ಗ್ರಾಪಂ ನೌಕರರಿಗೆ ಬಡ್ತಿ ಸೌಲಭ್ಯ ನೀಡಲು ಆಗ್ರಹಿಸಿ ಧರಣಿ

0

Gummata Nagari : Bijapur News

ಬಿಜಾಪುರ : ಗ್ರಾಮ ಪಂಚಾಯತ ನೌಕರರಿಗೆ ಬಡ್ತಿ ಸೌಲಭ್ಯ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯತ ನೌಕರರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಬಿಜಾಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ. ಸಿಇಓ ಗೋವಿಂದ ರೆಡ್ಡಿ, ಗ್ರಾಮ ಪಂಚಾಯತ ನೌಕರರ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಿ ಮಟ್ಟದಲ್ಲಿರುವ ಬೇಡಿಕೆಗಳನ್ನು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮತ್ತು ತಮ್ಮ ವ್ಯಾಪ್ತಿಯ ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಗ್ರಾಮ ಪಂಚಾಯತ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮೀನಮೇಷ ಎಣಿಸಬಾರದು, ಗ್ರಾಮದ ಅಭಿವೃದ್ಧಿ, ಕೊರೊನಾ ಕಾರ್ಯಚಟುವಟಿಕೆ ಮೊದಲಾದ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಗ್ರಾ.ಪಂ. ನೌಕರರ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು ಎಂದರು. ಗ್ರಾ.ಪಂ. ಬಿಲ್ ಕಲೆಕ್ಟರ್, ಗುಮಾಸ್ತರಿಗೆ ಸರ್ಕಾರ ನಿಗದಿಗೊಳಿಸಿದ 13,815 ರೂ., ಸಿಪಾಯಿ ಹುದ್ದೆಯಲ್ಲಿರುವವರಿಗೆ 11,703 ಹಾಗೂ ಸ್ವಚ್ಛತಾ ಕರ್ಮಚಾರಿಗಳಿಗೆ 14,563 ರೂ.ಗಳನ್ನು ಕೂಡಲೇ ನೀಡಬೇಕು, 14 ನೇ ಹಾಗೂ 15 ಹಣಕಾಸು ಆಯೋಗದ ಹಣದಲ್ಲಿ ಬಾಕಿ ಉಳಿದ ಸಿಬ್ಬಂದಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು. ಅದೇ ತೆರನಾಗಿ ನಿವೃತ್ತಿಯಾಗಿರುವ ಗ್ರಾ.ಪಂ. ನೌಕರರಿಗೆ 15 ತಿಂಗಳು ಗ್ರಾಚ್ಯೂಟಿ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿದರು. ವಿಠ್ಠಲ ಹೋನಮೋರೆ, ಸುರೇಖಾ ರಜಪೂತ, ಸಂಗಪ್ಪ ಸೀತಿಮನಿ, ಮಾತನಾಡಿದರು, ಮಲ್ಲಪ್ಪ ಹೊಸಕೇರಿ, ಶೇಖು ಲಮಾಣಿ, ಸಂಗಪ್ಪ ಗಂಗಶೆಟ್ಟಿ, ಸಂಗಪ್ಪ ಡಿಗ್ಗಾವಿ, ನಿಂಗಪ್ಪ ಮಾದರ, ರಂಏಶ ಕರಿಗಾರ, ಶಂಕರ ದಂಡಿನ, ನಾಗಪ್ಪ ತೆಲಸಂಗ, ಪ್ರಭಾಕರ ಬಿರಾಜದಾರ, ಚಿಕ್ಕಯ್ಯ ಹೋಕಳೆ, ಶ್ರೀಕಾಂತ ಪೂಜಾರಿ, ಶಿವಪ್ಪ ಲಾಡರ, ಗುರಣ್ಣ ಮನಗೂಳಿ, ಕಾಶೀನಾಥ ಜಾಧವ, ಯಲ್ಲಪ್ಪತೋಳೆ, ಸದಾಶಿವ ಅಂಗಡಿ, ರಫೀಕ ವಾಲೀಕಾರ, ಶ್ರೀಶೈಲ ಕವಿ, ಚಂದ್ರಶೇಖರ ವಾಲಿಕಾರ, ಮಲ್ಲಿಕಾರ್ಜು ಮಾದರ, ಎಂ.ಕೆ.ಚಳ್ಳಗಿ, ಮುರಗೇಂದ್ರ ಹುಣಶ್ಯಾಳ, ಭೀಮಾಬಾಯಿ ಬಾಣಿ, ರಾಜೇಸಾಬ ಬನ್ನಟ್ಟಿ , ಅಜೀಜ ಪಠಾಣ, ಶಾಂತು ಕಟ್ಟಿಮನಿ, ಶಿವಸಂಗಪ್ಪ ಬಿರಾದಾರ, ಬಸಪ್ಪ ಜಗಲಿ, ಅಬ್ದುಲರಜಾಕ ತಮದಡ್ಡಿ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.