರಿ ಮೆಳಯಿಂದಾಗಿ ಪಟ್ಟಣದಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.