ವಾರ್ಡ್ 23, 27ರಲ್ಲಿ ಆರೋಗ್ಯ ತಪಾಸಣೆ

ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಕಾರ್ಯಕ್ರಮ

0

Gummata Nagari : Bijapur News

ಬಿಜಾಪುರ : ನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ನಗರದ ವಾರ್ಡ್ 23 ಹಾಗೂ 27ರಲ್ಲಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯ ರವೂಫ್ ಶೇಖ್ ಹಾಗೂ ಮಂಜುಳಾ ಜಾಧವ ಮುಖಂಡತ್ವದಲ್ಲಿ ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿ ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಕೊರೊನಾ ಮಹಾಮಾರಿ ರೋಗ ಇಡೀ ಮಾನವ ಜಗತ್ತಿಗೆ ಒಂದು ಕಂಟಕವಾಗಿದ್ದು ಇದನ್ನು ಹೇಗೆ ತಡೆಯಬೇಕೆನ್ನುವ ನಿಟ್ಟಿನಲ್ಲಿ ಜನತೆ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಾಯಿಲೆಯ ಲಕ್ಷಣಗಳು ಕಂಡುಬAದಲ್ಲಿ ತಕ್ಷಣ ವೈದ್ಯಾಧಿಕಾರಿಗಳಿಗೆ ಸಂಪರ್ಕಿಸುವುದು ಸೂಕ್ತವಾಗಿದ್ದು, ಯಾರು ಇದನ್ನು ನಿರ್ಲಕ್ಷಿಸಬಾರದು, ಜನ ಇದಕ್ಕೆ ಭಯಪಡುವ ಅಗತ್ಯವು ಇಲ್ಲ ಭಯಪಟ್ಟು ಎಷ್ಟೋ ಜನ ಸಾವಿಗೀಡಾಗುತ್ತಿರುವುದು ದುರದೃಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು ಕಾರ್ಯಕರ್ತರು ಮನೆ-ಮನೆಗಳಿಗೆ ತೆರಳಿ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ತಿಳಿಹೇಳಿ ಆಸ್ಪತ್ರೆಗೆ ಕಳುಹಿಸಿ ಅವರ ಜೀವ ರಕ್ಷಣೆ ಕೆಲಸ ಮಾಡಬೇಕು ಎಂದು ಹೇಳಿದರು.

ಸರಕಾರ ಕೋವಿಡ್-19 ಮಹಾಮಾರಿ ರೋಗದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇಂದು ರಾಜ್ಯದಲ್ಲಿ ರೋಗ ಇಷ್ಟೊಂದು ಮಟ್ಟದಲ್ಲಿ ಹರಡಲು ಕಾರಣವಾಗಿದೆ. ಕೊರೊನಾ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ಜನರ ಹಿತ ಕಾಪಾಡುವಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಕಾರಣ ಕಾಂಗ್ರೆಸ್ ಪಕ್ಷದ ವಾರಿಯರ್ಸ್ ಬಿಜಾಪುರ ನಗರ ಮತಕ್ಷೇತ್ರದ ಪ್ರತಿಯೊಂದು ಮನೆ-ಮನೆಗೆ ತೆರಳಿ ಜನರ ಜೀವದ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು ನಿಷ್ಠೆಯಿಂದ ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಇರ್ಫಾನ್ ಶೇಖ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜನರು ನಮ್ಮ ಪಕ್ಷದ ವಾರಿಯರ್ಸಗಳಿಗೆ ಸ್ಪಂದಿಸಿ ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಎಂದಿಗೂ ಜನಪರ ಪಕ್ಷವಾಗಿದ್ದು ನಮಗೆ ಜನರ ಹಿತದ ಜೊತೆಗೆ ಆರೋಗ್ಯವು ಮುಖ್ಯವಾದ್ದರಿಂದ ನಾವೆಲ್ಲಾ ಮನೆ-ಮನೆಗೆ ತೆರಳಿ ಸಮಸ್ತ ಜನತೆಯ ಜೀವ ಕಾಪಾಡುವ ಕೆಲಸ ಮಾಡೋಣ ಎಂದು ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ಕೊರೊನಾ ಮಹಾಮಾರಿ ರೋಗ ಇಡೀ ಮಾನವ ಜಗತ್ತಿಗೆ ಒಂದು ಕಂಟಕವಾಗಿದ್ದು ಇದನ್ನು ಹೇಗೆ ತಡೆಗಟ್ಟುವಲ್ಲಿ ಜನತೆ ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಾಯಿಲೆಯ ಲಕ್ಷಣ ಕಂಡುಬAದಲ್ಲಿ ತಕ್ಷಣ ವೈದ್ಯಾಧಿಕಾರಿಗಳಿಗೆ ಸಂಪರ್ಕಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು ಕಾರ್ಯಕರ್ತರು ಮನೆ-ಮನೆಗೆ ತೆರಳಿ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ತಿಳಿಹೇಳಿ ಆಸ್ಪತ್ರೆಗೆ ಕಳುಹಿಸಿ ಅವರ ಜೀವ ರಕ್ಷಣೆ ಕಾರ್ಯ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಮಹ್ಮದ್ ರಫೀಕ್ ಟಪಾಲ, ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಪಾಲಿಕೆ ಸದಸ್ಯರಾದ ರವೂಫ್ ಶೇಖ್ ಮುಂತಾದವರು ಮಾತನಾಡಿದರು.

ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಮಂಜುಳಾ ಜಾಧವ, ಜಯಶ್ರೀ ಭಾರತೆ, ಆಯಿಷಾ ಬೇಪಾರಿ, ಕುಸುಮ ಪವಾರ, ಹಾಜಿಲಾಲ ದಳವಾಯಿ, ಸದ್ದಾಂ ಅಕ್ಕಲಕೋಟ, ಶಮೀಮ ಅಕ್ಕಲಕೋಟ, ಎಂ.ಎ.ಬಕ್ಷಿ, ತಾಜುದ್ದೀನ ಖಲೀಫ್, ಅಸೀಮಾ ಕಾಲೇಬಾಗ, ಹಾಜಿ ಪಿಂಜಾರ್, ಇಲಿಯಾಸ್ ನಾಗರಬಾವಡಿ, ಅಲ್ತಾಫ್ ಅಸ್ಕಿ ಮುಂತಾದವರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.