ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರು

0

Gummata Nagari : Bijapur News

ದೇವರಹಿಪ್ಪರಗಿ : ಮಳೆಯ ಅರ್ಭಟಕ್ಕೆ ದ್ರಾಕ್ಷಿ ಬೆಳೆಯೆಲ್ಲ ಹಾಳಾಗಿದ್ದು, ದ್ರಾಕ್ಷಿ ಬೆಳೆಗಾರ ಆತಂಕದಲ್ಲಿದ್ದಾನೆ. ದ್ರಾಕ್ಷಿ ಬೆಳೆಗಾರರು ಚಿಂತೆಯ ಕಾರ್ಮೋಡದಲ್ಲಿ ಕಾಲ ಕಳೆಯುವಂತಾಗಿದೆ.

ಚಾಟ್ನಿ ಮಾಡುವ ಸಮಯ ಬಂದಿದೆ ಎನ್ನುವಷ್ಟರಲ್ಲಿ ಕಳೆದ ಹದಿನೈದು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ವಾಣಿಜ್ಯ ಬೆಳೆ ದ್ರಾಕ್ಷಿ ಹಾಳಾಗುವತ್ತ ಸಾಗಿದೆ.ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದ್ರಾಕ್ಷಿಯೆಲ್ಲ ಮಣ್ಣು ಪಾಲಾಗುತ್ತಿದ್ದು, ದ್ರಾಕ್ಷಿ ಬೆಳೆದ ರೈತ ಮಮ್ಮಲ ಮರಗುವಂತಾಗಿದೆ.

ಕಳೆದ ಹದಿನೈದು ದಿನಗಳಿಂದ ಅವಿರತ ಮಳೆ ಬರುತ್ತಿದ್ದು, ಮಳೆಯ ಹೊಡೆತಕೆ ದ್ರಾಕ್ಷಿ ಬೆಳೆ ಹಾಳಾಗುತ್ತಿದೆ. ಇಡೀ ದ್ರಾಕ್ಷಿ ತೋಟಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ದಾವಣಿಯಂತಹ ರೋಗಗಳು ದ್ರಾಕ್ಷಿ ಬೆಳೆಗಳನ್ನು ಹಾಳು ಮಾಡುತ್ತವೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ದ್ರಾಕ್ಷಿ ಬೆಳೆಯುತ್ತಿರುವ ರೈತನ ಗೋಳು ಯಾರು ಕೇಳದಂತಾಗಿದೆ. ದಾವಣಿ ರೋಗದಿಂದ ರಕ್ಷಿಸಿ ಅರ್ದ-ಮರ್ಧ ಬೆಳೆ ಪಡೆಯುವುದರಲ್ಲಿಯೇ ದ್ರಾಕ್ಷಿ ಹಣ್ಣಿನ ಕೆಳಗೆ ನೀರು ಗಟ್ಟಿಯಾದಂತಾಗಿ ಮಮ್ಮಿ ಪಿಕೇಷನ್ ರೋಗಕ್ಕೆ ಒಳಗಾಗುವುದರಿಂದ ಇಡೀ ಬೆಳೆಯೆಲ್ಲ ಹಾಳಾದಂತಾಗುತ್ತದೆ.

ಪರಿಹಾರ ನೀಡಲು ಆಗ್ರಹ:

ಮಳೆ ಹೆಚ್ಚಾಗಿ ಹಾಳಾದ ದ್ರಾಕ್ಷಿ ಬೆಳೆ ಸಮೀಕ್ಷೆ ಮಾಡಿ ಸರಕಾರ ಪರಿಹಾರ ಘೋಷಿಸಿ ರೈತರ ಅನುಕೂಲಕ್ಕೆ ಬರಬೇಕು. ಈ ಮೂಲಕ ಅನ್ನದಾತನ ಅಳಲು ಕೇಳಲು ಮುಂದಾಗಬೇಕು ಎಂದು ದ್ರಾಕ್ಷಿ ಬೆಳೆಗಾರರಾದ ಕಲ್ಲನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ನಾಶೀರ ಬೇಪಾರಿ, ಪ್ರಸಾದಗೌಡ ಪಾಟೀಲ, ಪೋಮು ರಾಠೋಡ ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.