ಬಿಜೆಪಿ ಹಿಂದೂಳಿದ ಮೋರ್ಚಾದ ಅಧ್ಯಕ್ಷರಾಗಿ ಗುರುನಾಥ ಆಯ್ಕೆ

ಬಿಜೆಪಿ ಹಿಂದೂಳಿದ ಮೋರ್ಚಾದ ಅಧ್ಯಕ್ಷರಾಗಿ ಪಡಗಾನೂರ ಗ್ರಾಮದ ಗುರುನಾಥ ಮುರಡಿ ನೇಮಕಗೊಂಡಿದ್ದಾರೆ

0

ದೇವರಹಿಪ್ಪರಗಿ: ಮತಕ್ಷೇತ್ರದ ಬಿಜೆಪಿ ಹಿಂದೂಳಿದ ಮೋರ್ಚಾದ ಅಧ್ಯಕ್ಷರಾಗಿ ಪಡಗಾನೂರ ಗ್ರಾಮದ ಗುರುನಾಥ ಮುರಡಿ ನೇಮಕಗೊಂಡಿದ್ದಾರೆ.
ಪ್ರಧಾನಕಾರ್ಯದರ್ಶಿಗಳಾಗಿ ದೇವರಹಿಪ್ಪರಗಿಯ ರಾವುತ್ ಅಗಸರ, ಕಡ್ಲೇವಾಡ ಪಿಸಿ ಗ್ರಾಮದ ವಿದ್ಯಾಧರ ಸಂಗೋಗಿ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಚಿದಾನಂದ ಕುದರಕಾರ, ಗೌಡಣ್ಣ ಪಾಟೀಲ, ಪರಮಾನಂದ ಅಳ್ಳಗುಂಡಗಿ, ಮಲ್ಲಿಕಾರ್ಜುನ ನಾಯ್ಕಲ್, ಭೀಮಣ್ಣ ಮೈಲೇಶ್ವರ ನೇಮಕವಾಗಿದ್ದು, ಕಾರ್ಯದರ್ಶಿಗಳಾಗಿ ರಾಜಶೇಖರ ಗುರಗುಂಟಗಿ, ಭೀಮಾಶಂಕರ ಪತ್ತಾರ, ಶಿವಣ್ಣ ಬಾಗೇವಾಡಿ, ವಿರೇಶ ಸಜ್ಜನ, ಭೀಮಪ್ಪ ಹಾಲನ್ನವರ ನೇಮಕ ಮಾಡಲಾಗಿದೆ. ಕೋಶಾಧ್ಯಕ್ಷರಾಗಿ ಹುಲ್ಲಪ್ಪ ಹೊನ್ನಮಟ್ಟಿ ನೇಮಕವಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.