ಪ್ಲಾಸ್ಟಿಕ್ ನೀಡಿ ಸಕ್ಕರೆ ಪಡೆಯಿರಿ

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುವ ವಿಶಿಷ್ಟ ಕಾರ್ಯಕ್ರಮ

0

Gummata Nagari : Bijapur News

ಬಿಜಾಪುರ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿಜಿ ಅವರ ಜಯಂತೋತ್ಸವ ಪ್ರಯುಕ್ತ ಬಿಜಾಪುರದ ವಿ.ವ. ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಯುಕ್ತ `ಪ್ಲಾಸ್ಟಿಕ್ ನೀಡಿ ಸಕ್ಕರೆ ಪಡೆಯಿರಿ’ ಎಂಬ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು, ಶಿಕ್ಷಕರು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. 5 ಕ್ವಿಂಟಲ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿ ಪ್ರತಿಯಾಗಿ 5 ಕ್ವಿಂಟಾಲ್ ಸಕ್ಕರೆಯನ್ನು ವಿತರಿಸಲಾಯಿತು.

ಈ ಅಭಿಯಾನಕ್ಕೆ ಚಾಲನೆ ನೀಡಿದ ವಿ.ವ. ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ ಮಾತನಾಡಿ, ಎಲ್ಲವನ್ನು ಕಲಿತ ಮಾನವ ಬದುಕುವುದನ್ನು ಮಾತ್ರ ಕಲಿಯಲಿಲ್ಲ ಎನ್ನುವಂತೆ ಇಂದು ನಮಗೆ ಬದುಕು ನೀಡಿದ ಪರಿಸರವನ್ನೇ ಹಾಳು ನಾವೇ ಮಾಡುತ್ತಲಿದ್ದೆವೆ ಎಂದು ವಿಷಾದಿಸಿದರು. ಆ ಕಾರಣದಿಂದ ಮಾನವನ ಜೀವನ ಡೋಲಾಯಮಾನವಾಗುತ್ತಲಿದೆ. ಯಾವಾಗ ಮಾನವನಲ್ಲಿ ಪರಿವರ್ತನೆ ಆಗುತ್ತದೆಯೋ ಆವಾಗ ಮಾತ್ರ ಬದುಕು ಗಟ್ಟಿಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಮಾನವನು ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಸದೃಢ ದೇಶವನ್ನು ಕಟ್ಟಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ.ವ. ಸಂಘದ ಅಧ್ಯಕ್ಷ ರಾಜೇಶ ದರಬಾರ ಮಾತನಾಡಿ, ಕಾಡುಗಳನ್ನು ನಾಶ ಮಾಡಿ ಹಸಿರುಮನೆ ಪರಿಣಾಮವನ್ನು ಎದುರಿಸಿದರೆ, ಮಾನವ ಕಾರ್ಖಾನೆಗಳ ವಿಷವನ್ನು ವಾತವರಣಕ್ಕೆ ಹರಿಬಿಟ್ಟು ಶುದ್ಧ ಆಮ್ಲಜನಕವಿಲ್ಲದೆ ಒದ್ದಾಡುತ್ತಿದ್ದಾನೆ. ಆದರೂ ಬುದ್ದಿ ಕಲಿಯದ ಮನುಷ್ಯ ಮತ್ತೆ ಮತ್ತೆ ಮಾಡಿದ ತಪ್ಪನ್ನೇ ಮಾಡುತ್ತ ಅಳಿವಿನ ದಾರಿಯಲ್ಲಿ ದಾಪುಗಾಲಿಡುತ್ತಲಿದ್ದಾನೆ ಎಂದು ವಿಷಾದಿಸಿದರು. ವಿಷಕಾರಿಯಾದ ಪ್ಲಾಸ್ಟಿಕ್‌ನ್ನು ಬಳಕೆ ಮಾಡುತ್ತ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುವುದಲ್ಲದೆ ಪ್ರಾಣಿಗಳ ಬದುಕಿಗೂ ಕುತ್ತು ತರುತ್ತಿರುವುದು ನಿಜಕ್ಕೂ ಭಯಾನಕವಾದುದು ಎಂದರು. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸಕ್ಕರೆಯನ್ನು ನೀಡುವ ಕಾರ್ಯವನ್ನು ಈ ವರ್ಷವು ಮಾಡುತ್ತಲಿದ್ದೇವೆ. ಈ ಕಾರ್ಯಕ್ರಮದ ಮೂಲಕವಾಗಿ ಮಹಾತ್ಮಾ ಗಾಂಧೀಜಿ ಕಂಡ ಕನಸು ನನಸು ಮಾಡುವ ದಾರಿಯಲ್ಲಿ ಸಾಗುತ್ತಿರುವ ತೃಪ್ತಿ ನಮಗಿದೆ ಎಂದರು.

ವಿ.ವ. ಸಂಘದ ಸಮನ್ವಯ ಅಧಿಕಾರಿ ಡಾ.ವಿನಾಯಕ ಗ್ರಾಮಪುರೋಹಿತ ಮಾತನಾಡಿದರು. ನ್ಯಾಯವಾದಿ ಕೆ.ಬಿ.ಪಾಟೀಲ, ಆಡಳಿತ ಮಂಡಳಿ ಸದಸ್ಯ ರಾಕೇಶ ದರಬಾರ, ಮೀನಾಕ್ಷಿ ಥಿಟೆ, ಬಿ.ಎಚ್. ಕುಲಕರ್ಣಿ, ಎಸ್.ಸಿ.ಮಮದಾಪುರ, ವಿ.ಕೆ. ಗುಜರಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.